ನಿಡ್ಪಳ್ಳಿ:ನಿಡ್ಪಳ್ಳಿ ಗುತ್ತು ಚಾವಡಿಯಲ್ಲಿ ದೀಪಾವಳಿ ಪ್ರಯುಕ್ತ ಹುಲಿ ಭೂತ ದೈವದ ಪುದ್ವಾರ್ ಮೆಚ್ಚಿ ನೇಮೋತ್ಸವ ನ.3 ರಂದು ನಡೆಯಿತು.
ನ. 2 ರಂದು ಶನಿವಾರ ಬೆಳಿಗ್ಗೆ ಗಣಪತಿ ಹವನ ನಂತರ ಕ್ಷೇತ್ರದ ತಂತ್ರಿಗಳ ನೇತೃತ್ವದಲ್ಲಿ ಗುತ್ತು ಚಾವಡಿಯಲ್ಲಿ ಕದಿರು ತುಂಬಿಸುವ ಕಾರ್ಯಕ್ರಮ ನಡೆಯಿತು.ನಂತರ ದೈವಗಳ ಶುದ್ದಿ ಕಲಶ ನಂತರ ದೀಪಾವಳಿ ಪ್ರಯುಕ್ತ ದೈವಗಳಿಗೆ ತಂಬಿಲ ಸೇವೆ ನಡೆಯಿತು. ಮಧ್ಯಾಹ್ನ ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಿತು.
ಮಧ್ಯಾಹ್ನ ಪಲ್ಲಕ್ಕಿ ಸಹಿತ ಗುತ್ತು ಚಾವಡಿಯಿಂದ ದೈವಗಳ ಭಂಡಾರ ಹೊರಟು ಮುಂಡೂರು ಸಣ್ಣ ಉಳ್ಳಾಕುಲು ಚಾವಡಿಯಲ್ಲಿ ತಂಬಿಲ ಸೇವೆ ನಡೆದ ನಂತರ ಉಳ್ಳಾಕುಲು ಮಾಡಕ್ಕೆ ದೈವಗಳ ಭಂಡಾರ ಬಂದು ದೈವಗಳಿಗೆ ತಂಬಿಲ ಸೇವೆ ನಡೆಯಿತು.
ರಾತ್ರಿ ಗುತ್ತು ಚಾವಡಿಯಲ್ಲಿ ಬಲೀಂದ್ರ ಪೂಜೆ ನಂತರ ಉಪಾಹಾರ- ಅನ್ನಸಂತರ್ಪಣೆ ನಡೆಯಿತು.ರಾತ್ರಿ ಗುತ್ತು ಚಾವಡಿಯಲ್ಲಿ ಹುಲಿಭೂತದ ಭಂಡಾರ ತೆಗೆದು ನಂತರ ಮುಂಡೂರು ಸಣ್ಣ ಉಳ್ಳಾಕುಲು ದೈವಸ್ಥಾನದಲ್ಲಿ ತಂಬಿಲ ಸೇವೆ ನಡೆಯಿತು.
ನ. 3 ರಂದು ಗುತ್ತು ಚಾವಡಿಯಲ್ಲಿ ಹುಲಿಭೂತಕ್ಕೆ ಪುದ್ವಾರ್ ಮೆಚ್ಚಿ ನೇಮೋತ್ಸವ ನಡೆದು ಮಧ್ಯಾಹ್ನ ದೈವದ ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಿತು. ಅನುವಂಶಿಕ ಆಡಳಿತ ಮೊಕ್ತೇಸರ ಪ್ರವೀಣ ಎನ್.ಆರಿಗ ನಿಡ್ಪಳ್ಳಿ ಗುತ್ತು, ಪ್ರಮೋದ್ ಆರಿಗ ನಿಡ್ಪಳ್ಳಿ ಗುತ್ತು ಹಾಗೂ ಬಾರಿಕೆ ಮನೆಯವರು ಮತ್ತು ಊರ ಪರವೂರ ಭಕ್ತಾದಿಗಳು ಪಾಲ್ಗೊಂಡರು.