ಪುತ್ತೂರು: 2019-20 ನೇ ಸಾಲಿನಲ್ಲಿ ಪುತ್ತೂರಿನ ಸಂಪ್ಯದಲ್ಲಿ ಮಂಗಳೂರು ವಿ.ವಿಯ ಸಂಯೋಜನೆಯೊಂದಿಗೆ ವೃತ್ತಿಪರ ಶಿಕ್ಷಣದೊಂದಿಗೆ ಪ್ರಾರಂಭವಾದ “ಅಕ್ಷಯ ಕಾಲೇಜು” ನಾಲ್ಕು ವರ್ಷಗಳಲ್ಲಿ ಶೈಕ್ಷಣಿಕವಾಗಿ ಹಲವು ರಾಂಕ್ ಗಳಿಸಿದಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲೂ ರಾಷ್ಟೀಯ – ಅಂತರ್ರಾಷ್ಟ್ರೀಯ ಸಾಧನೆ ಮೆರೆದಿದೆ ಮಾತ್ರವಲ್ಲ ವಿವಿಧ ಪದವಿ ಅಭ್ಯಾಸದ ಬಳಿಕ ವಿದ್ಯಾರ್ಥಿಗಳು ವಿವಿಧ ಕಂಪೆನಿಗಳಲ್ಲಿ ಉದ್ಯೋಗವಕಾಶವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅದರಂತೆ ಮೈಸೂರು ಕೂರ್ಗಳ್ಳಿಯ ಶಾಹಿ ಎಕ್ಸ್ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯಲ್ಲಿ ಬಿಎಸ್ಸಿ ಫ್ಯಾಷನ್ ಡಿಸೈನಿಂಗ್ ನ ವಿದ್ಯಾಶ್ರೀರವರು ಪ್ಲೇಸ್ಮೆಂಟ್ ಅಸಿಸ್ಟೆಂಟ್ ಆಗಿ, ಭವ್ಯಶ್ರೀ ಐ.ಇ ಅಸಿಸ್ಟೆಂಟ್ ಆಗಿ, ಸ್ಮಿತಾ ಡಿ.ಎನ್ ಐ.ಇ ಅಸಿಸ್ಟೆಂಟ್ ಆಗಿ, ರೂಪ ಎಂ ಹಾಗೂ ಕೃತಿಕಾರವರು ಕ್ವಾಲಿಟಿ ಕಂಟ್ರೋಲರ್ ಆಗಿ, ಫ್ಯಾಷನ್ ಡಾಟ್ ಯಂಗ್ ಲೇಸರ್ ಸಂಸ್ಥೆಯಲ್ಲಿ ಎಡ್ವಾನ್ಸ್ ಡಿಪ್ಲೋಮಾ ಫ್ಯಾಷನ್ ಡಿಸೈನ್ ನ ದೇವಿಕಾರವರು ಸಾಪ್ಟ್ ವೇರ್ ಸರ್ವಿಸ್ ವಿಭಾಗದಲ್ಲಿ ಅಧಿಕಾರಿಯಾಗಿ, ಬಿಕಾಂ ವಿಥ್ ಏವಿಯೇಶನ್ ಆಂಡ್ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್ ನ ಸಾಕ್ಷಿ, ಹಂಸಿನಿ, ಕೃತಿರವರು ಬೆಂಗಳೂರು ಏರ್ ಪೋರ್ಟ್ ಟರ್ಮಿನಲ್-2 ಇದರಲ್ಲಿ ಡ್ಯೂಟಿ ಫ್ರೀ ಅಧಿಕಾರಿಯಾಗಿ, ಮಿಥುನ್ ರವರು ಬೆಂಗಳೂರಿನ ಪೋರ್ಟರ್ ಲಾಜಿಸ್ಟಿಕ್ ನಲ್ಲಿ, ಜಗತ್ ರವರು ಬಿ.ಐ.ಆರ್ ಇಂಟರ್ನ್ಯಾಷನಲ್ ಏರ್ಪೋರ್ಟ್ ನಲ್ಲಿ, ಬಿಎಸ್ಸಿ ಇಂಟೀರಿಯರ್ ಡಿಸೈನ್ ಆಂಡ್ ಡೆಕೋರೇಶನ್ ನ ಕಾರ್ತಿಕ್ ಕೆ.ಪಿರವರು ಪುತ್ತೂರಿನ ದ್ವಾರಕಾ ಕನ್ಸ್ಟ್ರಕ್ಷನ್ ನಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.