ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ ಜಾತ್ರೆ ಫೆ.3 ಮತ್ತು 4ರಂದು ನಡೆಯಲಿದ್ದು, ಇದರ ಪ್ರಯುಕ್ತ ಜ.24ರಂದು ಗೊನೆಮುಹೂರ್ತ ನಡೆಯಿತು.
ಬೆಳಿಗ್ಗೆ ಕೆಮ್ಮಾಯಿ ಶ್ರೀಮಹಾವಿಷ್ಣುಮೂರ್ತಿ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಬಳಿಕ ಸದಾಶಿವ ಹೊಳ್ಳರು ಗೊನೆಮುಹೂರ್ತ ನೆರವೇರಿಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಪತಿ ಬೈಪಾಡಿತ್ತಾಯ, ಶ್ರೀಧರ ಬೈಪಾಡಿತ್ತಾಯ, ರಾಮಣ್ಣ ಗೌಡ ಬಡಾವು, ವಿಶ್ವನಾಥ ಗೌಡ ಏಕ, ಚಂದ್ರಶೇಖರ ಪಾಟಾಳಿ ಕೆಮ್ಮಾಯಿ, ಪುರುಷೋತ್ತಮ ಪೂಜಾರಿ ಅನಂತಿಮಾರು, ದಯಾನಂದ ಗೌಡ ಕೆಮ್ಮಾಯಿ, ರಘುನಾಥ ರೈ ಏಕ, ಹೇಮಚಂದ್ರ ಕೆಮ್ಮಾಯಿ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.