ಉಪ್ಪಿನಂಗಡಿ: ಇಲ್ಲಿನ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯ 61ನೇ ವರ್ಷದ ನಗರ ಭಜನಾ ಸಂಕೀರ್ತನೆಯು ಸೋಮವಾರ ರಾತ್ರಿಯಿಂದ ಪ್ರಾರಂಭಗೊಂಡಿದ್ದು, ಉಪ್ಪಿನಂಗಡಿಯ ಪ್ರಮುಖ ಬೀದಿಗಳಲ್ಲಿ ಸಂಕೀರ್ತನೆಯು ನಡೆಯಿತು.
ಡಿ. 2ರಿಂದ ಡಿ.10ರ ವರೆಗೆ ನಗರ ಭಜನಾ ಸಂಕೀರ್ತನೆಯು ನಡೆದು ಡಿ.11ರಂದು ಅರ್ಧ ಏಕಾಹಃ ಭಜನಾ ಮಹೋತ್ಸವ ನಡೆಯಲಿದೆ. ನಗರ ಭಜನಾ ಸಂಕೀರ್ತನೆಯಲ್ಲಿ ಭಜನಾ ಮಂಡಳಿ ಅಧ್ಯಕ್ಷ ಶರತ್ ಕೋಟೆ, ಕಾರ್ಯದರ್ಶಿ ಮಾಧವ ಆಚಾರ್ಯ, ಪ್ರಮುಖರಾದ ಪ್ರಶಾಂತ್ ನೆಕ್ಕಿಲಾಡಿ, ನಿತೇಶ್ ಗಾಣಿಗ, ಚಿದಾನಂದ ನಾಯಕ್, ಸುಂದರ ಆದರ್ಶನಗರ, ಕೆ. ಜಗದೀಶ್ ಶೆಟ್ಟಿ, ಸುಧಾಕರ ಶೆಟ್ಟಿ, ಉದಯಕುಮಾರ್ ಯು.ಎಲ್., ಕೀರ್ತನ್ ಕುಮಾರ್, ಬಿಪಿನ್, ಕೃಷ್ಣ ಕೋಟೆ, ಯತೀಶ್ ಶೆಟ್ಟಿ, ಹರಿರಾಮಚಂದ್ರ, ವಿನೋದ್ ಕುಮಾರ್ ಮೊದಲಾದ ಭಜಕರು ಭಾಗವಹಿಸಿದ್ದರು.