ಪುತ್ತೂರು: ನೆಹರುನಗರ ಸಮೀಪ ಪಡ್ಡಾಯೂರಿನ ವರುಣ್ಸ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಬ್ಯಾಡಿಂಟನ್ ಪಂದ್ಯಾಟವು ಡಿ.29ರಂದು ನಡೆಯಿತು.
ಪಂದ್ಯಾಟವನ್ನು ಶಿವರಾಮ ಮತಾವು ಹಾಗೂ ಪಡ್ಡಾಯೂರು ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂದಿರದ ಅಧ್ಯಕ್ಷ ರಾಮಣ್ಣ ಗೌಡ ಹೊಸಮಾರು ದೀಪ ಬೆಳಗಿಸಿ ಉದ್ಘಾಟಿಸಿದರು. ವರುಣ್ಸ್ ಬ್ಯಾಡ್ಮಿಂಟನ್ ಅಕಾಡೆಮಿಯ ಅಧ್ಯಕ್ಷ ಹರೀಶ್ಚಂದ್ರ ಗೌಡ, ಸಂಚಾಲಕರು, ಮುಖ್ಯ ತರಬೇತುರಾದ ವರುಣ್ ಉಪಸ್ಥಿತರಿದ್ದರು.
9 ವರ್ಷ ಮತ್ತು 11 ವರ್ಷದೊಳಗಿನ ಸಿಂಗಲ್ಸ್ ವಿಭಾಗ, 13ರಿಂದ 15 ವರ್ಷದೊಳಗಿನ ಸಿಂಗಲ್ಸ್ ಮತ್ತು ಡಬ್ಬಲ್ಸ್ ವಿಭಾಗದಲ್ಲಿ ಪಂದ್ಯಾಟಗಳು ಹುಡುಗರು ಮತ್ತು ಹುಡುಗಿಯರ ಪ್ರತ್ಯೇಕವಾಗಿ ನಡೆಯಿತು.
9 ವರ್ಷದೊಳಗಿನ ಸಿಂಗಲ್ಸ್ ವಿಭಾಗದಲ್ಲಿ ಯಶ್ಮಿತ್(ಪ್ರ), ತನ್ಮಯ್(ದ್ವಿ), 11 ವರ್ಷದೊಳಗಿನ ಸಿಂಗಲ್ಸ್ ವಿಭಾಗದಲ್ಲಿ ವೈಷ್ಣನ್ ರಾಜ್(ಪ್ರ), ಶೌರ್ಯ(ದ್ವಿ), 13 ವರ್ಷದೊಳಗಿನ ಸಿಂಗಲ್ಸ್ ವಿಭಾಗದಲ್ಲಿ ಆದ್ಯನ್(ಪ್ರ), ಜಶ್(ದ್ವಿ)13 ವರ್ಷದೊಳಗಿನ ಡಬ್ಬಲ್ಸ್ ವಿಭಾಗದಲ್ಲಿ ವೈಷ್ಣವ್‌ರಾಜ್ ಮತ್ತು ಷಣ್ಮುಖ್(ದ್ವಿ), ಅಶ್ನಿತ್ ಮತ್ತು ಇಶಾನ್(ದ್ವಿ) 15 ವರ್ಷದೊಳಗಿನ ಸಿಂಗಲ್ಸ್ ವಿಭಾಗದಲ್ಲಿ ಇಶಾನ್(ಪ್ರ), ಗೌರವ್(ದ್ವಿ). 15 ವರ್ಷದೊಳಗಿನ ಡಬ್ಬಲ್ಸ್ ವಿಭಾಗದಲ್ಲಿ ಗಗನ್‌ದೀಪ್ ಮತ್ತು ಅಬ್ದುಲ್ ಇಶಾನ್(ಪ್ರ), ಗೌರವ್ ಮತ್ತು ಮನ್ವಿತ್(ದ್ವಿ) ಬಹುಮಾನ ಪಡೆದುಕೊಂಡಿದ್ದಾರೆ.