ಆರ್.ಎಸ್.ಎಸ್. ಸಾಮರಸ್ಯ ವಿಭಾಗದಿಂದ ತುಡರ್ ಕಾಲೋನಿಗಳಿಗೆ ಸಾಮರಸ್ಯದ ಜೋತಿ ಬೆಳಗಿಸುವ ಕಾರ್ಯಕ್ರಮ

0

ಪುತ್ತೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ ಇದರ ಸಾಮರಸ್ಯ ವಿಭಾಗದ ವತಿಯಿಂದ ಪುತ್ತೂರಿನಲ್ಲಿ ಸುಮಾರು 11 ಕಡೆ ಕಾಲೋನಿಗಳಲ್ಲಿ ತುಡರ್ ಸಾಮರಸ್ಯದ ಜ್ಯೋತಿ ಬೆಳಗಿಸುವ ಕಾರ್ಯಕ್ರಮ ಕ್ಜೆ ನ.3ರಂದು ಸಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು.


ಸಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರು ಶ್ರೀ ದೇವರ ನಂದಾ ದೀಪದಿಂದ 11 ದೀಪಗಳಿಗೆ ಬೆಳಕನ್ನು ಪ್ರಜ್ವಲಿಸಿ ತುಡರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಸಾಮರಸ್ಯ ವಿಭಾಗ ರವೀಂದ್ರ ಪಿ, ದೇವಳದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಉಪನ್ಯಾಸಕ ಡಾ.ರವೀಶ ಪಡುಮಲೆ, ಎಸ್ ಅಪ್ಪಯ್ಯ ಮಣಿಯಾಣಿ, ಅಶೋಕ್ ಕುಂಬ್ಳೆ, ಶೇಖರ್ ಬ್ರಹ್ಮನಗರ, ನ್ಯಾಯವಾದಿ ಶಿವಪ್ರಸಾದ ಇ, ರವೀಂದ್ರ ರೈ ನುಳಿಯಾಲು, ಸುಜಿತ್, ಸಂತೋಷ್ ಬೋನಂತಾಯ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಪ್ರಸಾದ್ ಕಲ್ಲಿಮಾರು, ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮೀ ಶಗ್ರಿತ್ತಾಯ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಪುತ್ತೂರಿನ ಶೇವಿರೆ, ಕಾರೆಕ್ಕಾಡು, ಕಲ್ಲೇಗ, ಕರ್ಮಲ, ಉರ್ಲಾಂಡಿ, ಮೊಟ್ಟೆತ್ತಡ್ಕದ ಮಣ್ಣಾಪು, ಕುರಿಯ, ಆನೆಮಜಲು, ಬ್ರಹ್ಮನಗರ, ಬೀರಿಗ ಕಾಲೋನಿಗಳಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರು ತೆರಳಿ ತುಡರ್ ಕಾರ್ಯಕ್ರಮ ನೆರವೇರಿಸಿದರು.

LEAVE A REPLY

Please enter your comment!
Please enter your name here