ಪುತ್ತೂರು: ಪುತ್ತೂರು ಶಾಸಕ ಅಶೋಕ್ ರೈ ಅವರ ಶಿಫಾರಸ್ಸಿನಂತೆ ನೀರಾವರಿ ಇಲಾಖೆಯ ವತಿಯಿಂದ ಪುತ್ತೂರು ತಾಲೂಕಿನ 11 ಮಂದಿ ಕೃಷಿಕರಿಗೆ ಕೊಳವೆಬಾವಿ ಮಂಜೂರಾಗಿದೆ.
ಪರಿಶಿಷ್ಟ ಜಾತಿಯ ನಾಲ್ವರು ಹಾಗೂ ಪ.ಪಂಗಡದ 7 ಮಂದಿ ಸೇರಿ ಒಟ್ಟು 11 ಮಂದಿಗೆ ಕೃಷಿ ಕೊಳವೆ ಬಾವಿ ಮಂಜೂರಾಗಿದೆ. ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಕುಂಞ, ಕೆಯ್ಯೂರು ಗ್ರಾಮದ ಕೇಶವ , ಸರ್ವೆ ಗ್ರಾಮದ ಅಣ್ಣು, ಕೆದಂಬಾಡಿ ಗ್ರಾಮದ ಸೋಮಯ್ಯ, ನಿಡ್ಪಳ್ಳಿ ಗ್ರಾಮದ ಸರೋಜಿನಿ, ಕೆದಿಲಾ ಗ್ರಾಮದ ವೆಂಕಪ್ಪ ನಾಯ್ಕ, ಕಬಕ ಗ್ರಾಮದ ಪಾಣಡ್ಕ ನಿವಾಸಿ ಕೃಷ್ಣಪ್ಪ ನಾಯ್ಕ,ಕಬಕ ಗ್ರಾಮ ಪಂಬೆತ್ತಮಜಲು ಕೃಷ್ಣಪ್ಪ ನಾಯ್ಕ, ನೆಟ್ಟಣಿಗೆ ಮುಡ್ನೂರು ಗ್ರಾಮದ ಮೇನಾಲ ನಿವಾಸಿ ಗೀತಾ, ಬಡಗನ್ನೂರು ಗ್ರಾಮದ ಸುಳ್ಯಪದವು ಪ್ರೇರಾಪುನಿ ಕೃಷ್ಣಪ್ಪ ನಾಯ್ಕ, ನಿಡ್ಪಳ್ಳಿ ಗ್ರಾಮದ ಬಾಜೋಳಿ ನಾರಾಯಣ ನಾಯ್ಕ, ಮತ್ತು ನಿಡ್ಪಳ್ಳಿ ಗ್ರಾಮದ ಲೀಲಾವತಿ ಯವರಿಗೆ ಕೊಳವೆ ಬಾವಿ ಮಂಜೂರಾಗಿದೆ.
ಸರಕಾರದಿಂದ ದೊರೆಯುವ ಸೌಲಭ್ಯಗಳು ಗ್ರಾಮದ ಕಟ್ಟಕಡೆಯ ವ್ಯಕ್ತಿಗೂ ದೊರೆಯುವಂತಾಗಬೇಕು ಎಂಬ ನಿಟ್ಟಿನಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಕೊಳವೆ ಬಾವಿ ನೀಡಲಾಗಿದೆ. ಇದೀಗ 11 ಕೊಳವೆ ಬಾವಿ ಮಂಜೂರಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕೊಳವೆ ಬಾವಿ ಮಂಜೂರಾಗುವುದಿದ್ದು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಕೊಡಲಾಗುತ್ತದೆ. ರಾಜ್ಯದ ಕಾಂಗ್ರೆಸ್ ಸರಕಾರ ಎಲ್ಲಾ ಕ್ಷೇತ್ರದಲ್ಲಿಯೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು , ಬಡವರ ಮನೆ ಬೆಳಗುವ ಕೆಲಸವನ್ನು ಮಾಡುತ್ತಿದೆ.
ಅಶೋಕ್ ರೈ ಶಾಸಕರು ಪುತ್ತೂರು