ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡರೆ ವ್ಯಕ್ತಿತ್ವದ ಬೆಳವಣಿಗೆಯಾಗುತ್ತದೆ -ಭಾರತಿ
ಪುತ್ತೂರು: ಲಯನ್ಸ್ ಜಿಲ್ಲಾ ಗವರ್ನರ್ ಲಯನ್ ಬಿ.ಎಂ. ಭಾರತಿ ಎಂ ಜೆ ಎಫ್‌ಇವರ ಪುತ್ತೂರು ಲಯನ್ಸ್ ಕ್ಲಬ್‌ಗೆ ಅಧೀಕೃತ ಭೇಟಿ ಕಾರ್ಯಕ್ರಮ ಲಯನ್ಸ್ ಅಧ್ಯಕ್ಷೆ ಪ್ರೇಮಲತಾ ರಾವ್ ಇವರ ಅಧ್ಯಕ್ಷತೆಯಲ್ಲಿ ಡಿ.30ರಂದು ಸಂಜೆ ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು. ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿ ಲಯನ್ಸ್ ಜಿಲ್ಲಾ ಗವರ್ನರ್ ಲಯನ್ ಬಿ,ಎಂ. ಭಾರತಿ ಮಾತನಾಡಿ, ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡರೆ ನಮ್ಮ ವ್ಯಕ್ತಿತ್ವದ ಬೆಳವಣಿಗೆಯಾಗುತ್ತದೆ. ಸಮಾಜ ಸೇವೆ ಮಾಡಿದಾಗ ಸಮಾಜ ನಮ್ಮನ್ನು ಗುರುತಿಸುತ್ತದೆ. ಸಮಾಜಮುಖಿ ಚಟುವಟಿಕೆಗಳನ್ನು ಮಾಡುವುದರಿಂದ ಹೆಮ್ಮೆಯ ಜೊತೆಗೆ ಆತ್ಮ ತೃಪ್ತಿ ದೊರೆಯುತ್ತದೆ. ಅನೇಕ ಸಂಘ ಸಂಸ್ಥೆಗಳಿಗೆ ಸಹಾಯಹಸ್ತ ಚಾಚಿದ್ದೀರಿ ಇದರಿಂದ ಅಗತ್ಯವುಳ್ಳವರಿಗೆ ಸಹಾಯವಾಗಿದ್ದರೆ ಅದೇ ದೊಡ್ಡ ಸೇವೆ ಎಂದರು.
ಅಧ್ಯಕ್ಷತೆ ವಹಿಸಿದ ಪುತ್ತೂರು ಲಯನ್ಸ್ ಕ್ಲಬ್ ಅಧ್ಯಕ್ಷೆ ಪ್ರೇಮಲತಾ ರಾವ್ ಸ್ವಾಗತಿಸಿ ಮಾತನಾಡಿ, ನಮ್ಮೆಲ್ಲ ಕಾರ್ಯಚಟುವಟಿಕೆಯಲ್ಲಿ ಲಯನ್ಸ್ ಪದಾಧಿಕಾರಿಗಳು ಮತ್ತು ಸದಸ್ಯರು ಸಕ್ರೀಯವಾಗಿ ಭಾಗವಹಿಸಿ ಪ್ರೋತ್ಸಾಹಿಸುವ ಕಾರಣ ಈ ಎಲ್ಲಾ ಸಮಾಜಮುಖಿ ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ ಒಬ್ಬೊಬ್ಬರಿಂದ ಮಾಡಲು ಇದು ಅಸಾಧ್ಯ ಅದಕ್ಕಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಲಯನ್ ಸಂಸ್ಥೆಗೆ ಸೇರ್ಪಡೆಯಾದ ಇಬ್ಬರು ಸದಸ್ಯರಿಗೆ ರಾಜ್ಯಪಾಲರು ಪ್ರಮಾಣವಚನ ಬೋಧಿಸಿದರು. ಅಂಬಿಕಾ ವಿದ್ಯಾಲಯದಲ್ಲಿ ನಡೆಸಿದ ಪೀಸ್ ಪೋಸ್ಟರ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾ ರಾಜ್ಯಪಾಲರ ಕಾರ್ಯದರ್ಶಿ ಗೀತಾ ರಾವ್ ಪ್ರಾಂತ್ಯ ಅಧ್ಯಕ್ಷರಾದ ಲಯನ್ ಪವನ್ ರಾಮ್ ಹಾಗೂ ನಿಕಟ ಪೂರ್ವ ಅಧ್ಯಕ್ಷರಾದ ಸದಾಶಿವ ಟಿ. ಹಿರಿಯ ಸದಸ್ಯರಾದ ಮುಳಿಯ ಶಾಮ್ ಭಟ್ ವೇದಿಕೆಯಲ್ಲಿದ್ದರು. ಪುತ್ತೂರು ಲಯನ್ಸ್ ಕ್ಲಬ್ ಸದಸ್ಯರು ಸೇರಿದಂತೆ ಪ್ರಾಂತ್ಯದ ಬೇರೆ ಬೇರೆ ಲಯನ್ಸ್ ಕ್ಲಬ್‌ಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಲಯನ್ ಅಜಿತ್ ಶೆಟ್ಟಿ ಧ್ವಜ ವಂದನೆ ಸಲ್ಲಿಸಿದರು, ಲಯನ್ ಜಯಶ್ರೀ ಶೆಟ್ಟಿ ಮತ್ತು ಲಯನ್ ನಾರಾಯಣ ಗೌಡ ಲಯನ್ಸ್ ಪ್ರಾರ್ಥಿಸಿದರು. ರಾಜ್ಯಪಾಲರ ಪರಿಚಯವನ್ನು ಲಯನ್ ವತ್ಸಲಾ ರಾಜ್ಞಿ ವಾಚಿಸಿದರು, ಕಾರ್ಯದರ್ಶಿ ಲಯನ್ ಅರವಿಂದ್ ಭಗವಾನ್ ರೈ ವಾರ್ಷಿಕ ಸೇವಾ ವರದಿ ಮಂಡಿಸಿದರು.ಖಜಾಂಚಿ ಲಯನ್ ಸುಧಾಕರ ಕೆ.ಪಿ ವಂದಿಸಿದರು.
ಸೇವಾ ಕಾರ್ಯಕ್ರಮ..
ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯಪಾಲರಾದ ಭಾರತೀ ಬಿ ಎಂ. ಎಂ ಜೆ ಎಫ್ ಇವರ ಸಮ್ಮುಖದಲ್ಲಿ ಈ ಕೆಳಗಿನ ದಾನಿಗಳಿಂದ ಸೇವಾ ಕಾರ್ಯಕ್ರಮ ನಡೆಸಲಾಯಿತು. ಆನಂದ ಆಶ್ರಮಕ್ಕೆ ಲಯನ್ ವತ್ಸಲಾ ರಾಜ್ಞಿ ಯವರು ಬೆಡ್ ಶೀಟ್ ಗಳನ್ನು ವಿತರಿಸಿದರು, ಲಯನ್ ಹರಿನಾರಾಯಣ ಹೊಳ್ಳ ಇವರು ರಾಮಕೃಷ್ಣ ಆಶ್ರಮದ ಮಕ್ಕಳಿಗೆ ಅನ್ನದಾನಕ್ಕೆ ಹತ್ತು ಸಾವಿರ ರೂ ನೀಡಿದರು. ಲಯನ್ ನಯನ ರೈ ಇವರು ವಿಕಲಚೇತನ ಪುನರ್ವಸತಿ ಕಾರ್ಯಕರ್ತರಿಗೆ ಸ್ಯಾನಿಟರಿ ಟವೆಲ್ ಹಾಗೂ ಇತರ ಸಾಮಗ್ರಿ ನೀಡಿದರು. ಪ್ರಜ್ಞ ಆಶ್ರಮದ ವಿಶೇಷ ಚೇತನ ಮಕ್ಕಳಿಗೆ ಲಯನ್ ಸುಧಾಕರ ಕೆ. ಪಿ ಹಾಗೂ ಲಯನ್ ಅರವಿಂದ ಭಗವಾನ್ ರೈ ಇವರು ಸ್ವಚ್ಛತೆಗಾಗಿ ಫಿನಾಯಿಲ್ ಹಾಗೂ ಸರ್ಫ್ ನೀಡಿದರು. ಲಯನ್ ಶಿವಪ್ರಸಾದ್ ಶೆಟ್ಟಿ ಯವರು ಅನಾರೋಗ್ಯ ಪೀಡಿತರೊಬ್ಬರಿಗೆ ಧನಸಹಾಯ ಮಾಡಿದರು.
ಸನ್ಮಾನ:
ಲಯನ್ಸ್ ಜಿಲ್ಲಾ ಗವರ್ನರ್ ಲಯನ್ ಬಿ. ಎಂ. ಭಾರತಿ ಎಂ ಜೆ ಎಫ್ ಇವರನ್ನು ಹಾಗೂ 2021-24ನೇ ಸಾಲಿನ ಬಿ.ಕಾಂ ಪದವಿ ಪರೀಕ್ಷೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ
4 ನೇ ರ್‍ಯಾಂಕ್ ವಿಜೇತರಾದ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿ ನಿಶಿತಾ ಬಿ. ಇವರನ್ನು ಸನ್ಮಾನಿಸಲಾಯಿತು.