ಪುತ್ತೂರು:ಪುತ್ತೂರು ತೀಯಾ ಸಮಾಜ ಸೇವಾ ಸಮಿತಿಯ ವಾರ್ಷಿಕ ಮಹಾಸಭೆ, ದುರ್ಗಾಪೂಜೆ ಅ.13ರಂದು ಏಳ್ಮುಡಿ ಮಹಾದೇವಿ ಸಂಕೀರ್ಣದ ಸಭಾಂಗಣದಲ್ಲಿ ನಡೆಯಿತು.
ಮಹಾಸಭೆಯು ಗೋಪಾಲಕೃಷ್ಣ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.ಗೌರವಾಧ್ಯಕ್ಷ ಪಿ.ಕೆ.ನಾರಾಯಣ ಸಾಲ್ಮರ ಇವರು ಪ್ರಾಸ್ತಾವಿಕ ಮಾತನಾಡಿದರು.ಪ್ರಧಾನ ಕಾರ್ಯದರ್ಶಿ ಸಂತೋಷ್ ಮುಕ್ರಂಪಾಡಿರವರು, 2023- 24ನೇ ಸಾಲಿನ ವಾರ್ಷಿಕ ವರದಿಯನ್ನು ವಾಚಿಸಿ ಅಂಗೀಕಾರ ಪಡೆದುಕೊಂಡರು.ಕೋಶಾಧಿಕಾರಿ ಬಿ.ಎಂ.ಶ್ರೀಧರ್‌ರವರು 2023-24ನೇ ಸಾಲಿನ ಸಂಪೂರ್ಣ ಲೆಕ್ಕಾಚಾರವನ್ನು ಮಂಡಿಸಿ ಸಭೆಯಿಂದ ಅಂಗೀಕಾರವನ್ನು ಪಡೆದುಕೊಂಡರು.ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಸಮಾಜದ ಮಕ್ಕಳಾದ ಕುಮಾರಿ ವರ್ಷಿಣಿ ಮತ್ತು ಕುಮಾರಿ ಭೂಮಿ,ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ ಗಳಿಸಿದ ಕು.ಸಹನಾ ಇವರ ಪ್ರತಿಭೆಯನ್ನು ಗುರುತಿಸಿ ಪುರಸ್ಕರಿಸಲಾಯಿತು.ಈಜು ಸ್ಪರ್ಧೆಯಲ್ಲಿ ಅಂತರ್ರಾಷ್ಟ್ರೀಯ, ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ್ದ, ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುವ ಮಾ|ಅಮನ್ ರಾಜ್, ಕರಾಟೆಯಲ್ಲಿ ರಾಷ್ಟ್ರೀಯ ಮಟ್ಟಕ್ಕೆ ತಲುಪಿದ ಕುಮಾರಿ ದೃಶ್ಯ, ಬ್ಯಾಡ್ಮಿಂಟನ್‌ನಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಬಹುಮಾನ ಪಡೆದುಕೊಂಡಿರುವ ಮಾ|ಆದ್ಯನ್ ಹಾಗೂ ಕುಮಾರಿ ಅನ್ವಿಕ ಇವರಿಗೆ ಪ್ರೋತ್ಸಾಹ ಧನ ನೀಡಿ ಅಭಿನಂದಿಸಲಾಯಿತು.
ನೂತನ ಪದಾದಿಕಾರಿಗಳ ಆಯ್ಕೆ:
ಪ್ರಸ್ತುತ ಸಮಿತಿಯ ಪದಾಧಿಕಾರಿಗಳು ಎರಡು ವರ್ಷ ಸಂಪೂರ್ಣಗೊಳಿಸಿದ್ದು ಹೊಸಬರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳ ಸಮಿತಿ ರಚಿಸಲಾಯಿತು.ಗೌರವ ಸಲಹೆಗಾರರಾಗಿ ಪಿ.ಕೆ.ನಾರಾಯಣ ಸಾಲ್ಮರ,ಗೌರವಾಧ್ಯಕ್ಷರಾಗಿ ಗೋಪಾಲಕೃಷ್ಣ,ಅಧ್ಯಕ್ಷರಾಗಿ ಜೆ.ಪಿ.ಸಂತೋಷ್ ಕುಮಾರ್ ಮುರ,ಉಪಾಧ್ಯಕ್ಷರಾಗಿ ಯು.ಪಿ.ರಾಜೇಶ್,ಪುರುಷೋತ್ತಮ ಕೇಪುಳು,ಶಶಿಧರ್ ಬೆಳ್ಳಾರೆ, ರಾಜೇಶ್ ‘ಭೂಮಿ, ವಿಜಯ ಕುಮಾರ್, ಸತೀಶ್ ಕೆಎಸ್‌ಆರ್‌ಟಿಸಿ,ಪುರುಷೋತ್ತಮ ಕೊಯ್ಲ, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಮುಕ್ರಂಪಾಡಿ,ಜೊತೆ ಕಾರ್ಯದರ್ಶಿಯಾಗಿ ದೀಪಕ್,ಸಂಘಟನಾ ಕಾರ್ಯದರ್ಶಿಗಳಾಗಿ ಟಿ.ರಾಜೀವ, ರವೀಂದ್ರ,ರಾಘವ, ದಯಾನಂದ ಮುರ, ಆಶ್ಲೇಷ್, ಕೋಶಾಧಿಕಾರಿಯಾಗಿ ಬಿ.ಎಂ.ಶ್ರೀಧರ್ ಅವರನ್ನು ಆಯ್ಕೆ ಮಾಡಲಾಯಿತು.
ಮಹಿಳಾ ಘಟಕ:
ಗೌರವ ಸಲಹೆಗಾರರಾಗಿ ಸಂಧ್ಯಾ ರಾಜೇಶ್ ‘ಹಿಮ’,ಅಧ್ಯಕ್ಷರಾಗಿ ವಿ.ಪ್ರಭಾವತಿ,ಉಪಾಧ್ಯಕ್ಷರಾಗಿ ಶಶಿಕಲಾ ತೆಂಕಿಲ,ವತ್ಸಲಾ ಶ್ರೀಧರ್, ಅನಿತಾ ಪುರುಷೋತ್ತಮ,ಕಾರ್ಯದರ್ಶಿಯಾಗಿ ಅಶ್ವಿನಿ ರಾಜೇಶ್,ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಸುಶ್ಮಿತಾ, ಮಲ್ಲಿಕಾ ಗೋಪಾಲ್, ಸುವರ್ಣ ಚಂದ್ರಿಕಾರವರನ್ನು ಆಯ್ಕೆ ಮಾಡಲಾಯಿತು. ನೂತನ ಸಮಿತಿಯ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು.ಎಣ್ಮೂರು ನಿಂತಿಕಲ್ಲಿನ ಅಧ್ಯಕ್ಷ ಚಂದ್ರಶೇಖರ್, ಮಹಿಳಾ ಘಟಕದ ಕಾರ್ಯದರ್ಶಿ ಪ್ರಭಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದುರ್ಗಾಪೂಜೆ:
ದುರ್ಗಾಪೂಜೆಯೂ ನಡೆಯಿತು.ದುರ್ಗಾ ಪೂಜೆಯನ್ನು ಸಮಿತಿಯವರೆಲ್ಲರ ಪರವಾಗಿ ಸಂತೋಷ್ ಮುರ, ಹಂಸಾವತಿಯವರಿಂದ ಪುರೋಹಿತ ಜಗದೀಶ ಶಾಂತಿ ಅವರ ಮೂಲಕ ನೆರವೇರಿಸಲಾಯಿತು.ಸಮಿತಿಯ ಪದಾಧಿಕಾರಿಗಳು ದೀಪ ಬೆಳಗಿಸುವ ಮೂಲಕ ದುರ್ಗಾ ಪೂಜೆ ಪ್ರಾರಂಭಗೊಂಡಿತು. ಸುಮಾರು 100 ಮಂದಿ ಪೂಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಹನಾ ಪ್ರಾರ್ಥನೆ ಹಾಡಿದರು.ದಯಾನಂದ ಮುರ ಸ್ವಾಗತಿಸಿದರು.ಸಾಂಸ್ಕೃತಿಕ ಕಾರ್ಯದರ್ಶಿ ಸುವರ್ಣ ಚಂದ್ರಿಕಾ ವಂದನಾರ್ಪಣೆಗೈದರು.ಪುರುಷೋತ್ತಮ ಕೇಪುಳು ಇವರು ಕಾರ್ಯಕ್ರಮ ನಿರೂಪಿಸಿದರು.