ಉಬಾರ್ ಚೆಸ್ ಆಕಾಡೆಮಿ ವತಿಯಿಂದ ಅಂತರ್ ಜಿಲ್ಲಾ ಚೆಸ್ ಸ್ಫರ್ಧೆ- ಉಬಾರ್ ಚೆಸ್ ಟ್ರೋಫಿ 2024

0

ಚೆಸ್ ನಲ್ಲಿ ಪ್ರಯೋಗಿಸುವ ಚತುರತೆಯನ್ನು ನಿಮ್ಮ ಜೀವನದಲ್ಲೂ ಪ್ರಯೋಗಿಸಿ – ಅತಿ ವಂ.ಲಾರೆನ್ಸ್ ಮಸ್ಕರೇನಸ್

ಪುತ್ತೂರು: ಇಲ್ಲಿನ ಮಾಯ್ ದೇ ದೇವುಸ್ ಚರ್ಚ್ ಸಭಾಂಗಣದಲ್ಲಿ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳ ಅಂತರ್ ಜಿಲ್ಲಾ ರ್‍ಯಾಪಿಡ್ ಚೆಸ್ ಸ್ಪರ್ಧೆ, ‘ಉಬಾರ್ ಚೆಸ್ ಟ್ರೋಫಿ 2024’ ಉಬಾರ್ ಚೆಸ್ ಆಕಾಡೆಮಿ ಪುತ್ತೂರು ಇದರ ವತಿಯಿಂದ ಮಾಯ್ ದೇ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ ದಕ್ಷಿಣ ಕನ್ನಡ ಚೆಸ್ ಆಕಾಡೆಮಿ ಇದರ ಸಹಭಾಗಿತ್ವದಲ್ಲಿ ಅ.4ರಂದು ನಡೆಯಿತು.

ಅಧ್ಯಕ್ಷತೆಯೊಂದಿಗೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಯ್ ದೇ ದೇವುಸ್ ಶಿಕ್ಷಣ ಸಂಸ್ಥೆಗಳು ಪುತ್ತೂರು ಇದರ ಸಂಚಾಲಕರಾದ ಅತಿ ವಂ.ಲಾರೆನ್ಸ್ ಮಸ್ಕರೇನಸ್ , ಚೆಸ್ ಚತುರತೆಯ ಆಟ, ಚೆಸ್‌ನಲ್ಲಿ ನೀವು ಚತುರತೆಯನ್ನು ಪ್ರಯೋಗಿಸುವಂತೆಯೇ ನಿಮ್ಮ ಜೀವನದಲ್ಲೂ ಚತುರತೆ ಪ್ರಯೋಗಿಸಿ, ನಿಮ್ಮ ಅಭಿರುಚಿಗಳಿಗೆ ಪೋಷಕರು ಪ್ರೋತ್ಸಾಹಿಸುತ್ತಿದ್ದಾರೆ, ಅದರ ಸದುಪಯೋಗ ಪಡೆದುಕೊಂಡು ಉತ್ತಮ ಮೌಲ್ಯಗಳ ಮೂಲಕ ಹೆತ್ತವರಿಗೂ ಸಮಾಜಕ್ಕೂ ಕೊಡುಗೆ ನೀಡಬೇಕು ಎಂಬುವುದಾಗಿ ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು. ಉಬಾರ್ ಚೆಸ್ ಅಕಾಡೆಮಿಯ ನಿರ್ದೇಶಕ ಜಗನ್ನಾಥ ಅಡಪ ಪ್ರಾಸ್ತಾವಿಕವಾಗಿ ಮಾತನಾಡಿ ಚೆಸ್ ಕ್ರೀಡೆ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಿಸಿದರೂ ಗ್ರಾಮೀಣ ಮಟ್ಟದಲ್ಲಿ ಹೆಚ್ಚಿನ ಮನ್ನಣೆ ಗಳಿಸುತ್ತಿಲ್ಲ, ಗ್ರಾಮೀಣ ಮಟ್ಟದಲ್ಲೂ ಚೆಸ್ ಕ್ರೀಡೆಯು ಮುಂದಿನ ದಿನಗಳಲ್ಲಿ ಹೆಚ್ಚಿನ ಮನ್ನಣೆ ಗಳಿಸಲಿ ಎಂಬುವುದಾಗಿ ಹಾರೈಸಿದರು.


ಪಿಎಂ ಶ್ರೀ ಜವಹಾರ್ ನವೋದಯ ವಿದ್ಯಾಲಯ ಮುಡಿಪು ಇದರ ಪ್ರಾಂಶುಪಾಲ ಪಿ. ರಾಜೇಶ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ ಉಬಾರ್ ಚೆಸ್ ಅಕಾಡೆಮಿಯ ಮೂಲಕ ಪಳಗಿ ರಾಷ್ಟ್ರೀಯ ಮಟ್ಟದಲ್ಲೂ ಹೆಸರು ಗಳಿಸಿದ ಆಟಗಾರರಿದ್ದಾರೆ. ಈ ಅಕಾಡೆಮಿಯ ಕಾರ್ಯ ನಿಜಕ್ಕೂ ಶ್ಲಾಘನೀಯವೆಂದರು. ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಅಕಾಡೆಮಿಯ ಅಧ್ಯಕ್ಷ ರಮೇಶ್ ಕೋಟೆ, ವಾಣಿಜ್ಯೋದ್ಯಮಿ ಗತ್ ರಾಮ್, ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಸಂಚಾಲಕ ಚಂದ್ರಶೇಖರ್ ನಾಯರ್ ಮತ್ತಿತರರು ಆಟಗಾರರಿಗೆ ಶುಭ ಹಾರೈಸಿದರು.ಸು`ನ ವಸತಿಯುತ ಶಾಲೆ ಪುತ್ತೂರು ಆಡಳಿತಾಧಿಕಾರಿ ಶುಶಾಂತ್, ಸೈಂಟ್ ವಿಕ್ಟರ್‍ಸ್ ಶಾಲೆಯ ಬಾಲಕಿಯರ ವಿಭಾಗದ ಮುಖ್ಯಶಿಕ್ಷಕಿ ರೋಸಲಿನ್ ಲೋಬೋ ಉಪಸ್ಥಿತರಿದ್ದರು. ಮಾಯ್ ದೇ ದೇವುಸ್ ಪುತ್ತೂರು ಕನ್ನಡ ಮಾದ್ಯಮ ಶಾಲೆಯ ಮುಖ್ಯಶಿಕ್ಷಕಿ ಜಾನೆಟ್ ಡಿಸೋಜ ಸ್ವಾಗತಿಸಿ, ಕೆಪಿಎಸ್ ಕೆಯ್ಯೂರು ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ನವೀನ್ ಕುಮಾರ್ ನಿರೂಪಿಸಿ,ಸೈಂಟ್ ವಿಕ್ಟರ್‍ಸ್ ಆಂಗ್ಲ ಮಾದ್ಯಮ ಶಾಲಾ ಮುಖ್ಯಗುರು ಹ್ಯಾರಿ ಡಿಸೋಜ ವಂದಿಸಿದರು.

LEAVE A REPLY

Please enter your comment!
Please enter your name here