ಪುತ್ತೂರು: ತುಳುನಾಡಿನ ಅತ್ಯಂತ ಕಾರಣಿಕತೆಯ ಗರಡಿಗಳಲ್ಲಿ ಒಂದಾಗಿರುವ ಒಳಮೊಗ್ರು ಗ್ರಾಮದ ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಗರಡಿಯಲ್ಲಿ 17 ನೇ ವರ್ಷದ ‘ಸಪ್ತದಶ’ ರಾಮಜಾಲು ಗರಡಿ ವೈಭವದ ಜಾತ್ರೋತ್ಸವವು ಜ.18 ರಂದು ಜರಗಲಿದೆ.
ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ರಾಮಜಾಲು ಗರಡಿ ವಠಾರದಲ್ಲಿ ನಡೆಯಿತು. ಈ ವರ್ಷವೂ ಕೂಡ ಅತ್ಯಂತ ವಿಜೃಂಭಣೆಯ ಶ್ರೀ ಬ್ರಹ್ಮಬೈದೆರ್ಕಳ ನೇಮೋತ್ಸವವು ನಡೆಯಲಿದ್ದು 10 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಪ್ರತಿವರ್ಷದಂತೆ ಅನ್ನಸಂತರ್ಪಣೆ, ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೇ ರಾತ್ರಿ ‘ ಏರ್ಲಾ ಗ್ಯಾರಂಟಿ ಅತ್ತ್’ ಎನ್ನುವ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಆಮಂತ್ರಣ ಪತ್ರಿಕೆ ಬಿಡುಗಡೆ ಸಂದರ್ಭದಲ್ಲಿ ರಾಮಜಾಲು ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲು ಹಾಗೂ ಪರ್ಪುಂಜ ಸ್ನೇಹ ಯುವಕ ಮಂಡಲ ಮತ್ತು ಸ್ನೇಹ ಯುವತಿ ಮಂಡಲದ ಸಂಚಾಲಕರು, ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರುಗಳು, ಕೂರೇಲು ಶ್ರೀ ಮಲರಾಯ ಸ್ವಯಂಸೇವಕ ವೃಂದದ ಸದಸ್ಯರುಗಳು, ಭಕ್ತಾಧಿಗಳು ಉಪಸ್ಥಿತರಿದ್ದರು. ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲು ಸ್ವಾಗತಿಸಿ,ವಂದಿಸಿದರು. ಹರ್ಷಿತ್ ಕುಮಾರ್ ಕೂರೇಲು ಸಹಕರಿಸಿದ್ದರು.