ಸರಕಾರಿ ನೌಕರರ ಸಂಘದ ಕ್ಯಾಲೆಂಡರ್ ಬಿಡುಗಡೆ, ಸರಕಾರಿ ಆಸ್ಪತ್ರೆಗೆ ಆಕ್ಸಿಜನ್ ಕಾನ್ಸಾಂಟ್ರೇಟ್ ಕೊಡುಗೆ

0

ಪುತ್ತೂರು: ಸರಕಾರಿ ನೌಕರರ ಸಂಘದ 2025ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಹಾಗೂ ಸಂಘದಿಂದ ಸರಕಾರಿ ಆಸ್ಪತ್ರೆಗೆ ಆಕ್ಸಿಜನ್ ಕಾನ್ಸಾಂಟ್ರೇಟರ್ ಹಸ್ತಾಂತರವು ಡಿ.30ರಂದು ಸಂಘದ ಕಚೇರಿಯಲ್ಲಿ ನಡೆಯಿತು.


ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಆಶಾಜ್ಯೋತಿ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಯಾವುದೇ ವಿಚಾರದಲ್ಲಿ ನಡೆಯುವ ಸಂಘಟಿತ ಹೋರಾಟಗಳಿಗೆ ಮಾತ್ರ ಶಕ್ತಿ ಹಾಗೂ ಯಶಸ್ಸು ದೊರೆಯಲಿದೆ. ಸಂಘಟಿತ ಹೋರಾಟದ ಪ್ರಯೋಜನದ ಬಗ್ಗೆ ಎಲ್ಲರಿಗೂ ಅರಿವಾಗಿದೆ. ಹೀಗಾಗಿ ಇಲಾಖೆ ಯಾವುದೇ ಇರಲಿ ಎಲ್ಲರೂ ಒಟ್ಟಾಗಿ ಸಂಘಟಿತರಾಗಬೇಕು ಎಂದು ಹೇಳಿದ ಅವರು ಸಂಘದಿ‌ದ ಕೊಡುಗೆ ನೀಡಿದ ಆಕ್ಸಿಜನ್ ಕಾನ್ಸಾಂಟ್ರೇಟ್ ರೋಗಿಗಳಿಗೆ ಬಹಳಷ್ಟು ಉಪಯುಕ್ತವಾಗಿದೆ. ಸಂಘ ಇನ್ನಷ್ಟು ಬೆಳೆಯಲಿ ಎಂದರು.


ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯ ಮಾತನಾಡಿ, ಎಲ್ಲಾ ವಿವರಗಳನ್ನು ಒಳಗೊಂಡಿರುವ 2025ರ ಹೊಸ ವರ್ಷದ ಕ್ಯಾಲೆಂಡರ್ ಹೊಸ ಆಡಳಿತ ಮಂಡಳಿಯೊಂದಿಗೆ ಬಿಡುಗಡೆಗೊಂಡಿದೆ. ಹೊಸ ವರ್ಷವು ಹೊಸ ಯೋಜನೆಯೊಂದಿಗೆ ಮುನ್ನಡೆಯಲಿದೆ. ರಾಜ್ಯ ಸಂಘದ ಕೈಗೊಳ್ಳುವ ನಿರ್ದಾರಗಳಿಗೆ ನಾವು ಬೆಂಬಲ ಸೂಚಿಸಿ ಹೋರಾಟದಲ್ಲಿ ಕೈಜೋಡಿಸಬೇಕು ಎಂದರು.


ಸಂಘದ ಕಾರ್ಯದರ್ಶಿ ಅಬ್ರಹಾಂ ಎಸ್.ಎ ಸ್ವಾಗತಿಸಿದರು. ರಾಜ್ಯ ಪರಿಷತ್ ಸದಸ್ಯ ಅಶ್ರಫ್ ವಂದಿಸಿದರು. ಸಂಘದ ನಿರ್ದೇಶಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here