ಕಾಂಗ್ರೆಸ್ ವಲಯಾಧ್ಯಕ್ಷರಿಂದ ಬಿಜೆಪಿ ಸದಸ್ಯತ್ವ ಅಭಿಯಾನದ ವಿಡಿಯೋ ಚಿತ್ರೀಕರಣ- ಬಿಜೆಪಿ ಕಾರ್ಯಕರ್ತರ ಆಕ್ಷೇಪ,ಮಾತಿನ ಚಕಮಕಿ:ಅಭಿಯಾನ ಮುಂದುವರಿಕೆ

0

ಪುತ್ತೂರು:ಪುತ್ತೂರು ಸೋಮವಾರದ ಸಂತೆಯಲ್ಲಿ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನ ಸಂದರ್ಭ ಬೆಳಗ್ಗಿನಿಂದ ಮಧ್ಯಾಹ್ನದ ತನಕ ಅಭಿಯಾನ ಮಾಡಲೆಂದು ನಗರಸಭೆ ಕಚೇರಿ ಬಳಿ ಕೌಂಟರ್ ಹಾಕಿ ಅಭಿಯಾನ ನಡೆಸುತ್ತಿದ್ದ ಸಂದರ್ಭ ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷರು ಅಭಿಯಾನದ ವೀಡಿಯೋ ಚಿತ್ರೀಕರಣ ಮಾಡಿದ್ದು ಬಿಜೆಪಿ ಕಾರ್ಯಕರ್ತರು ಇದಕ್ಕೆ ಆಕ್ಷೇಪಿಸಿದ ವೇಳೆ ಅವರೊಳಗೆ ಮಾತಿನ ಚಕಮಕಿ ನಡೆದ ಘಟನೆ ನ.11ರಂದು ನಡೆದಿದೆ.


ನಗರಸಭೆಯ ಆವರಣ ಗೋಡೆ ಬದಿಯಲ್ಲಿ ಶಾಮಿಯಾನ ಅಳವಡಿಸಿ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಯುತ್ತಿತ್ತು.ಈ ಅಭಿಯಾನದಲ್ಲಿ ಮೋದಿ ಟೀಯನ್ನು ಸಾರ್ವಜನಿಕರಿಗೆ ನೀಡಲಾಗುತ್ತಿತ್ತು.ಇದನ್ನು ಗಮಸಿದ ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ, ಸಾಮಾಜಿಕ ಜಾಲತಾಣದ ಪ್ರಮುಖರೂ ಆಗಿರುವ ಸುಪ್ರೀತ್ ಕಣ್ಣರಾಯ ಅವರು ವೀಡಿಯೋ ಚಿತ್ರೀಕರಣ ಮಾಡಿದ್ದರೆನ್ನಲಾಗಿದೆ.ಬಿಜೆಪಿ ಕಾರ್ಯಕರ್ತರು ಇದಕ್ಕೆ ಆಕ್ಷೇಪಿಸಿದಾಗ ಅವರೊಳಗೆ ಮಾತಿನ ಚಕಮಕಿ ನಡೆದಿದೆ.ಇದೇ ವೇಳೆ ಅಲ್ಲಿಗೆ ಆಗಮಿಸಿದ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಅವರು ಸುಪ್ರೀತ್ ಕಣ್ಣಾರಾಯ ಅವರ ಪರವಾಗಿ ಮಾತನಾಡಿದ್ದರು.ಚರ್ಚೆ, ಚಕಮಕಿ ಮುಂದುವರಿಯಿತಾದರೂ ಯಾವುದೇ ಅಹಿತಕರ ಘಟನೆ ನಡೆಯದೆ ಪರಿಸ್ಥಿತಿ ಬಳಿಕ ತಿಳಿಯಾಯಿತು ಎಂದು ವರದಿಯಾಗಿದೆ.

ಪುತ್ತೂರು ಬಿಜೆಪಿ ಶಾಕ್ಸ್.. ಅಶೋಕ್ ರೈ ರಾಕ್ಸ್.. ಸೋಷಿಯಲ್ ಮೀಡಿಯಾದಲ್ಲಿ ವೈರಲ್:
ಬಿಜೆಪಿ ಸದಸ್ಯತ್ವ ಅಭಿಯಾನ ವಿಚಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ ರೀತಿಯ ಸಂದೇಶಗಳು ಹರಿದಾಡುತ್ತಿದ್ದವು. ‘ಬೀದಿಗೆ ಬಿದ್ದ ಬಿಜೆಪಿ’ ಪುತ್ತೂರು ತರಕಾರಿ ಸಂತೆಯಲ್ಲಿ ಬಲೇ ಬಲೇ, ಚಾ ಪರ್ಲೆ, ಬಿಸ್ಕೆಟ್ ತಿನ್ಲೆ…ಬಿಜೆಪಿ ಮೆಂಬರ್ ಆಲೆ, ಬಜೆಪಿ ಗತಿ ಅಧೋಗತಿ…. ಪುತ್ತೂರಿನ ಸೋಮವಾರ ಸಂತೆಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಮಾಡುವ ಪರಿಸ್ಥಿತಿ ಬಿಜೆಪಿ ಪುತ್ತೂರಿಗೆ ಬಂದಿದೆ ಅಂದ್ರೆ ಒಮ್ಮೆ ಯೋಚಿಸಿ.ಅಶೋಕ್ ಕುಮಾರ್ ಅವರ ಕಾರ್ಯ ಬಿಜೆಪಿಯವರ ಪರಿಸ್ಥಿತಿಯನ್ನು ಕೆಡಿಸಿದೆ ಅಂತ.. PUTTUR BJP SHOCKS ASHOK RAI ROCKS…ಎಂಬಿತ್ಯಾದಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ವೈರಲ್ ಆಗುತ್ತಿದೆ.

ಮಧ್ಯಾಹ್ನದ ಬಳಿಕವೂ ಮುಂದುವರಿದ ಅಭಿಯಾನ
ಕಾಂಗ್ರೆಸ್ ವಲಯಾಧ್ಯಕ್ಷರು ಸದಸ್ಯತ್ವ ಅಭಿಯಾನದ ವಿಡಿಯೋ ಚಿತ್ರೀಕರಣ ಮಾಡಿದ ಬಳಿಕವೂ ಅಭಿಯಾನ ನಿಲ್ಲಿಸದೆ ಮಧ್ಯಾಹ್ನ ಗಂಟೆ 3ರ ತನಕ ಅಭಿಯಾನ ಮುಂದುವರಿಸಲಾಗಿತ್ತು.ಆದರೂ ಅಭಿಯಾನವನ್ನು ಪ್ರಶ್ನಿಸಲು ಯಾರೂ ಬಂದಿಲ್ಲ,ಸಂಜೆ 3 ಗಂಟೆ ಬಳಿಕ ಅಭಿಯಾನಕ್ಕೆ ತೆರೆ ಎಳೆಯಲಾಯಿತು ಎಂದು ಅಭಿಯಾನದಲ್ಲಿದ್ದ ಪ್ರಮುಖರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here