ಉಪ್ಪಿನಂಗಡಿ: ಕಾರು ಹಾಗೂ ಆಟೋ ರಿಕ್ಷಾದ ಮಧ್ಯೆ ಅಪಘಾತ ಸಂಭವಿಸಿ ಆಟೋ ರಿಕ್ಷಾದಲ್ಲಿದ್ದ ಇಬ್ಬರು ಸಣ್ಣ ಪ್ರಮಾಣದ ಗಾಯಗೊಂಡು ಅಪಾಯದಿಂದ ಪಾರಾದ ಘಟನೆ ಅ.29ರಂದು ಇಲ್ಲಿನ 34 ನೆಕ್ಕಿಲಾಡಿಯಲ್ಲಿ ನಡೆದಿದೆ.
ಉಪ್ಪಿನಂಗಡಿ ಕಡೆಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಪೆರ್ನೆ ಕಡೆ ಸಾಗುತ್ತಿದ್ದ ನಝೀರ್ ಜೋಗಿಬೆಟ್ಟು ಎಂಬವರ ಆಟೋ ರಿಕ್ಷಾಕ್ಕೆ ಪುತ್ತೂರು ಕಡೆಯಿಂದ ಬಂದ ಕಾರು ಉಪ್ಪಿನಂಗಡಿ ಕಡೆ ಹೋಗಲು ತಿರುವು ಪಡೆದು ರಾಷ್ಟ್ರೀಯ ಹೆದ್ದಾರಿಗೆ ಬಂದಾಗ ಈ ಅಪಘಾತ ಸಂಭವಿಸಿದೆ.
ರಿಕ್ಷಾದಲ್ಲಿ ಇಬ್ಬರು ಪ್ರಯಾಣಿಕರಿದ್ದು, ಅವರು ಅಲ್ಪ ಪ್ರಮಾಣದ ಗಾಯಗೊಂಡು, ಉಪ್ಪಿನಂಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮರಳಿದ್ದಾರೆ. ಗಾಯಾಳುಗಳನ್ನು ಅಲ್ಲಿಯೇ ಇದ್ದ ಆಟೋ ಚಾಲಕ ಕಲಂದರ್ ಶಾಫಿ ತಕ್ಷಣ ಆಸ್ಪತ್ರೆಗೆ ಕರೆತರುವಲ್ಲಿ ನೆರವಾದರು. ಅಪಘಾತದಿಂದ ರಿಕ್ಷಾದ ಒಂದು ಬದಿ ಜಖಂಗೊಂಡಿದೆ.