ಪುತ್ತೂರು : ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ 10ನೇ ತರಗತಿಗಳ ವಿದ್ಯಾರ್ಥಿಗಳ ಬೀಳ್ಕೊಡುಗೆ, ‘ಪ್ರಣತಿ ಪ್ರಸರಣ ‘ ಕಾರ್ಯಕ್ರಮ ಜ.22ರಂದು ನಡೆಯಿತು.
ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಡಾ. ಸುಧಾ ಎಸ್. ರಾವ್ ಅತಿಥಿಯಾಗಿ ಭಾಗವಹಿಸಿ ಜೀವನದಲ್ಲಿ ಪ್ರಾಮಾಣಿಕತೆ, ಒಳ್ಳೆಯ ನಡತೆ, ಆತ್ಮವಿಶ್ವಾಸ ಮುಂತಾದ ಮೌಲ್ಯಗಳನ್ನು ರೂಢಿಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ ಎಂದರು.
ಆಡಳಿತ ಮಂಡಳಿಯ ಸದಸ್ಯೆ ಶಂಕರಿ ಶರ್ಮ ಅವರು ಮಕ್ಕಳನ್ನು ಉದ್ದೇಶಿಸಿ, ಜೀವನದಲ್ಲಿ ಜ್ಞಾನ, ಕರ್ತವ್ಯ ಮತ್ತು ತೃಪ್ತಿಗಳನ್ನು ಪಡೆಯುವುದರ ಬಗ್ಗೆ ಕಥೆಗಳ ಮೂಲಕ ತಿಳಿಸುತ್ತಾ, ಮಕ್ಕಳು ಉತ್ತಮ ಗುಣಗಳನ್ನು ತಮ್ಮಲ್ಲಿ ಅಳವಡಿಕೊಂಡು, ಚೆನ್ನಾಗಿ ಅಭ್ಯಾಸ ನಡೆಸಿ, ಮುಂದಿನ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವಂತೆ ಹರಸಿ, ಮಕ್ಕಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಆಡಳಿತ ಮಂಡಳಿಯ ಅಧ್ಯಕ್ಷೆ ವಸಂತಿ ಕೆ. , ಮಕ್ಕಳಿಗೆ ಜೀವನದಲ್ಲಿ ಶಿಸ್ತು, ಪ್ರಾಮಾಣಿಕತೆ ಮುಂತಾದ ನೈತಿಕ ಮೌಲ್ಯಗಳನ್ನು ರೂಢಿಸಿಕೊಂಡು ಯಶಸ್ವಿ ಜೀವನವನ್ನು ನಡೆಸಿ ಹಾಗೂ ಮುಂದೆ ಬರುವ ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಿ ಶಾಲೆಗೆ ಕೀರ್ತಿ ತನ್ನಿ ಎಂದರು.
ಶೈಕ್ಷಣಿಕ ಸಲಹೆಗಾರ್ತಿ ಅನುರಾಧ ಶಿವರಾಂ, ಶಾಲಾ ಪ್ರಾಂಶುಪಾಲೆ ಸಿಂಧು ವಿ. ಜಿ , ಶಿಕ್ಷಕರಾದ ರವಿಪ್ರಸಾದ್ ಎಂ. ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರು, ಸಿಬ್ಬಂದಿ ವರ್ಗದವರು ಹಾಗೂ 9, 10ನೇ ತರಗತಿಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಾಲಾ ಶಿಕ್ಷಕಿಯಾದ ಪ್ರಫುಲ್ಲ ಕೆ. ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಅದಿತಿ ಮತ್ತು ಶ್ಯಾಮ್ ನಿರೂಪಿಸಿ, ಶಾಲಾ ಶಿಕ್ಷಕಿ ಜಯಶ್ರೀ ಕೆ. ಎನ್ ವಂದಿಸಿದರು.