ಪುತ್ತೂರು: ಬೆಳ್ಳಿಪ್ಪಾಡಿ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಜ.5 ಮತ್ತು 6ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ಮಾರ್ಗದರ್ಶನದಲ್ಲಿ ಕಿರು ಷಷ್ಠಿ ಉತ್ಸವ ನಡೆಯಲಿದೆ.
ಜ.5ರಂದು ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ, ಸತ್ಯನಾರಾಯಣ ಪೂಜೆ, ನವಕ ಕಳಸ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ರಂಗಪೂಜೆ, ಕಿರುಷಷ್ಠಿ ಉತ್ಸವ, ಕಟ್ಟೆ ಪೂಜೆ, ಅನ್ನಸಂತರ್ಪಣೆ, ಜ.6ರಂದು ಬೆಳಿಗ್ಗೆಯಿಂದ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಮಹಾ ಅನ್ನಸಂತರ್ಪಣೆ ಮತ್ತು ಕೂಟೇಲಿನಿಂದ ಭಂಡಾರ ಬಂದು ಹುಲಿ ಚಾಮುಂಡಿ ನೇಮ ನಡೆಯಲಿದೆ ಎಂದು ಬೆಳ್ಳಿಪ್ಪಾಡಿ ಫ್ಯಾಮಿಲಿ ಟ್ರಸ್ಟ್ ಗೌರವಾಧ್ಯಕ್ಷ ಬೆಳ್ಳಿಪ್ಪಾಡಿ ರಮಾನಾಥ ರೈ, ಗೌರವ ಯಜಮಾನ ಬೆಳ್ಳಿಪ್ಪಾಡಿ ಸಂಜೀವ ರೈ, ಅಧ್ಯಕ್ಷ ಬೆಳ್ಳಿಪ್ಪಾಡಿ ಗೋಪಾಲಕೃಷ್ಣ ರೈ, ಟ್ರಸ್ಟ್ ಪದಾಧಿಕಾರಿಗಳು, ಬೆಳ್ಳಿಪ್ಪಾಡಿ ಕುಟುಂಬಸ್ಥರು ಮತ್ತು ಗ್ರಾಮಸ್ಥರು ತಿಳಿಸಿದ್ದಾರೆ.
ಹೊರೆಕಾಣಿಕೆ ಸಮರ್ಪಣೆ:
ಜ.4ರಂದು ಸಂಜೆ ಬೆಳ್ಳಿಪ್ಪಾಡಿ ಶ್ರೀ ಸಕಲೇಶ್ವರ ದೇವಸ್ಥಾನ ಮತ್ತು ಶ್ರೀ ಆದಿ ಮೊಗೇರ್ಕಳ ದೈವಸ್ಥಾನದಿಂದ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನಕ್ಕೆ ಹಸಿರು ಹೊರೆ ಕಾಣಿಕೆ ಸಮರ್ಪಣೆ ನಡೆಯಿತು.
ಇಂದು ರಾತ್ರಿ ನಾಗಮಾಣಿಕ್ಯ ನಾಟಕ
ಕಿರು ಷಷ್ಠಿ ಮಹೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಜ. 5ರಂದು ರಾತ್ರಿ ಗಯಾಪದ ಕಲಾವಿದೆರ್ ಉಬಾರ್ ಅಭಿನಯದ ನಾಗ ಮಾಣಿಕ್ಯ ನಾಟಕ ನಡೆಯಲಿದೆ.