ನಿಡ್ಪಳ್ಳಿ: ದೈವಗಳ ವರ್ಷಾವಧಿ ಜಾತ್ರೋತ್ಸವ ಸಂಪನ್ನ

0


ನಿಡ್ಪಳ್ಳಿ: ಶ್ರೀ ಕಿನ್ನಿಮಾಣಿ ಪೂಮಾಣಿ ಪರಿವಾರ ದೈವಸ್ಥಾನ ಶ್ರೀ ಕ್ಷೇತ್ರ ನಿಡ್ಪಳ್ಳಿ ಇದರ ವರ್ಷಾವಧಿ ಜಾತ್ರೋತ್ಸವ ಕಾರ್ಯಕ್ರಮ ಜ.19 ರಿಂದ 24ರವರೆಗೆ ನಿಡ್ಪಳ್ಳಿ ಶ್ರೀ ಉಳ್ಳಾಕುಲು ಮಾಡದಲ್ಲಿ ಬ್ರಹ್ಮಶ್ರೀ ದೇಲಂಪಾಡಿ ಗಣೇಶ್ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.


ದಿನಾಂಕ- 19 ರಂದು ರಾತ್ರಿ ಗುತ್ತುಚಾವಡಿಯಿಂದ ಪಿಲಿಭೂತ ಹಾಗೂ ಮಲರಾಯ ದೈವಗಳ ಭಂಡಾರ ಉಳ್ಳಾಕುಲು ಮಾಡಕ್ಕೆ ತೆರಳಿಯಿತು. ದಿನಾಂಕ-20 ರಂದು ಪ್ರಾತಃಕಾಲ ಉಳ್ಳಾಕುಲು ಮಾಡದಲ್ಲಿ ಮಕರ ತೋರಣ ಏರಿಸಿ ಧ್ವಜಾರೋಹಣ ಆಗಿ ತಂಬಿಲ ನಡೆಯಿತು. ಸಂಜೆ ತೋರಣ ಒಪ್ಪಿಸಿ ನಂತರ ದೈವಗಳಿಗೆ ತಂಬಿಲ ನಡೆಯಿತು. ದಿನಾಂಕ- 21 ರಂದು ಬೆಳಿಗ್ಗೆ ಕಿನ್ನಿಮಾಣಿ ದೈವಗಳ ನೇಮೋತ್ಸವ ಮಧ್ಯಾಹ್ನ ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಿತು. ಸಂಜೆ ತೋರಣ ಒಪ್ಪಿಸುವುದು ನಂತರ ದೈವಗಳಿಗೆ ತಂಬಿಲ ನಡೆಯಿತು. ದಿನಾಂಕ-22 ರಂದು ಪೂಮಾಣಿ ದೈವಗಳ ನೇಮೋತ್ಸವ ನಂತರ ಮಧ್ಯಾಹ್ನ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು. ರಾತ್ರಿ ದೇರ್ಲ ಮನೆಯಿಂದ ಧೂಮಾವತಿ ದೈವದ ಭಂಡಾರ ಬಂದು ನಂತರ ಪಿಲಿಭೂತ ದೈವದ ನೇಮೋತ್ಸವ ಪ್ರಸಾದ ವಿತರಣೆ ನಡೆಯಿತು.


ದಿನಾಂಕ-23 ರಂದು ಪ್ರಾತಃಕಾಲ ಧೂಮಾವತಿ ದೈವದ ನೆಮೋತ್ಸವ ನಡೆದು ಪ್ರಸಾದ ವಿತರಣೆ ನಡೆಯಿತು. ಬೆಳಿಗ್ಗೆ ಮಲರಾಯ ದೈವದ ನೇಮೋತ್ಸವ ನಂತರ ಮಧ್ಯಾಹ್ನ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಆನಾಜೆ ಎಂಬಲ್ಲಿ ಉಳ್ಳಾಕುಲು ದೈವಗಳ ಅವಭೃತಸ್ನಾನ ಹಾಗೂ ನಾಗನಕಟ್ಟೆಯಲ್ಲಿ ನಾಗತಂಬಿಲ ಮತ್ತು ದೈವಗಳಿಗೆ ತಂಬಿಲ ನಡೆಯಿತು. ದಿನಾಂಕ-24 ರಂದು ಪ್ರಾತಃಕಾಲ ಧ್ವಜಾರೋಹಣ ನಡೆದು ದೈವಗಳ ಭಂಡಾರ ಮರಳಿ ಗುತ್ತು ಚಾವಡಿಗೆ ತರಲಾಯಿತು. ಬೆಳಿಗ್ಗೆ ಕಾನ ತರವಾಡು ಮನೆಯಿಂದ ಇಷ್ಟದೇವತೆಯ ಭಂಡಾರ ಬಂದು ಇಷ್ಟದೇವತೆಯ ನೇಮೋತ್ಸವ ಪ್ರಸಾದ ವಿತರಣೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆದು ವರ್ಷಾವಧಿ ಜಾತ್ರೋತ್ಸವ ಸಂಪನ್ನಗೊಂಡಿತು. ಪಟ್ಟಾದೀಶ ಅನುವಂಶಿಕ ಆಡಳಿತ ಮೊಕ್ತೇಸರ ಪ್ರವೀಣ್ ಎನ್, ಅರಿಗ ನಿಡ್ಪಳ್ಳಿ ಗುತ್ತು, ಹಿರಿಯರಾದ ವಾಸುದೇವ ಭಟ್ ಮುಂಡೂರು, ವಸಂತಿ ಜೆ, ಆರಿಗ ನಿಡ್ಪಳ್ಳಿ ಗುತ್ತು, ಪ್ರಮೋದ್ ಆರಿಗ ನಿಡ್ಪಳ್ಳಿ ಗುತ್ತು ಮತ್ತು ಮನೆಯವರು, ಭರತ್ ಕುಮಾರ್ ಆರಿಗ ಪಟ್ಟೆ ಗುತ್ತು ಹಾಗೂ ಗ್ರಾಮದ 12 ಬಾರಿಕೆ ಮನೆಯವರು ಮತ್ತು ಊರ ಪರವೂರ ಸುಮಾರು 5 ಸಾವಿರಕ್ಕಿಂತಲೂ ಮಿಕ್ಕಿ ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here