ಕೇಪುಳು ಅಂಗನವಾಡಿ ಕೇಂದ್ರದಲ್ಲಿ ಬಾಲ ಮೇಳ

0

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಕೇಪುಳು ಅಂಗನವಾಡಿ ಕೇಂದ್ರದಲ್ಲಿ ಬಾಲ ಮೇಳ ಇತ್ತೀಚೆಗೆ ನಡೆಯಿತು. ಜಯಶ್ರೀಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಅಂಗನವಾಡಿ ಪುಟಾಣಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು.

ತೇಕ್ಷ ಹಾಗೂ ವಂಶಿ ಉದ್ಘಾಟನಾ ಭಾಷಣ ಮಾಡಿದರು. ನಗರಸಭೆ ಮಾಜಿ ಸದಸ್ಯ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ರೋಟರಿ ಸ್ವರ್ಣದ ಅಧ್ಯಕ್ಷ ಸುರೇಶ್ ಪಿ, ಜುನೈದ್ ಬಿ.ಜೆ,ನಿವೃತ್ತ ಪೊಲೀಸ್ ಅಧಿಕಾರಿ ಮಧು ಟಿ. ಮಕ್ಕಳಿಗೆ ಶುಭಕೋರಿದರು.

ಸುಂದರ ರೈ,ಸುಚಿತ್ರ,ಹಿರಿಯರಾದ ಕಿಟ್ಟಣ್ಣ ಗೌಡ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಮಕ್ಕಳ ಪೋಷಕರು ಶ್ರೀ ಶಕ್ತಿ ಸದಸ್ಯರು ಹಾಗೂ ಸ್ಥಳೀಯರು ಭಾಗವಹಿಸಿದರು. ಮಮತ ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ಸಂಧ್ಯ ಚಂದ್ರಕಲಾ ಕಾರ್ಯಕ್ರಮ ನಿರೂಪಿಸಿದರು. ಸಹಾಯಕಿ ಗಿರಿಜ ಸಹಕರಿಸಿದರು.

ಸನ್ಮಾನ:

ಅಂಗನವಾಡಿಯಲ್ಲಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿದ ಹೆಜಲ್ ಕಾರ್ಯಕ್ರಮದ ಸಂಘಟಕರಾದ ಆದಂ ಸಾಲ್ಮರರನ್ನು ಸನ್ಮಾನಿಸಲಾಯಿತು. ಆಂಗನವಾಡಿ ಕೇಂದ್ರಕ್ಕೆ ಕೊಡುಗೆ ನೀಡಿದ ಬಾಲವಿಕಾಸ ಸಮಿತಿಯ
ಅಧ್ಯಕ್ಷರಾದ ಧನ್ಯ ಯೋಗಿಶ್ ಮೇರ್‍ಲ, ಮಮತ ನಂದ ಕುಮಾರ್, ಅರುಣಾ ಸ್ವಾತಿಯವರಿಗೆ ಸ್ಮರಣೆಕೆ ನೀಡಿ ಗೌರವಿಸಲಾಯಿತು.


LEAVE A REPLY

Please enter your comment!
Please enter your name here