ಪುತ್ತೂರು: ಸವಣೂರು ಮುಂಡತ್ತಡ್ಕ ಶ್ರೀ ಮಾರಿಯಮ್ಮ ದೇವಿ,ಸಪರಿವಾರ ದೈವಸ್ಥಾನದಲ್ಲಿ ವಾರ್ಷಿಕ ಮಹಾಪೂಜೆಯು ದ.7 ಮತ್ತು 8 ರಂದು ಜರಗಿತು.
7 ರಂದು ಭೈರವ ದೈವದ ಪ್ರತಿಷ್ಠೆ ನಡೆಯಿತು. ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್‍ಯಕ್ರಮ, ರಾತ್ರಿ ಧಾರ್ಮಿಕ ಸಭಾ ಕಾರ್‍ಯಕ್ರಮದಲ್ಲಿ ಪ್ರತಿಷ್ಠಾ ಸಮಿತಿಯ ಗೌರವಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಅಧ್ಯಕ್ಷ ದಿನೇಶ್ ಮೆದು, ಕಾರ್‍ಯದರ್ಶಿ ತಾರಾನಾಥ ಕಾಯರ್ಗ, ಸದಸ್ಯರುಗಳಾದ ಮಹೇಶ್ ಕೆ.ಸವಣೂರು, ಶ್ರೀಧರ್ ಇಡ್ಯಾಡಿ, ಸಂಜೀವ ಪೂಜಾರಿ ಅಗರಿ, ಸವಣೂರು ಗ್ರಾ.ಪಂ, ಸದಸ್ಯೆ ಚೆನ್ನು ಮುಂಡೋತ್ತಡ್ಕ ಉಪಸ್ಥಿತರಿದ್ದರು.
ಸವಣೂರು ಮುಂಡತ್ತಡ್ಕ ಶ್ರೀ ಮಾರಿಯಮ್ಮ ದೇವಿ, ಸಪರಿವಾರ ದೈವಸ್ಥಾನದ ಜೀಣೋದ್ದಾರ ಸಮಿತಿಯ ಅಧ್ಯಕ್ಷ ಬಾಬು ದೊಳ್ಪಾಡಿ, ಗೌರವಾಧ್ಯಕ್ಷ ಕಿನ್ನಿಗ,ಕಾರ್ಯದರ್ಶಿ ಕಿರಣ್ ಕುಮಾರ್, ಉಪಾಧ್ಯಕ್ಷ ಬಾಬು ಮುಂಡೋತ್ತಡ್ಕ, ಜೊತೆ ಕಾರ್‍ಯದರ್ಶಿಗಳಾದ ಹರೀಶ್ ಮುಂಡೋತ್ತಡ್ಕ, ದಯಾನಂದ, ಕೋಶಾಧಿಕಾರಿ ಯೋಗೀಶ್ ಮುಂಡೋತ್ತಡ್ಕ, ಹರಿಕೃಷ್ಣ ರಾಮಕುಂಜ ವಿವಿಧ ಕಾರ್‍ಯಕ್ರಮದಲ್ಲಿ ಸಹಕರಿಸಿದರು.