





ಪುತ್ತೂರು: ಇಲ್ಲಿನ ಎಂ.ಟಿ ರಸ್ತೆ ಆಟೋ ಪಾರ್ಕ್ ನ ರಿಕ್ಷಾ ಚಾಲಕ ಬಲ್ನಾಡು ಗ್ರಾಮದ ದೊಡ್ಡಡ್ಕ ಮಡಿವಾಳಮೂಲೆ ನಿವಾಸಿ ಕೃಷ್ಣಪ್ಪ ಮೂಲ್ಯ (63 ವ) ರವರು ಅಲ್ಪಕಾಲದ ಅಸೌಖ್ಯದಿಂದಾಗಿ ನ.17ರಂದು ಮಂಗಳೂರಿನ ಆಸ್ಪತ್ರೆಯೊಂದಲ್ಲಿ ನಿಧನರಾದರು.


ಪುತ್ತೂರು ಬಿ ಎಮ್ ಎಸ್ ಆಟೋ ರಿಕ್ಷಾ ಚಾಲಕರ ಮಾಲಕರ ಸಂಘದ ಸದಸ್ಯರಾಗಿದ್ದ ಅವರು ಎಂ.ಟಿ ರಸ್ತೆ ಪಾರ್ಕ್ ನಲ್ಲಿ ಹಲವು ವರ್ಷಗಳಿಂದ ರಿಕ್ಷಾ ಬಾಡಿಗೆಯಲ್ಲಿ ಜೀವನ ನಡೆಸುತ್ತಿದ್ದರು. ಮೃತರು ಪತ್ನಿ ಮೀನಾಕ್ಷಿ, ಪುತ್ರಿಯರಾದ ಗೀತಾ ಮತ್ತು ಜನನಿಯವರನ್ನು ಅಗಲಿದ್ದಾರೆ.







            







