ಬೆಟ್ಟಂಪಾಡಿ: ಸರಪಳಿಯಲ್ಲಿ ಬಿಗಿದು ಯುವನಕ ಕೊಲೆ ಪ್ರಕರಣ – ಆರೋಪಿಗಳಿಗೆ ಜಾಮೀನು ಮಂಜೂರು

0

ಪುತ್ತೂರು: ಬೆಟ್ಟಂಪಾಡಿ ಗ್ರಾಮದ ಕಾನುಮೂಲೆ ಎಂಬಲ್ಲಿ ನಾಯಿಯನ್ನು ಕಟ್ಟಿ ಹಾಕುವ ಸರಪಳಿಯನ್ನು ಬಿಗಿದು ಯುವಕನೋರ್ವನನ್ನು ಕೊಲೆ ಮಾಡಿರುವ ಪ್ರಕರಣದ ಆರೋಪಿಗಳಿಗೆ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಕಾನುಮೂಲೆ ಚೇತನ್ ಕುಮಾರ್(33ವ.)ಕೊಲೆಯಾದವರು. ಘಟನೆಗೆ ಸಂಬಂಧಿಸಿ ಮೃತನ ತಾಯಿ ಉಮಾವತಿ ಕೆ. ಶೆಟ್ಟಿ ಮತ್ತು ನೆರೆ ಮನೆಯ ಇಸುಬು ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಅವರ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ಆರೋಪಿ ಉಮಾವತಿ ಅವರ ಪರ ವಕೀಲರಾದ ಶಂಭು ಭಟ್ ಮತ್ತು ಆರೋಪಿ ಇಸುಬು ಅವರ ಪರ ವಕೀಲರಾದ ಮಹೇಶ್ ಕಜೆ ವಾದಿಸಿದರು.

LEAVE A REPLY

Please enter your comment!
Please enter your name here