ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ” ಕ್ರೀಡಾರಶ್ಮಿ”

0

ಸವಣೂರಿಗೆ ಸಕಲ ಸೌಲಭ್ಯವನ್ನು ನೀಡಿ, ಮಾದರಿ ಗ್ರಾಮವಾಗಿ ರೂಪಿಸಿದ ಸೀತಾರಾಮ ರೈ- ಎಸ್‌ಐ ಆಂಜನೇಯ ರೆಡ್ಡಿ ಶ್ಲಾಘನೆ

ಪುತ್ತೂರು: ಸವಣೂರು ಎಂಬ ಗ್ರಾಮೀಣ ಪ್ರದೇಶದಲ್ಲಿ ಬಹೃತ್ ಮಟ್ಟದಲ್ಲಿ ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳು, ಪೆಟ್ರೋಲ್ ಪಂಪ್, ವಾಣಿಜ್ಯ ಸಂಕೀರ್ಣ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ರೂಪಿಸಿದ ಸಹಕಾರ ರತ್ನ ಸವಣೂರು ಸೀತಾರಾಮ ರೈಯವರು ಸವಣೂರಿಗೆ ಬಹುದೊಡ್ಡ ಕೊಡುಗೆಯನ್ನು ನೀಡಿ, ಮಾದರಿ ಗ್ರಾಮವಾಗಿ ರೂಪಿಸಿದ್ದಾರೆ ಎಂದು ಪುತ್ತೂರು ನಗರ ಠಾಣೆಯ ಎಸ್‌ಐ ಅಂಜನೇಯ ರೆಡ್ಡಿ ಶ್ಲಾಘನೆಯನ್ನು ವ್ಯಕ್ತಪಡಿಸಿದರು.


ಅವರು ದ.14 ರಂದು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ” ಕ್ರೀಡಾರಶ್ಮಿ” ಕಾರ್‍ಯಕ್ರಮದಲ್ಲಿ ಕ್ರೀಡಾ ಜ್ಯೋತಿ, ಸ್ವೀಕರಿಸಿ, ಕಾರ್‍ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳು ನಿರ್ದಿಷ್ಟವಾದ ಗುರಿಯನ್ನು ಹೊಂದಿರಬೇಕು, ನಮ್ಮ ಮನಸನ್ನು ದೃಢಚಿತ್ತದಿಂದ ನಾವು ಮಾಡುವ ಒಳ್ಳೆಯ ಕಾರ್‍ಯಕ್ಕೆ ಉಪಯೋಗಿಸಬೇಕು. ಸೋಲು ಮತ್ತು ಗೆಲುವು ಎಂದಿಗೂ ಶಾಶ್ವತವಲ್ಲ, ಸೋಲು ಬಂದಾಗ ಹತಾಶ ಮನೋಭಾವನೆಯನ್ನು ಹೊಂದಬಾರದು, ಡ್ರಗ್ಸ್‌ನಂಥ ಕೆಟ್ಟ ಜಾಲಕ್ಕೆ ವಿದ್ಯಾರ್ಥಿಗಳು ಬೀಳಬಾರದು, ಅಲ್ಲದೇ ಮೊಬೈಲ್ ಎಂಬ ಬಹೃತ್ ಮಾಯಾಜಾಲದಲ್ಲಿ ಸಿಲುಕಿ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಸಲಹೆ ನೀಡಿದರು.


ಅಧ್ಯಕ್ಷತೆಯನ್ನು ವಹಿಸಿದ್ದ ಸವಣೂರು ವಿದ್ಯಾರಶ್ಮಿ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈಯವರು ಮಾತನಾಡಿ ಕ್ರೀಡೆಯಲ್ಲಿ ಶಿಸ್ತು ಮತ್ತು ಆರೋಗ್ಯ ಎರಡು ದೊರೆಯುತ್ತದೆ, ಆದುದರಿಂದ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿಯಿಂದ ಭಾಗವಹಿಸಬೇಕು ಎಂದು ಹೇಳಿದರು.


ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ, ಟ್ರಸ್ಟಿಗಳಾದ ಸವಣೂರು ಎನ್ ಸುಂದರ ರೈ, ಮಹೇಶ್ ಎಸ್ ರೈ ಸವಣೂರು (ಯುಎಸ್‌ಐ), ವಿದ್ಯಾರಶ್ಮಿ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮ್‌ಪ್ರಸಾದ್ ರೈ ಕಲಾಯಿ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜ್ ಪ್ರಾಂಶುಪಾಲ ಡಾ. ನಾರಾಯಣ ಮೂರ್ತಿ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್ ಆಳ್ವರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರಶ್ಮಿ ಪಿಯು ಕಾಲೇಜ್ ವೀಭಾಗದ ಪ್ರಾಂಶುಪಾಲ ಸೀತಾರಾಮ ಕೇವಳ ಸ್ವಾಗತಿಸಿ, ವಿದ್ಯಾರ್ಥಿಗಳಾದ ಗೌತಮಿ ಕ್ರೀಡಾ ಪ್ರತಿಜ್ಞೆ ಭೋಧಿಸಿದರು. ಸಜಾ ವಂದಿಸಿದರು. ಸನಾ ಫಾತಮಾ ಕಾರ್‍ಯಕ್ರಮ ನಿರೂಪಿಸಿದರು. ವಿದ್ಯಾರಶ್ಮಿ ವಿದ್ಯಾಲಯದ ದೈಹಿಕ ಶಿಕ್ಷಣ ಶಿಕ್ಷಕ ಶಿವಪ್ರಸಾದ್ ಆಳ್ವ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಭರತ್‌ ಕ್ರೀಡಾಕೂಟದಲ್ಲಿ ಸಹಕರಿಸಿದರು. ವಿದ್ಯಾರಶ್ಮಿ ರಕ್ಷಕ-ಶಿಕ್ಷಕ ಸಂಘದ ಸದಸ್ಯರಾದ ಜೈನ್‌ದ್ದೀನ್ ತೋಟದಮೂಲೆ, ಶ್ವೇತಾ ಜೈನ್, ಸವಣೂರು ಗ್ರಾ.ಪಂ, ಸದಸ್ಯ ರಫೀಕ್ ಎಂ.ಎ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ದ. 19- ಸಮ್ಮಾನ ರಶ್ಮಿ, 20 ರಂದು ಸಂಭ್ರಮ ರಶ್ಮಿ
ವಿದ್ಯಾರಶ್ಮಿ ವಿದ್ಯಾಲಯದ ವಾರ್ಷಿಕೋತ್ಸವ ಪ್ರಯುಕ್ತ ದ. 19 ರಂದು ಬೆಳಿಗ್ಗೆ 9.30 ರಿಂದ ಸಮ್ಮಾನ ರಶ್ಮಿ( ಬಹುಮಾನ ವಿತರಣೆ ಕಾರ್‍ಯಕ್ರಮ) ಹಾಗೂ 20 ರಂದು ಸಂಜೆ 5.30 ರಿಂದ ಸಂಭ್ರಮ ರಶ್ಮಿ( ವಾರ್ಷಿಕೋತ್ಸವ ದಿನಾಚರಣೆ) ಕಾರ್‍ಯಕ್ರಮ ಅದ್ದೂರಿಯಾಗಿ ನಡೆಯಲಿದೆ.ಈ ಎಲ್ಲಾ ಕಾರ್‍ಯಕ್ರಮಗಳಲ್ಲಿ ಶಾಲೆಯ ಪೋಷಕರು, ವಿದ್ಯಾಭಿಮಾನಿಗಳು ಭಾಗವಹಿಸಿ. ಕಾರ್‍ಯಕ್ರಮಕ್ಕೆ ಯಶಸ್ಸುಗೊಳಿಸಬೇಕು ಅಲ್ಲದೇ ವಿದ್ಯಾರಶ್ಮಿ ವಿದ್ಯಾಲಯವು ಆಧುನಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ವಿದ್ಯಾರ್ಥಿಗಳ ಸಮಗ್ರ ಶಿಕ್ಷಣಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತಿದೆ
ಕೆ.ಸೀತಾರಾಮ ರೈ ಸವಣೂರು
ಸಂಚಾಲಕರು, ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು ಸವಣೂರು

LEAVE A REPLY

Please enter your comment!
Please enter your name here