ನೆಲ್ಯಾಡಿ: ನೂತನವಾಗಿ ನಿರ್ಮಾಣಗೊಂಡಿರುವ ನೆಲ್ಯಾಡಿ ಸಂತ ಜೋಸೆಫ್ ಮಲಂಕರ ಸಿರಿಯನ್ ಕಥೋಲಿಕ್ ದೇವಾಲಯದ ಪವಿತ್ರೀಕರಣ ವಿಧಿ ಹಾಗೂ ಮಲಂಕರ ಕಥೋಲಿಕ್ ಸಿರಿಯನ್ ಸಭೆಯ ಪುತ್ತೂರು ಧರ್ಮಪ್ರಾಂತ್ಯದ 16ನೇ ವಾರ್ಷಿಕೋತ್ಸವ ಜ.12ರಂದು ನೆಲ್ಯಾಡಿ ಸಂತ ಜೋಸೆಫ್ ಮಲಂಕರ ಸಿರಿಯನ್ ಕಥೋಲಿಕ್ ಚರ್ಚ್ನಲ್ಲಿ ನಡೆಯಿತು.
ಬೆಳಿಗ್ಗೆ ಪರಿಶುದ್ಧ ಮೊರಾನ್ ಮೋರ್ ಬಸೇಲಿಯೋಸ್ ಕಾರ್ಡಿನಲ್ ಕ್ಲೀಮಿಸ್ ಕಾಥೊಲಿಕೋಸ್ ಮತ್ತು ಧರ್ಮಾಧ್ಯಕ್ಷರುಗಳಿಗೆ ದೇವಾಲಯದ ಮುಖ್ಯದ್ವಾರದಲ್ಲಿ ಸ್ವಾಗತ ಕೋರಲಾಯಿತು. ಬಳಿಕ ಪರಿಶುದ್ಧ ಮೋರಾನ್ ಮೋರ್ ಬಸೇಲಿಯೋಸ್ ಕಾರ್ಡಿನಲ್ ಕ್ಲೀಮಿಸ್ ಕಾಥೋಲಿಕೋಸ್ರವರ ಪ್ರಧಾನ ಕಾರ್ಮಿಕತ್ವದಲ್ಲಿ ಹಾಗೂ ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಬಿಷಪ್ ಗೀವರ್ಗೀಸ್ ಮಾರ್ ಮಕ್ಕಾರಿಯೋಸ್ರವರ ಸಹ ಕಾರ್ಮಿಕತ್ವದಲ್ಲಿ ದೇವಾಲಯದ ಪವಿತ್ರೀಕರಣ ವಿಧಿ, ಕೃತಜ್ಞತಾ ಬಲಿ, ಅನುಸ್ಮರಣೆ ನಡೆಯಿತು.
ಸಭಾ ಕಾರ್ಯಕ್ರಮ:
ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಪರಿಶುದ್ಧ ಮೊರಾನ್ ಮೋರ್ ಬಸೇಲಿಯೋಸ್ ಕಾರ್ಡಿನಲ್ ಕ್ಲೀಮಿಸ್ ಕಾಥೊಲಿಕೋಸ್ರವರು ಆಶೀರ್ವಚನ ನೀಡಿದರು. ದೇವಾಲಯಗಳು ಭಕ್ತರ ತಮೋ ಗುಣಗಳನ್ನು ಆಧ್ಯಾತ್ಮ ಮತ್ತು ಸಾತ್ವಿಕ ಗುಣಗಳನ್ನಾಗಿ ಪರಿವರ್ತಿಸುವ ಕೇಂದ್ರಗಳಾಗಿ ಬದಲಾವಣೆಯಾಗಬೇಕೆಂದು ಅವರು ಹೇಳಿದರು. ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಗೀವರ್ಗೀಸ್ ಮಾರ್ ಮಕ್ಕಾರಿಯೋಸ್, ಪುತ್ತೂರು ಧರ್ಮಪ್ರಾಂತ್ಯದ ಪಾಸ್ಟರಲ್ ಕೌನ್ಸಿಲ್ ಜೋನ್ಸನ್ ಟಿ.ಎಂ.ಅವರು ಶುಭಹಾರೈಸಿದರು. ಪುತ್ತೂರು ಧರ್ಮಪ್ರಾಂತ್ಯದ ಜನರಲ್ ಕನ್ವೀನರ್ ರೈಟ್ ರೆ|ಡಾ|ಎಲ್ದೋ ಪುತ್ತನ್ ಕಂಡತ್ತಿಲ್ ಕೋರ್ ಎಪಿಸ್ಕೋಪಾ ಸ್ವಾಗತಿಸಿದರು. ಕನ್ವೀನರ್ ಫಾ.ಜೋನ್ ಕುನ್ನತ್ತೇತ್ ವಂದಿಸಿದರು. ನೆಲ್ಯಾಡಿ ಸಂತ ಜೋಸೆಫ್ ಮಲಂಕರ ಸಿರಿಯನ್ ಕಥೋಲಿಕ್ ಚರ್ಚ್ನ ಸೆಕ್ರೆಟರಿ ಶಾಜಿ ಯು.ವಿ., ಟ್ರಸ್ಟಿ ವಿನೋದ್ ಎನ್.ಜೆ. ಹಾಗೂ ಇತರೇ ಸದಸ್ಯರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಮಧ್ಯಾಹ್ನ ಸಹಭೋಜನ ನಡೆಯಿತು.
ಸನ್ಮಾನ:
ನೂತನ ಚರ್ಚ್ನ ಪವಿತ್ರೀಕರಣ ವಿಧಿ ನೆರವೇರಿಸಿದ ಮೋರಾನ್ ಮೋರ್ ಬಸೇಲಿಯೋಸ್ ಕಾರ್ಡಿನಲ್ ಕ್ಲೀಮಿಸ್ ಕಾಥೋಲಿಕೋಸ್, ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಬಿಷಪ್ ಗೀವರ್ಗೀಸ್ ಮಾರ್ ಮಕ್ಕಾರಿಯೋಸ್, ಬೈಜು ಎಸ್.ಆರ್., ನಿವೃತ್ತ ಯೋಧ ಎನ್.ಎ.ಮ್ಯಾಥ್ಯು, ಎಎಸ್ಐ ಚಾಕೋ ಕೆ.ಟಿ., ಜನರಲ್ ಕನ್ವೀನರ್ ರೈಟ್ ರೆ|ಡಾ|ಎಲ್ದೋ ಪುತ್ತನ್ ಕಂಡತ್ತಿಲ್ ಕೋರ್ ಎಪಿಸ್ಕೋಪಾ, ಕನ್ವೀನರ್ ಫಾ.ಜೋನ್ ಕುನ್ನತ್ತೇತ್, ಸಿ| ಶೋಭಾ, ರೆ.ಫಾ.ಝಕಾರಿಯಾಸ್, ನೂತನ ಚರ್ಚ್ನ ವಿವಿಧ ಕೆಲಸ ನಿರ್ವಹಿಸಿದ ಬಿಜೋಯ್, ಜಯಕುಮಾರ್, ರಮೇಶ್, ವಿವಿಧ ರೀತಿಯಲ್ಲಿ ಸಹಕಾರ ನೀಡಿದ ಆಂಟನಿ, ವಿನೋದ್, ಶಾಜಿ ಯು.ವಿ., ಜೋಸೆಫ್ ವಿ.ಜೆ. ನಯನ್ಟ್ರೇಡರ್ಸ್, ಎ.ಸಿ.ಕುರಿಯನ್ ಮಂಗಳೂರು, ಕೆ.ಟಿ.ವರ್ಗೀಸ್ ಕಾಕನಾಟ್, ಡಾ.ತೋಮಸ್ ಬೆಂಗಳೂರು, ಚೆರಿಯನ್ ಪಿ.ಕೆ.ಬೆಂಗಳೂರು, ಚಾಕ್ಸನ್ ಕಾಲಾಯಿಲ್ ಬೆಂಗಳೂರು, ಜೇಕಬ್ ಮೂಡಬಿದ್ರೆ ಅವರನ್ನು ಸನ್ಮಾನಿಸಲಾಯಿತು. ಶೈಲಾಜೋರ್ಜ್ ಸನ್ಮಾನಿತರ ಹೆಸರು ವಾಚಿಸಿದರು.