ಕಡಬ: ರಾಜ್ಯ ಸರ್ಕಾರದ ಕೃಷಿ ಇಲಾಖೆಯ ಅಧೀನಕ್ಕೆ ಒಳಪಟ್ಟಿರುವ, ಕಡಬ ತಾಲೂಕು ಕೃಷಿಕ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಕಡಬ ರೈತರ ಸಂಪರ್ಕ ಕೇಂದ್ರದಲ್ಲಿ ಡಿ.31 ರಂದು ನಡೆಯಿತು. ಡಾ. ಸುರೇಶ್ ಕುಮಾರ್ ಕುಡೂರು ಅವರ ಹಂಗಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೃಷಿ ಅಧಿಕಾರಿ ಭರಮಣ್ಣ ಆಯ್ಕೆ ಪ್ರಕ್ರಿಯೆಯನ್ನು ನಡೆಸಿದರು.
14 ನಿರ್ದೇಶಕರುಗಳ ಆಯ್ಕೆಯು ಅವಿರೋಧವಾಗಿ ನಡೆದಿದ್ದು, ಇಂದು ಪದಾಧಿಕಾರಿಗಳ ಆಯ್ಕೆ ನಡೆಯಿತು.
ನೂತನ ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ರಾಕೇಶ್ ರೈ ಕೆಡಂಜಿ, ಉಪಾಧ್ಯಕ್ಷರಾಗಿ ಸುಕುಮಾರ್ ಶಿರಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಸುದರ್ಶನ್ ಕೋಶಾಧಿಕಾರಿಯಾಗಿ ಜಯರಾಮ್ ಭಟ್, ಜಿಲ್ಲಾ ಪ್ರತಿನಿಧಿಯಾಗಿ ಮಹೇಶ್ ಕೆ ಸವಣೂರು ಆಯ್ಕೆಯಾದರು. ನಿರ್ದೇಶಕರುಗಳಾಗಿ ಡಾ ಸುರೇಶ್ ಕುಮಾರ್ ಕುಡೂರು, ಬಾಳಪ್ಪ ಪೂಜಾರಿ, ಉದಯ ರೈ ಮಾದೋಡಿ, ಇ.ಎಸ್ ವಾಸುದೇವ ಇಡ್ಯಾಡಿ, ತಾರಾನಾಥ ಕಾಯರ್ಗ, ರಾಜಾರಾಮ ಪ್ರಭು, ಶೀನಪ್ಪ ಶೆಟ್ಟಿ ನೆಕ್ರಾಜೆ, ಸೋಮನಾಥ ಕನ್ಯಾಮಂಗಲ, ಪ್ರಕಾಶ್ ಪಟ್ಟೆ ಬಲ್ಯ ಆಯ್ಕೆಯಾದರು.