ನವರಾತ್ರಿ ಸಂಭ್ರಮಕ್ಕೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ `ಸ್ವರ್ಣ ಹಬ್ಬ’

0

ಪುತ್ತೂರು: ನವರಾತ್ರಿ ಎಂದರೆ ನವ ದುರ್ಗೆಯರ ಆರಾಧನೆಯ ಪುಣ್ಯ ಕ್ಷಣ. ‘ಯಾ ದೇವಿ ಸರ್ವ ಭೂತೇಶು ಲಕ್ಷ್ಮೀ ರೂಪೇಣ ಸಂಸ್ಥಿತಾ’ ಎಂದು ದೇವೀ ಸ್ತುತಿಯಲ್ಲಿ ಹೇಳಲಾಗುವಂತೆ, ಜಗನ್ಮಾತೆ ಲಕ್ಷ್ಮೀ ರೂಪದಲ್ಲಿಯೂ ಸ್ಥಿತಳಾಗಿರುತ್ತಾಳೆ. ಇದಕ್ಕೆ ಪೂರಕವಾಗಿ ಸ್ವರ್ಣೋದ್ಯಮ ಕ್ಷೇತ್ರದಲ್ಲಿ ಅಪರಂಜಿಯಂತೆ ಶೋಭಿಸುತ್ತಿರುವ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ನವರಾತ್ರಿ ಸಂಭ್ರಮದ ಪ್ರಯುಕ್ತ ಅಕ್ಟೋಬರ್ 07ರಿಂದ ಅಕ್ಟೋಬರ್ 13ರವರೆಗೆ ‘ಜಿ.ಎಲ್. ಸ್ವರ್ಣ ಹಬ್ಬ’ ನಡೆಯಲಿದೆ.

ಪ್ರತೀ ಹಬ್ಬಗಳು ಹಾಗೂ ವಿಶೇಷ ದಿನಾಚರಣೆಗಳ ಸಂದರ್ಭಗಳಲ್ಲಿ ತನ್ನ ಚಿನ್ನದ ಮಳಿಗೆಗಳಲ್ಲಿ ಗ್ರಾಹಕರಿಗಾಗಿ ವೈವಿಧ್ಯಮಯ ಆಫರ್ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಅದರಂತೆ, ಈ ಬಾರಿ ನವರಾತ್ರಿಯ ಶುಭ ಸಂದರ್ಭದಲ್ಲಿ ಪುತ್ತೂರಿನ ಮುಖ್ಯ ರಸ್ತೆಯಲ್ಲಿರುವ ಪ್ರತಿಷ್ಠಿತ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ `ಸ್ವರ್ಣ ಹಬ್ಬ’ ನಡೆಯಲಿದ್ದು, ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಖರೀದಿಸುವ ಗ್ರಾಹಕರಿಗೆ ಆಕರ್ಷಕ ಕೊಡುಗೆಗಳನ್ನು ಪ್ರಕಟಿಸಲಾಗಿದೆ.

ಷರತ್ತುಗಳು ಅನ್ವಯಿಸುವಂತೆ, ಚಿನ್ನಾಭರಣ ಖರೀದಿಗೆ ಪ್ರತೀ ಗ್ರಾಂ ಮೇಲೆ ರೂ.200ರವರೆಗೆ ರಿಯಾಯಿತಿ, ವಜ್ರಾಭರಣಗಳ ಮೇಲೆ ಪ್ರತೀ ಕ್ಯಾರೆಟ್ ಗೆ ರೂ. 5,000ದವರೆಗೆ ರಿಯಾಯಿತಿ ಹಾಗೂ ಬೆಳ್ಳಿಯ ಆಭರಣಗಳ ಮೇಲೆ ಪ್ರತೀ ಕೆ.ಜಿ.ಗೆ ರೂ.2,000ದವರೆಗೆ ರಿಯಾಯಿತಿಯನ್ನು ಗ್ರಾಹಕರು ಈ ಸಂದರ್ಭದಲ್ಲಿ ತಮ್ಮದಾಗಿಸಿಕೊಳ್ಳಬಹುದಾಗಿದೆ. ಇಷ್ಟು ಮಾತ್ರವಲ್ಲದೇ ಚಿನ್ನಾಭರಣಗಳ ಖರೀದಿಗೆ ವಿ.ಎ. 8%ನಿಂದ ಪ್ರಾರಂಭಗೊಳ್ಳಲಿದೆ.

ವಿಶ್ವಾಸ, ಪರಿಶುದ್ಧತೆ, ಪರಂಪರೆ, ನವನವೀನ ವಿನ್ಯಾಸ ಹಾಗೂ ಗ್ರಾಹಕ ಸೇವಾ ಬದ್ಧತೆಯೊಂದಿಗೆ ಆಭರಣ ಪ್ರಿಯರ ವಿಶ್ವಾಸಕ್ಕೆ ಪಾತ್ರವಾಗಿರುವ ಜಿ.ಎಲ್. ಅಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಗ್ರಾಹಕರ ಮನಸೂರೆಗೊಳ್ಳುವ ವಿನೂತನ ವಿನ್ಯಾಸದ ಚಿನ್ನದ ಆಭರಣಗಳು, ವಜ್ರಾಭರಣಗಳು, ಬೆಳ್ಳಿಯ ಆಭರಣಗಳು, ಆಂಟಿಕ್ ಆಭರಣಗಳು, ಅನ್ ಕಟ್ ಡೈಮಂಡ್ಸ್ ಹಾಗೂ ಅಮೂಲ್ಯ ಹರಳುಗಳ ಅತ್ಯಪೂರ್ವ ಸಂಗ್ರಹವಿದ್ದು, ಗ್ರಾಹಕರು ತಮ್ಮ ಮನಸ್ಸಿಗೊಪ್ಪುವ ಆಭರಣಗಳನ್ನು ಸಾವಕಾಶವಾಗಿ ವೀಕ್ಷಿಸಿ-ಯೋಚಿಸಿ ಖರೀದಿಸಲು ಅಗತ್ಯವಾಗಿರುವ ವಿಶಾಲವಾದ ಸ್ಥಳಾವಕಾಶ ಮತ್ತು ಉತ್ತಮ ಪಾರ್ಕಿಂಗ್ ವ್ಯವಸ್ಥೆ ಇದ್ದು, ಗ್ರಾಹಕರ ಚಿನ್ನಾಭರಣ ಖರೀದಿಯ ಸಮಯವನ್ನು ಇನ್ನಷ್ಟು ಆರಾಮದಾಯಕಗೊಳಿಸುವಂತಿದೆ.

ಆಧುನಿಕ ಮತ್ತು ಪಾರಂಪರಿಕ ಚಿನ್ನದ ಆಭರಣಗಳು, ವಜ್ರಾಭರಣಗಳಿಗೆ ಹಾಗೂ ಗುಣಮಟ್ಟದ ಚಿನ್ನಾಭರಣಗಳ ಮಾರಾಟದಲ್ಲಿ ಹೆಸರುವಾಸಿಯಾಗಿರುವ ಸಂಸ್ಥೆಯು ಸುಳ್ಯ, ಮೂಡಬಿದ್ರೆ, ಹಾಸನ ಹಾಗೂ ಕುಶಾಲನಗರದಲ್ಲಿ ಮಳಿಗೆಗಳನ್ನು ಹೊಂದಿದ್ದು, ಈ ಜಿ.ಎಲ್. ಸ್ವರ್ಣ ಹಬ್ಬ ಎಲ್ಲಾ ಮಳಿಗೆಗಳಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here