ಆತೂರು: ಆಯಿಶಾ ವಿದ್ಯಾಲಯದ ನೂತನ ಶಾಲಾ ವಾಹನ ಉದ್ಘಾಟನಾ ಕಾರ್ಯಕ್ರಮವು ಡಿ.4ರಂದು ನಡೆಯಿತು.
ಆಯಿಶಾ ವಿದ್ಯಾ ಸಂಸ್ಥೆಗಳ ಮರ್ಹೂಮ್ ಆಯಿಶಾ(ದಾನಿ)ರ ಮೊಮ್ಮಗಳು ಆಯಿಶಾ ಹುದಾರಿಂದ ಹೊಸ ಬಸ್ಸಿನ ಕೀ ಯನ್ನು ಸಂಸ್ಥೆಯ ಅಧ್ಯಕ್ಷರಾದ ಅಬ್ದುರ್ರವೂಫ್ ಯು.ಎಮ್. ರಿಗೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಲಾಯಿತು. ಸಂಸ್ಥೆಯ ಸಂಚಾಲಕರಾದ ಅಬ್ದುಲ್ ಹಸೀಬ್ ಯು ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಶಾಲಾ ಪ್ರಾಂಶುಪಾಲರು, ಶಿಕ್ಷಕಿಯರು ಮತ್ತು ಉಪಾಧ್ಯಕ್ಷರು ಉಪಸ್ಥಿತರಿದ್ದರು.