ಪುತ್ತೂರು: ನಮ್ಮ ಸಂಸ್ಕೃತಿ ಸ್ವಚ್ಛ ಸಂಸ್ಕೃತಿ ಸ್ವಚ್ಛ ಪುತ್ತೂರು ಬೃಹತ್ ಶ್ರಮದಾನ ಅಭಿಯಾನದ ಅಡಿಯಲ್ಲಿ ಜ.24ರಂದು ನರಿಮೊಗರು ಗ್ರಾಮದ ಪುರುಷರಕಟ್ಟೆಯಿಂದ ಬೆದ್ರಾಳ ತನಕ ರಾಜ್ಯ ಹೆದ್ದಾರಿಯ ಹಿಕ್ಕೆಲಗಳಲ್ಲಿ ಸ್ವಚ್ಛತಾ ಶ್ರಮದಾನವನ್ನು ನಡೆಸಲಾಯಿತು.
ಸುಮಾರು 650 ಕಿಲೋ ತ್ಯಾಜ್ಯವನ್ನು ಸಂಗ್ರಹಿಸಲಾಯಿತು. ಸ್ವಚ್ಛತಾ ಶ್ರಮದಾನದಲ್ಲಿ ನೋಡಲ್ ಅಧಿಕಾರಿ ವಿಷ್ಣು ಪ್ರಸಾದ್ ಸಿ, ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಪುತ್ತೂರು, ಗ್ರಾಮ ಪಂಚಾಯತ್ನ ಅಧ್ಯಕ್ಷರಾದ ಹರಣಿ ಪಂಜಾಳ, ಉಪಾಧ್ಯಕ್ಷ ಉಮೇಶ್ ಇಂದಿರಾನಗರ ಹಾಗೂ ಗ್ರಾಮ ಪಂಚಾಯತ್ ಸದಸ್ಯರು, ಪಂಚಾಯತ್ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ, ಗ್ರಂಥಪಾಲಕ ವರುಣ್ ಕುಮಾರ್, ಆಶಾಕಾರ್ಯಕರ್ತೆಯರು, ಸಮುದಾಯ ಆರೋಗ್ಯ ಅಧಿಕಾರಿಯವರು, ಶ್ರೀ ದುರ್ಗಾ ಸಂಜೀವಿನಿ ಒಕ್ಕೂಟ ನರಿಮೊಗರು ಇದರ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು ಪುತ್ತೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನವೀನ ಭಂಡಾರಿ ಎಚ್ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.