ಇರ್ವತ್ತೂರು ಪದವು : ವಾರ್ಷಿಕ ಬದ್ರ್ ಮೌಲಿದ್ ಪೋಸ್ಟರ್ ಬಿಡುಗಡೆ

0

ಪುತ್ತೂರು: ಬದ್ರಿಯಾ ಜುಮಾ ಮಸೀದಿ ಹಾಗೂ ಬದ್ರಿಯಾ ಯಂಗ್ ಮೆನ್ಸ್ ಅಸೋಸಿಯೇಷನ್ ಇರ್ವತ್ತೂರು ಪದವು ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ವಾರ್ಷಿಕ ಬದ್ರ್ ಮೌಲಿದ್ ಪ್ರಯುಕ್ತ ಏಕದಿನ ಮತಪ್ರಭಾಷಣ ಹಾಗೂ ಸನ್ಮಾನ ಕಾರ್ಯಕ್ರಮ 2024 ಡಿಸೆಂಬರ್ ತಿಂಗಳ 17 ರಂದು ನಡೆಯಲಿದ್ದು ಅದರ ಆಮಂತ್ರಣ ಪತ್ರಿಕೆಯನ್ನು ಜಮಾಹತಿನ ಖತೀಬರಾದ ಉಮರ್ ಮದನಿ ನೇತೃತ್ವದಲ್ಲಿ ವಾರ್ಷಿಕ ಬದ್ರ್ ಮೌಲಿದ್ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಅಲ್ ಖಾದಿಸ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಹಂಝ ಸಖಾಫಿ, ಗುರುಗಳಾದ ರಫೀಕ್ ಮದನಿ,ಬದ್ರಿಯಾ ಜುಮಾ ಮಸೀದಿಯ ಹಾಲಿ ಅಧ್ಯಕ್ಷರಾದ ಸೇವಾ ಹಾಮದಾಕ, ಮಾಜಿ ಅಧ್ಯಕ್ಷರಾದ ಪಿ.ಕೆ ಇದ್ದಿನಬ್ಬ, ಅಬ್ದುಲ್ ಲತೀಫ್ ಕಲಾ ಬಾಗಿಲು,ಪಂಜೋಡಿ ಅಬ್ದುಲ್ ಹಮೀದ್, ಕಾರ್ಯದರ್ಶಿ ಮುನೀರ್ ಅಹ್ಮದ್, ಜೊತೆ ಕಾರ್ಯದರ್ಶಿ ಅಬ್ದುಲ್ ಅಝೀಝ್,ಸ್ವಾಗತ ಸಮಿತಿ ಅಧ್ಯಕ್ಷರಾದ ಎಸ್.ಪಿ.ಮೊಹಮ್ಮದ್ ರಫೀಕ್, ಸದಸ್ಯರಾದ ಅಬ್ದುಲ್ ರಹಿಮಾನ್, ಅಬೂಬಕ್ಕರ್ ಅಂಕರ್ಜಾಲ್, ನಿಸಾರ್ ಅಹಮದ್ ಇರ್ವತ್ತೂರು, ಟಿ.ಕೆ.ನವಾಝ್ ,ಬದ್ರಿಯಾ ಯಂಗ್ ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಮೊಹಮ್ಮದ್ ಹಾಫಿಳ್,ಅನಿವಾಸಿ ಭಾರತೀಯ ಕತ್ತಾರ್ ಉದ್ಯಮಿ ಝಹೀರ್ ಅಹ್ಮದ್ ಮತ್ತಿತರು ಉಪಸ್ಥಿತರಿದ್ದರು.


ಅಂತಾರಾಷ್ಟ್ರೀಯ ಖ್ಯಾತಿಯ ವಾಗ್ಮಿ ಪ್ರಭಾಷಣ ಲೋಕದ ರಾಜಕುಮಾರ ಅಲ್ ಹಾಫಿಳ್ ಉಸ್ತಾದ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಕೇರಳ ಆಗಮಿಸಲಿದ್ದಾರೆ.

LEAVE A REPLY

Please enter your comment!
Please enter your name here