ನೆಲ್ಯಾಡಿ ಜೇಸಿಐ 2025ನೇ ಸಾಲಿನ ಅಧ್ಯಕ್ಷರ, ಪದಾಧಿಕಾರಿಗಳ ಪದಸ್ವೀಕಾರ

0

ನೆಲ್ಯಾಡಿ: ಜೇಸಿಐ ನೆಲ್ಯಾಡಿ ಇದರ 2025ನೇ ಸಾಲಿನ, 42ನೇ ವರ್ಷದ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ ಮತ್ತು ತಂಡದ ಪದಸ್ವೀಕಾರ ಸಮಾರಂಭ ಜ.16ರಂದು ಸಂಜೆ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.


ಮುಖ್ಯ ಅತಿಥಿಯಾಗಿದ್ದ ಜೇಸಿಐ ವಲಯ 15ರ ವಲಯಾಧ್ಯಕ್ಷ ಅಭಿಲಾಷ್ ಬಿ.ಎ.,ಅವರು ಪದಗ್ರಹಣ ನೆರವೇರಿಸಿ ಮಾತನಾಡಿ, ಜೇಸಿಐ ಮೂಲಕ ವ್ಯಕ್ತಿತ್ವ ವಿಕಸನ ಆಗಲಿದೆ. 18 ರಿಂದ 40ವರ್ಷ ವಯಸ್ಸಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಜೇಸಿಐಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದ ಅವರು, ನೆಲ್ಯಾಡಿ ಜೇಸಿಐ ವಲಯದಲ್ಲಿ ಅತೀ ಹೆಚ್ಚು ಸಕ್ರೀಯವಾಗಿದೆ. 2024ರ ಸಾಲಿನ ಅಧ್ಯಕ್ಷೆ ಸುಚಿತ್ರಾ ಜೆ.ಬಂಟ್ರಿಯಾಲ್ ಅವರ ಅವಧಿಯಲ್ಲಿ ಜೇಸಿಐ ಮೂಲಕ ಹಲವಾರು ಸಾಮಾಜಿಕ ಕೆಲಸಗಳು ನಡೆದಿರುವುದಕ್ಕೆ ಮೆಚ್ಚುಗೆ ಸೂಚಿಸಿದರು.


ಇನ್ನೋರ್ವ ಅತಿಥಿ ಉದ್ಯಮಿ, ಭಾರತ ಹಾಗೂ ಮಾಲ್ಡೀವ್ಸ್ ಟ್ರೇಡ್ ಕೌನ್ಸಿಲ್‌ನ ಉಪಾಧ್ಯಕ್ಷರೂ ಆದ ಹೇಮಂತ ರೈ ಮನವಳಿಕೆ ಅವರು ಮಾತನಾಡಿ, ಜೇಸಿಯಂತಹ ಸಂಸ್ಥೆಗಳ ಮೂಲಕ ಸಾಮಾಜಿಕ ಚಟುವಟಿಕೆ ಸಾಧ್ಯವಿದೆ. ಯುವ ಜನತೆ ಇದರಲ್ಲಿ ತೊಡಗಿಕೊಳ್ಳಬೇಕೆಂದು ಹೇಳಿದರು. ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕರಾದ ರೆ.ಫಾ.ನೋಮೀಸ್ ಪಿ.ಕುರಿಯಾಕೋಸ್‌ರವರು ಮಾತನಾಡಿ, ಸಂಸ್ಥೆಯಲ್ಲಿ ಜೇಸಿಯ ಕಾರ್ಯಕ್ರಮಗಳಿಗೆ ಮುಕ್ತ ಅವಕಾಶವಿದೆ. ನೆಲ್ಯಾಡಿ ಜೇಸಿಯಿಂದ ಇನ್ನಷ್ಟೂ ಸಾಮಾಜಿಕ ಚಟುವಟಿಕೆ ನಡೆಯಲಿ ಎಂದರು.

ಜೇಸಿಐ ವಲಯ ಉಪಾಧ್ಯಕ್ಷ ಸಂತೋಷ್ ಶೆಟ್ಟಿ ಅವರು ಮಾತನಾಡಿ, ಜೇಸಿಐಯ ಚಟುವಟಿಕೆಗಳು ಎಲ್ಲಾ ವರ್ಗದ ಜನರಿಗೆ ತಲುಪುವಂತಾಗಬೇಕು. ಈ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಬೇಕೆಂದು ಹೇಳಿದರು. ನೆಲ್ಯಾಡಿ ಜ್ಯೋತಿರ್ವೈದ್ಯ ಚಿಕಿತ್ಸಾಲಯದ ಡಾ.ಅನೀಶ್ ಅವರು ಮಾತನಾಡಿ, ಜೇಸಿಐಯಂತಹ ಸಂಸ್ಥೆಗಳು ವ್ಯಕ್ತಿಯ ಬೆಳವಣಿಗೆಗೆ ಸಹಕಾರಿಯಾಗಿವೆ. ಜೇಸಿಯ ವಿಚಾರಗಳು ಸಮಾಜದ ಕಟ್ಟಕಡೆಯ ವ್ಯಕ್ತಿಯ ಮನೆಗೂ, ಮನಸ್ಸಿಗೂ ತಲುಪಬೇಕು ಎಂದರು. ನೆಲ್ಯಾಡಿ ಜೆಸಿಐ ನಿಕಟಪೂರ್ವ ಅಧ್ಯಕ್ಷ ದಯಾಕರ ರೈ ಸಂದರ್ಭೋಚಿತವಾಗಿ ಮಾತನಾಡಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ೨೦೨೪ನೇ ಘಟಕಾಡಳಿತ ಮಂಡಳಿ ಅಧ್ಯಕ್ಷೆ ಸುಚಿತ್ರಾ ಜೆ.ಬಂಟ್ರಿಯಾಲ್ ಅವರು ಸಹಕರಿಸಿದ ಜೆಸಿಐ ಸದಸ್ಯರಿಗೆ, ಪೂರ್ವಾಧ್ಯಕ್ಷರಿಗೆ ಸ್ಮರಣಿಕೆ ನೀಡಿ ಶಾಲು ಹಾಕಿ ಗೌರವಿಸಿದರು. ಪದಸ್ವೀಕಾರ ಮಾಡಿದ ನೂತನ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ ಅವರು ಸಹಕಾರ ಕೋರಿದರು.


ಸನ್ಮಾನ:
ಜೇಸಿಐ ವಲಯ 19ರ ವಲಯಾಧ್ಯಕ್ಷ ಅಭಿಲಾಷ್ ಬಿ.ಎ., ಉಪಾಧ್ಯಕ್ಷ ಸಂತೋಷ್ ಶೆಟ್ಟಿ, ಅತಿಥಿಗಳಾಗಿದ್ದ ಹೇಮಂತ್ ರೈ ಮನವಳಿಕೆ, ರೆ.ಫಾ.ನೋಮಿಸ್ ಕುರಿಯಾಕೋಸ್, ಡಾ.ಅನೀಶ್, ಐಪಿಪಿ ದಯಾಕರ ರೈ ಅವರನ್ನು ಜೇಸಿಐ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ನಿರ್ಗಮನ ಅಧ್ಯಕ್ಷೆ ಸುಚಿತ್ರಾ ಜೆ.ಬಂಟ್ರಿಯಾಲ್ ಹಾಗೂ ಪೂರ್ವಾಧ್ಯಕ್ಷ ಜಯಾನಂದ ಬಂಟ್ರಿಯಾಲ್ ಅವರನ್ನು ಜೇಸಿಐ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.


ನೂತನ ಸದಸ್ಯರ ಸೇರ್ಪಡೆ:
ಹರೀಶ್ ರೈ ಆಮುಂಜ, ಶ್ರೇಯಸ್ ಶೆಟ್ಟಿ, ಡಾ.ನೂರುಂದಪ್ಪ, ಅಶೋಕ್ ರೈ ಆಮುಂಜ, ಹರೀಶ್ ಬಿ., ಜೇಸಿಐ ಸದಸ್ಯರಾಗಿ ಸೇರ್ಪಡೆಗೊಂಡರು. ಸುರಕ್ಷಿತಾ ಶೆಟ್ಟಿ, ವಿನ್ಯಾಸ್ ಬಂಟ್ರಿಯಾಲ್, ರಷ್ಮಾ ರೈ, ಮೋಹನ್ ಡಿ.,ಅವರು ನೂತನ ಸದಸ್ಯರನ್ನು ಪರಿಚಯಿಸಿದರು.

2004ನೇ ಸಾಲಿನ ಮಹಿಳಾ ಜೇಸಿ ಅಧ್ಯಕ್ಷೆ ಲೀಲಾ ಮೋಹನ್, ಜೆಜೆಸಿ ಅಧ್ಯಕ್ಷ ಶಮಂತ್, ೨೦೨೫ನೇ ಸಾಲಿನ ಕಾರ್ಯದರ್ಶಿ ನವ್ಯಾಪ್ರಸಾದ್, ಮಹಿಳಾ ಜೇಸಿ ಅಧ್ಯಕ್ಷೆ ಪ್ರವೀಣಿ ಸುಧಾಕರ ಶೆಟ್ಟಿ, ಜೆಜೆಸಿ ಅಧ್ಯಕ್ಷ ಮಂಜಿತ್ ಎಂ.ಕೆ., ಯೋಜನಾ ನಿರ್ದೇಶಕರಾದ ಪುರಂದರ ಗೌಡ ಡೆಂಜ, ವಿನ್ಯಾಸ್ ಬಂಟ್ರಿಯಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪೂರ್ವಾಧ್ಯಕ್ಷರಾದ ನಾರಾಯಣ ಎನ್.ಬಲ್ಯ, ವಿಶ್ವನಾಥ ಶೆಟ್ಟಿ, ಜೋನ್ ಪಿ.ಎಸ್., ಶಿವಪ್ರಸಾದ್ ಅವರು ಅತಿಥಿಗಳನ್ನು ಪರಿಚಯಿಸಿದರು. ನೂತನ ಅಧ್ಯಕ್ಷರನ್ನು ಗಣೇಶ್ ಕೆ.ರಶ್ಮಿ ಪರಿಚಯಿಸಿದರು. ಸುಚಿತ್ರಾ ಜೆ.ಬಂಟ್ರಿಯಾಲ್ ಸ್ವಾಗತಿಸಿ, 2024ನೇ ಸಾಲಿನ ವರದಿ ಮಂಡಿಸಿದರು. ನವ್ಯಾಪ್ರಸಾದ್ ವಂದಿಸಿದರು. ಜಾಹ್ನವಿ ಜೇಸಿವಾಣಿ ವಾಚಿಸಿದರು. ಪೂರ್ವಾಧ್ಯಕ್ಷ ರವೀಂದ್ರ ಟಿ., ವೇದಿಕೆಗೆ ಆಹ್ವಾನಿಸಿದರು. ಪೂರ್ವಾಧ್ಯಕ್ಷ ಜಯಾನಂದ ಬಂಟ್ರಿಯಾಲ್ ಹಾಗೂ ಸದಸ್ಯರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here