





ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 2024ನೇ ವರ್ಷದ ‘ಶ್ರೇಷ್ಠ ಪ್ರಗತಿಪರ ರೈತ ಪ್ರಶಸ್ತಿ’ ಪಡೆದ ಬಂಟ್ವಾಳ ತಾಲೂಕು ವಿಟ್ಲ ಮುಡ್ನೂರು ನಿವಾಸಿ ಕೆ.ಜಿ.ಚಂದ್ರಶೇಖರ ಗೌಡ ಗಿರಿನಿವಾಸ ರವರನ್ನು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಪುತ್ತೂರು ಇದರ ವತಿಯಿಂದ ವಿಟ್ಲ ಶಾಖೆಯಲ್ಲಿ ಸನ್ಮಾನಿಸಲಾಯಿತು.


ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಪುತ್ತೂರು ಇದರ ನಿರ್ದೇಶಕರು ವಿಟ್ಲ ಶಾಖಾ ಸಲಹಾ ಸಮಿತಿ ಅಧ್ಯಕ್ಷರಾದ ರಾಮಕೃಷ್ಣ ಗೌಡ ಕರ್ಮಲ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಪುತ್ತೂರು ಇದರ ನಿರ್ದೇಶಕರು ವಿಟ್ಲ ಶಾಖಾ ಸಲಹಾ ಸಮಿತಿಯ ಉಪಾಧ್ಯಕ್ಷರಾದ ಜಿನ್ನಪ್ಪ ಗೌಡ ಮಳುವೇಲು, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ., ವಿಟ್ಲ ಶಾಖಾ ಶಾಖಾ ಸಲಹಾ ಸಮಿತಿ ಸದಸ್ಯರಾದ ಸದಾನಂದ ಗೌಡ ಸೇರಾಜೆ, ಪುನೀತ್ ಮಾಡತ್ತಾರು, ಚಂದಪ್ಪ ಗೌಡ ಪೈಸಾರಿ, ಪುರಂದರ ಗೌಡ ತಾಳಿಪಡ್ಪು, ಪ್ರೇಮಲತಾ ಜಿ. ಹಡೀಲು, ಪ್ರಮುಖರಾದ ಶಿವರಾಮ ಗೌಡ ಮಲಾರು, ವಿಟ್ಲ ಶಾಖಾ ವ್ಯವಸ್ಥಾಪಕರಾದ ದಿನೇಶ್ ಪೆಲತ್ತಿಂಜ, ಸಿಬ್ಬಂದಿಗಳು ಹರಿಣಾಕ್ಷಿ ಪಿ, ಪ್ರಕಾಶ್ ಬಿ ಪುತ್ತೂರು ಎಪಿಎಂಸಿ ಶಾಖೆಯ ಸಿಬ್ಬಂದಿ ಯಶ್ವಿತ್ ಮೊದಲಾದವರು ಉಪಸ್ಥಿತರಿದ್ದರು.







            







