ನೆಲ್ಯಾಡಿ: ಕೆನರಾ ಬ್ಯಾಂಕ್ ಬಳಿ ಹೊಗೆ ತಪಾಸಣಾ ಕೇಂದ್ರ, ವಾಹನಗಳ ಇನ್ಸೂರೆನ್ಸ್ ಕಚೇರಿ ನಿಸರ್ಗ ಎಂಟರ್ಪ್ರೈಸಸ್ ನ.13ರಂದು ಬೆಳಿಗ್ಗೆ ಶುಭಾರಂಭಗೊಂಡಿತು.
ನೆಲ್ಯಾಡಿ ಗ್ರಾ.ಪಂ.ಸದಸ್ಯ ಜಯಾನಂದ ಬಂಟ್ರಿಯಾಲ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ನೆಲ್ಯಾಡಿಗೆ ಹೊಸ ಹೊಸ ಉದ್ದಿಮೆಗಳು ಬರುತ್ತಿವೆ. ಇದರಿಂದ ಊರಿನ ಅಭಿವೃದ್ಧಿಯೂ ಆಗಲಿದೆ. ಜನ ಪೇಟೆ, ಪಟ್ಟಣಗಳಿಗೆ ಹೋಗುವುದು ತಪ್ಪುತ್ತಿದೆ. ಇದೀಗ ಆರಂಭಗೊಂಡಿರುವ ಹೊಗೆ ತಪಾಸಣಾ ಕೇಂದ್ರ ಹಾಗೂ ವಾಹನಗಳ ಇನ್ಸೂರೆನ್ಸ್ ಕಚೇರಿಯ ಮೂಲಕ ಊರಿನ ಜನರಿಗೆ ಉತ್ತಮ ಸೇವೆ ದೊರೆಯುವುದರಿಂದ ಈ ಸಂಸ್ಥೆಯೂ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದರು.
ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್.ದುರ್ಗಾಶ್ರೀ ಅವರು ದೀಪ ಬೆಳಗಿಸಿ ಮಾತನಾಡಿ, ಪೇಟೆಯಲ್ಲಿ ಉದ್ದಿಮೆ ಹೆಚ್ಚಿದಂತೆ ಊರಿನ ಅಭಿವೃದ್ಧಿಯೂ ಆಗಲಿದೆ. ನಿಸರ್ಗ ಎಂಟರ್ಪ್ರೈಸಸ್ ಮೂಲಕ ನೆಲ್ಯಾಡಿಯ ಜನತೆಗೆ ಉತ್ತಮ ಸೇವೆ ಸಿಗಲಿ. ಸಂಸ್ಥೆಯೂ ಬೆಳೆಯಲಿ ಎಂದರು.
ಚರಣ್ ಬಾರ್ ಮತ್ತು ರೆಸ್ಟೋರೆಂಟ್ನ ಚರಣ್ ಪೂವಾಜೆ, ಮೊಬೈಲ್ ಮ್ಯಾಟ್ರಿಕ್ಸ್ನ ವಿಶ್ವನಾಥ, ಜೀಸಸ್ ಟಯರ್ಸ್ನ ಜೇಮ್ಸ್ ಸೇರಿದಂತೆ ನೆಲ್ಯಾಡಿಯ ವರ್ತಕರು, ಊರಿನ ಪ್ರಮುಖರು ಆಗಮಿಸಿ ಶುಭಹಾರೈಸಿದರು.
ಸ್ವಾಗತಿಸಿ ಮಾತನಾಡಿದ ಸಂಸ್ಥೆಯ ಮಾಲಕ ಹರಿಕೃಷ್ಣ ಕಾಂಚನ ಅವರು, ನಿಸರ್ಗ ಎಂಟರ್ಪ್ರೈಸಸ್ನಲ್ಲಿ ವಾಹನಗಳ ಹೊಗೆ ತಪಾಸಣೆ, ವಾಹನಗಳ ಇನ್ಸೂರೆನ್ಸ್ ಜೊತೆಗೆ ಹಣ ವರ್ಗಾವಣೆ, ಕೊರಿಯರ್, ಮ್ಯೂಚುವಲ್ ಫಂಡ್, ಪಾನ್ ಕಾರ್ಡ್, ಪಾಸ್ಪೋರ್ಟ್, ವಿಸಿಟ್ ವಿಸಾ, ಸ್ಟ್ಯಾಂಪಿಂಗ್, ಎಟೆಸ್ಟೇಷನ್, ಫಾರಿನ್ ಎಕ್ಸ್ಚೇಂಜ್, ವಿಮಾನ ಟಿಕೆಟ್, ಸುಗಮ ಬಸ್ ಟಿಕೆಟ್, ಕೆಎಸ್ಆರ್ಟಿಸಿ ಬಸ್ ಟಿಕೆಟ್ ಬುಕ್ಕಿಂಗ್, ಜೆರಾಕ್ಸ್, ಆರ್ಟಿಸಿ ಪ್ರಿಂಟ್, ಮೊಬೈಲ್, ಟಿ.ವಿ.ರಿಚಾರ್ಜ್ ಸೌಲಭ್ಯವಿದೆ. ಗ್ರಾಹಕರು ಇದರ ಸದುಪಯೋಗಪಡೆದುಕೊಳ್ಳುವಂತೆ ಹೇಳಿದರು.
ಮೂಲಚಂದ್ರ ಕಾಂಚನ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಮಾಲಕರ ಮನೆಯವರಾದ ಕುಸುಮಾ ಪಿ.ಭಟ್, ರವಿಕೃಷ್ಣ ಕಾಂಚನ, ಪಲ್ಲವಿರವಿಕೃಷ್ಣ, ಅಕ್ಷತಾ ಮತ್ತಿತರರು ಉಪಸ್ಥಿತರಿದ್ದರು.