ಪೆರಿಯಡ್ಕ ಮಧುವನದಲ್ಲಿ ‘ಮಧುರ ಮನಸು ಸ್ನೇಹಕೂಟ’

0

ಉಪ್ಪಿನಂಗಡಿ: ಇಲ್ಲಿನ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾಸೇವಾ ಸಂಘದ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಮಹಾಭಾರತ ಸರಣಿಯ ಕಾರ್ಯಕ್ರಮದಂಗವಾಗಿ ಪೆರಿಯಡ್ಕ ಮಧುವನದಲ್ಲಿ ‘ಮಧುರ ಮನಸು ಸ್ನೇಹಕೂಟ’ವೆಂಬ ವಿಶೇಷ ಕಾರ್ಯಕ್ರಮ ಜರಗಿತು.


ಕಾರ್ಯಕ್ರಮದ ಸಂಯೋಜಕ ಕೆ. ಮಹಾಲಿಂಗೇಶ್ವರ ಭಟ್ ಅವರ ತೀರ್ಥರೂಪರಾದ ದಿ. ತಿರುಮಲೇಶ್ವರ ಭಟ್ ಕಟ್ಟದಮೂಲೆಯವರ ಸಂಸ್ಮರಣೆಯನ್ನು ನೀರ್ಚಾಲು ಸುಬ್ರಹ್ಮಣ್ಯ ಮಧ್ಯಸ್ಥರು ಮಾಡಿದರು.


ಪ್ರೊ. ವಿ. ಬಿ ಅರ್ತಿಕಜೆ, ಭಾಗವತರಾದ ಗೋವಿಂದ ನಾಯಕ್ ಪಾಲೆಚ್ಚಾರು, ಡಿ.ಕೆ.ಆಚಾರ್ಯ ಅಲಂಕಾರು, ಶ್ರೀ ಕಾಳಿಕಾಂಬ ಯಕ್ಷಗಾನ ಸೇವಾ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಅವರಿಗೆ ಸ್ಮೃತಿ ಗೌರವ ಪ್ರದಾನ ಮಾಡಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಲಾವಿದ ಮಹಾಲಿಂಗೇಶ್ವರ ಭಟ್ ಅವರನ್ನು ಶ್ರೀ ಕಾಳಿಕಾಂಬ ಯಕ್ಷಗಾನ ಸೇವಾ ಸಂಘದ ವತಿಯಿಂದ ಸನ್ಮಾನಿಸಲಾಯಿತು.


ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ಡಾ.ವಸಂತಕುಮಾರ ತಾಳ್ತಜೆ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಉಮೇಶ್ ಶೆಣೈ, ಪ್ರಮುಖರಾದ ಶ್ರೀಧರ ಭಟ್ ಕೆ, ಸಾವಿತ್ರಿಬಾಯಿ, ಶೋಭಾ ಬಿ ಆನಂದ್, ಹರಿಕಿರಣ್ ಕೊಯಿಲ, ಬಿ. ಸುಬ್ರಮಣ್ಯ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಶ್ರೀಮತಿ ದುರ್ಗಾಮಣಿ ಸ್ವಾಗತಿಸಿ, ವಂದಿಸಿದರು. ಹರೀಶ್ ಆಚಾರ್ಯ ಬಾರ್ಯ ಸನ್ಮಾನ ಪತ್ರ ವಾಚಿಸಿದರು. ವೈಶಾಲಿ ಕಾರ್ಯಕ್ರಮ ನಿರೂಪಿಸಿದರು.


ಈ ಸಂದರ್ಭ ಶ್ರೀ ಮಹಾಭಾರತ ಸರಣಿಯ 47ನೇ ಕಾರ್ಯಕ್ರಮವಾಗಿ ‘ಪಾರ್ಥಸಾರಥ್ಯ ಮತ್ತು ಭಕ್ತ ಸುಧನ್ವ’ ತಾಳಮದ್ದಳೆಯು ಪೆರಿಯಡ್ಕ ಸಾಂಸ್ಕೃತಿಕ ಕಲಾವೇದಿಕೆಯ ಸಹಯೋಗದಲ್ಲಿ ಜರಗಿತು.


ಅರ್ಥಧಾರಿಗಳಾಗಿ ದಿವಾಕರ ಆಚಾರ್ಯ ಗೇರುಕಟ್ಟೆ(ಶ್ರೀ ಕೃಷ್ಣ 1), ಶ್ರೀಧರ ಎಸ್.ಪಿ. ಸುರತ್ಕಲ್ (ಶ್ರೀ ಕೃಷ್ಣ 2), ಸಂಜೀವ ಪಾರೆಂಕಿ(ಅರ್ಜುನ), ಗುಡ್ಡಪ್ಪ ಬಲ್ಯ(ಕೌರವ 1), ಮಹಾಲಿಂಗೇಶ್ವರ ಭಟ್-(ಕೌರವ-2), ಶ್ರೀಮತಿ ಗೀತಾ ಕುದ್ದಣ್ಣಾಯ (ಬಲರಾಮ ), ಗಣರಾಜ ಕುಂಬ್ಳೆ (ಸುಧನ್ವ1), ದಿವಾಕರ ಆಚಾರ್ಯ ಹಳೆನೇರೆಂಕಿ(ಸುಧನ್ವ2 ), ಅಂಬಾ ಪ್ರಸಾದ ಪಾತಾಳ(ಪ್ರಭಾವತಿ), ಜಯರಾಮ ನಾಲ್ಗುತ್ತು(ಶ್ರೀಕೃಷ್ಣ), ಹರೀಶ್ ಬಾರ್ಯ(ಅರ್ಜುನ), ನಾರಾಯಣ ಭಟ್ ಅಲಂಕಾರು (ಹಂಸಧ್ವಜ), ಬಾಲಕೃಷ್ಣ ಕೇಪುಳು(ಶಂಖ-ಲಿಖಿತ ), ಶ್ರುತಿ ವಿಸ್ಮಿತ್(ವೃಷಕೇತು) ಹಾಗೂ ಭಾಗವತರಾಗಿ ಗೋವಿಂದ ನಾಯಕ್ ಪಾಲೆಚ್ಚಾರು, ಪದ್ಮನಾಭ ಕುಲಾಲ್ ಇಳಂತಿಲ, ನಿತೀಶ್ ಕುಮಾರ್ ವೈ, ಸುರೇಶ್ ರಾವ್ ಬನ್ನೆಂಗಳ ಹಾಗೂ ಹಿಮ್ಮೇಳದಲ್ಲಿ ಮುರಳೀಧರ ಕಲ್ಲೂರಾಯ, ಗಣೇಶ್ ಭಟ್ ಬೆಳಾಲು, ಮೋಹನ ಕುಮಾರ್ ಶರವೂರು, ಶ್ರೀಪತಿ ಭಟ್ ಉಪ್ಪಿನಂಗಡಿ, ಪ್ರಚೇತ್ ಆಳ್ವ ಬಾರ್ಯ, ಶ್ರೀಹರಿ ನಗ್ರಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here