ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ ಮುಂದುವರಿಕೆ

0

ಪುತ್ತೂರು:ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳು ನಡೆಸುತ್ತಿರುವ ಅನಿರ್ದಿಷ್ಟ ಮುಷ್ಕರ ಮುಂದುವರಿದಿದ್ದು ಎರಡನೇ ದಿನವಾದ ಸೆ.27ರಂದು ಜಿಲ್ಲಾಧಿಕಾರಿ ಕಚೇರಿ ಬಳಿ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆದಿದೆ.ರಾಜ್ಯ ಸಂಘದ ಕರೆಯಂತೆ ಪುತ್ತೂರು ಮತ್ತು ಕಡಬ ತಾಲೂಕು ಗ್ರಾಮ ಆಡಳಿತಾಧಿಕಾರಿಗಳೂ ಸೆ.26ರಂದು ಅನಿರ್ಧಿಷ್ಠ ಮುಷ್ಕರ ಆರಂಭಿಸಿದ್ದರು.ಪುತ್ತೂರು ತಾಲೂಕು ಸಮಿತಿಯಿಂದ ತಾಲೂಕು ಆಡಳಿತ ಸೌಧದ ಮುಂಭಾಗ ಮತ್ತು ಕಡಬದಲ್ಲಿ ತಾಲೂಕು ಕಚೇರಿ ಎದುರು ಗ್ರಾಮ ಆಡಳಿತಾಧಿಕಾರಿಗಳು ಪ್ರತಿಭಟನೆ ನಡೆಸಿದ್ದರು.


ಗ್ರಾಮ ಆಡಳಿತಾಧಿಕಾರಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೆ.26ರಂದು ಗ್ರಾಮ ಆಡಳಿತಾಧಿಕಾರಿಗಳು ಅನಿರ್ಧಿಷ್ಠ ಮುಷ್ಕರ ಆರಂಭಿಸಿದ್ದಾರೆ.ಇದರಿಂದಾಗಿ ವಿವಿಧ ಸೇವೆಗಳು ವ್ಯತ್ಯಯಗೊಂಡಿದೆ.


ಮಂಗಳೂರುನಲ್ಲಿ ನಡೆದ ಎರಡನೇ ದಿನದ ಮುಷ್ಕರದ ಸಂದರ್ಭ ಅಪರ ಜಿಲ್ಲಾಧಿಕಾರಿ ಡಾ.ಸಂತೋಷ್ ಕುಮಾರ್ ಅವರ ಮೂಲಕ ರಾಜ್ಯ ಕಂದಾಯ ಸಚಿವರಿಗೆ ಮನವಿ ಸಲ್ಲಿಸಲಾಯಿತು.ಪುತ್ತೂರು ತಾಲೂಕು ಗ್ರಾಮ ಆಡಳಿತಾಽಕಾರಿಗಳ ಸಂಘದ ಅಧ್ಯಕ್ಷ ಉಮೇಶ್ ಕಾವಡಿ,ಗೌರವಾಧ್ಯಕ್ಷ ರಾಧಾಕೃಷ್ಣ,ಕಾರ್ಯದರ್ಶಿ ಜಯಚಂದ್ರ,ಉಪಾಧ್ಯಕ್ಷೆ ಸುಜಾತಕೃಷ್ಣ ಕುಮಾರ್ ರೈ, ಖಜಾಂಜಿ ಅಶ್ವಿನಿ,ಸಂಘಟನಾ ಕಾರ್ಯದರ್ಶಿ ಶರಣ್ಯ, ರಾಜ್ಯ ಪ್ರತಿನಿಧಿ ನರಿಯಪ್ಪ ಮಠದ್, ಕಡಬ ತಾಲೂಕು ಸಂಘದ ಅಧ್ಯಕ್ಷ ಶೇಷಾದ್ರಿ,ಉಪಾಧ್ಯಕ್ಷೆ ಶ್ರುತಿ,ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


ಮನವಿಗೆ ದೊರೆಯದ ಸ್ಪಂದನೆ:
ತಮ್ಮ ಬೇಡಿಕೆ ಈಡೇರಿಸುವಂತೆ ಗ್ರಾಮ ಆಡಳಿತಾಽಕಾರಿಗಳು ಆರಂಭದಲ್ಲಿ ಸಹಾಯಕ ಆಯುಕ್ತರು,ತಹಸಿಲ್ದಾರರಿಗೆ ಮನವಿ ಸಲ್ಲಿಸಿದ್ದರು.ಅದಾದ ಬಳಿಕ ಸಂಘದ ಪದಾಧಿಕಾರಿಗಳ ನಿಯೋಗ ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು.ಆದರೂ ಸರಕಾರ ತಮ್ಮ ಸಮಸ್ಯೆಗಳು ಮತ್ತು ಬೇಡಿಕೆಗಳ ಕುರಿತು ಗಮನ ಹರಿಸದೇ ಇದ್ದುದರಿಂದ ಸೆ.26ರಿಂದ ಅನಿಽಷ್ಟ ಮುಷ್ಕರ ಆರಂಭಿಸಿದ್ದಾರೆ.


ಪ್ರಮುಖ ಬೇಡಿಕೆಗಳು:
ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗೆ ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಿ ಆದೇಶ ನೀಡುವುದು,ಸುಸಜ್ಜಿತವಾದ ಕಚೇರಿ, ಮೊಬೈಲ್ ಫೋನ್, ಲ್ಯಾಪ್‌ಟಾಪ್ ಸೇರಿದಂತೆ ತಮಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು, ಸೇವಾ ವಿಷಯಗಳಿಗೆ ಸಂಬಂಽಸಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದು, ಕಂದಾಯ ಇಲಾಖೆಯ ನೌಕರರ ಸೇವಾ ವಿಷಯಗಳಾದ ಪ್ರೊಬೆಷನರಿ, ಟೈಮ್ ಬಾಂಡ್, ವೈದ್ಯಕೀಯ ವೆಚ್ಚದ ಮರುಪಾವತಿ, ಪದೋನ್ನತಿ ವಿಷಯಗಳಲ್ಲಿ ಸಕಾಲ ಮಾದರಿಯ ವಿಧಾನ ಅನುಸರಿಸುವುದು, ಅನ್ಯ ಇಲಾಖೆಯ ಕೆಲಸ ನಿರ್ವಹಿಸದಂತೆ ಸೂಕ್ತ ಆದೇಶ ನೀಡುವುದು, ರಾಜ್ಯದ ಗ್ರಾಮ ಸಹಾಯಕರಿಗೆ ಸೇವಾ ಭದ್ರತೆಯನ್ನು ಒದಗಿಸುವುದು, ಮನೆ ಹಾನಿ ಪ್ರಕರಣಗಳ ಜವಾಬ್ದಾರಿಯಿಂದ ಗ್ರಾಮ ಆಡಳಿತ ಅಧಿಕಾರಿಗಳನ್ನು ಕೈಬಿಡುವ ಬಗ್ಗೆ, ಪ್ರಯಾಣ ಭತ್ಯೆ ದರವನ್ನು ರೂ.500ರಿಂದ ರೂ.3 ಸಾವಿರ ರೂಪಾಯಿಗಳಿಗೆ ಹೆಚ್ಚಳ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳ ಕುರಿತು ಗ್ರಾಮ ಲೆಕ್ಕಾಧಿಕಾರಿಗಳ ರಾಜ್ಯ ಸಂಘದ ಮನವಿಯಲ್ಲಿ ತಿಳಿಸಲಾಗಿದೆ.ಗ್ರಾಮ ಆಡಳಿತಾಧಿಕಾರಿಗಳು ಎಲ್ಲಾ ಇಲಾಖೆಗಳಿಗೂ ಮಾತೃ ಇಲಾಖೆ. 36 ಇಲಾಖೆಗಳಿಗೆ ಜಾಗ ಮಂಜೂರುಗೊಳಿಸುವ ಗ್ರಾಮ ಆಡಳಿತಾಧಿಕಾರಿಗಳ ಕಚೇರಿಗೇ ಸ್ವಂತ ಜಾಗವಿಲ್ಲ.ಕಟ್ಟಡವೂ ಇಲ್ಲ.ಸರಕಾರದ ಹಲವಾರು ಯೋಜನೆಗಳನ್ನು ಗ್ರಾಮ ಮಟ್ಟದಲ್ಲಿ ಜನರಿಗೆ ತಲುಪಿಸುವಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಕಾರ್ಯ ಪ್ರಮುಖವಾಗಿದ್ದರೂ ನಮಗೆ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ.ಮೊಬೈಲ್ ಆಪ್, ಕಂಪ್ಯೂಟರ್‌ಗಳ ಮೂಲಕ ದಾಖಲಿಸಲು ಸೂಚಿಸಿದ್ದರೂ ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್, ಸ್ಕ್ಯಾನರ್, ಪ್ರಿಂಟರ್ ನೀಡದೇ ಮಹತ್ತರವಾದ ಕಾರ್ಯಗಳನ್ನು ಮಾಡಲು ಮೇಲಿಂದ ಮೇಲೆ ಒತ್ತಡ ಹಾಕುತ್ತಿರುವುದರಿಂದ ರಾಜ್ಯದ ಎಲ್ಲಾ ಗ್ರಾಮ ಆಡಳಿತಾಧಿಕಾರಿಗಳು ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ಮುಷ್ಕರ ನಿರತ ಗ್ರಾಮ ಆಡಳಿತಾಧಿಕಾರಿಗಳು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.


ಸೆ.30ರಂದು ಕಂದಾಯ ಸಚಿವರ ನೇತೃತ್ವದಲ್ಲಿ ಸಭೆ
ಗ್ರಾಮ ಆಡಳಿತಾಧಿಕಾರಿಗಳು ಎದುರಿಸುತ್ತಿರುವ ಸಮಸ್ಯೆ ಮತ್ತು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸರಕಾರಕ್ಕೆ ಮನವಿ ಸಲ್ಲಿಸಿದ್ದರೂ ಸರಕಾರ ಸ್ಪಂದಿಸದೇ ಇದ್ದುದರಿಂದ ಸೆ.26ರಿಂದ ರಾಜ್ಯವ್ಯಾಪಿಯಾಗಿ ಅನಿರ್ಧಿಷ್ಠ ಮುಷ್ಕರ ನಡೆಸುತ್ತಿದ್ದೇವೆ.ಈ ಮುಷ್ಕರಕ್ಕೆ ಸರಕಾರಿ ನೌಕರರ ಸಂಘ,ರೈತ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳವರೂ ಬೆಂಬಲ ವ್ಯಕ್ತಪಡಿಸಿದ್ದಾರೆ.ಮುಷ್ಕರ ಮುಂದುವರಿಯುತ್ತಿದೆ.ಮುಷ್ಕರಕ್ಕೆ ಇದೀಗ ಸರಕಾರ ಸ್ಪಂದಿಸಿದ್ದು ಸೆ.30ರಂದು ಕಂದಾಯ ಸಚಿವರು ನಮ್ಮ ಸಂಘದ ರಾಜ್ಯ ಪದಾಧಿಕಾರಿಗಳ ಸಭೆ ಕರೆದಿದ್ದಾರೆ.ಮುಷ್ಕರ ಮುಂದುವರಿಸುವುದು ಇಲ್ಲವೇ ಕೈಬಿಡುವ ಕುರಿತು ಸಚಿವರ ಸಭೆಯ ಬಳಿಕ ತೀರ್ಮಾನವಾಗಲಿದೆ-

ಉಮೇಶ್ ಕಾವಡಿ, ಅಧ್ಯಕ್ಷ, ಗ್ರಾಮ ಆಡಳಿತಾಧಿಕಾರಿಗಳ ಸಂಘ,ಪುತ್ತೂರು

LEAVE A REPLY

Please enter your comment!
Please enter your name here