ಕಾವು: ಮಾಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ತಾಲೂಕುವಾರು ಅತ್ಯುತ್ತಮ ಗುಣಮಟ್ಟ ಸಂಘ ಪ್ರಶಸ್ತಿ

0

ಕಾವು: ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಒಕ್ಕೂಟ ಕೊಡಮಾಡುವ 2023-24ನೇ ಸಾಲಿನ ತಾಲೂಕುವಾರು ಅತ್ಯುತ್ತಮ ಗುಣಮಟ್ಟ ಸಂಘ ಪ್ರಶಸ್ತಿಯು ಈ ಬಾರಿಯೂ ಮಾಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಲಭಿಸಿದೆ.

ಆ ಮೂಲಕ ಸತತ 20ನೇ ಬಾರಿಗೆ ಮಾಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘವು ಅತ್ಯುತ್ತಮ ಗುಣಮಟ್ಟ ಸಂಘ ಪ್ರಶಸ್ತಿಯನ್ನು ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ. ಜತೆಗೆ 2023-24ನೇ ಸಾಲಿನ ಉತ್ತಮ ಗುಣಮಟ್ಟ ಸಂಘದ ಕಾರ್ಯದರ್ಶಿ ಪ್ರಶಸ್ತಿಯು ಮಾಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಲಭಿಸಿದೆ.

ಸೆ.18ರಂದು ಮಂಗಳೂರಿನಲ್ಲಿ ನಡೆದ ದ.ಕ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ಉಪಾಧ್ಯಕ್ಷ ಎಸ್.ಬಿ ಜಯರಾಮ ರೈ ಬಳಜ್ಜ, ನಿರ್ದೇಶಕ ನಾರಾಯಣ ಪ್ರಕಾಶ್‌ರವರು ಪ್ರಶಸ್ತಿ ಪ್ರದಾನ ಮಾಡಿದರು. ಸಂಘದ ಅಧ್ಯಕ್ಷ ಕೆ. ಚಂದ್ರಶೇಖರ ರಾವ್ ನಿಧಿಮುಂಡ ಮತ್ತು ಬಾಲಕೃಷ್ಣ ಕೆದಿಲಾಯರವರು ಪ್ರಶಸ್ತಿ ಸ್ವೀಕರಿಸಿದರು.

LEAVE A REPLY

Please enter your comment!
Please enter your name here