ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಗಣರಾಜ್ಯೋತ್ಸವ ಆಚರಣೆ

0

ಪುತ್ತೂರು: ಸವಣೂರಿನ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ 76ನೇ ಗಣರಾಜ್ಯೋತ್ಸವ ಆಚರಸಿದರು.ಸಂಸ್ಥೆಯ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಅವರು ಧ್ವಜಾರೋಹಣಗೈದರು.

ಬಳಿಕ ಮಾತನಾಡಿದ ಅವರು ಮಕ್ಕಳು ಉತ್ತಮ ವ್ಯಕ್ತಿತ್ವ ಅಳವಡಿಸಿಕೊಂಡು ಸತ್ ಪ್ರಜೆಯಾಗಿ ಬದುಕಿ ಬಾಳಿ ಎಂದು ಕರೆಯಿತ್ತರು.ರಾಯಲ್ ಎನ್ಫೀಲ್ಡ್ ರೈಡರ್ಸ್ ಪುತ್ತೂರು, ವಿದ್ಯಾರಶ್ಮಿ ‌ ಸಂಸ್ಥೆಯ ಪ್ರಾಂಶುಪಾಲ ಡಾ. ರಾಜಲಕ್ಷ್ಮಿ, ಶಶಿಕಲಾ ಎಸ್ ಆಳ್ವ ಮತ್ತು ಸೀತಾರಾಮ ಕೇವಳ, ಹಾಗೂ ಶಿಕ್ಷಕ ವೃಂದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಹತ್ತನೇ ತರಗತಿಯ ಅಭಿಷೇಕ್ ಗೌಡ ಕಮಾಂಡರ್ ಆಗಿ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಶಮಾ ಸ್ವಾಗತಿಸಿ, ಹತ್ತನೇ ತರಗತಿಯ ವೈಷ್ಣವಿ ವಂದಿಸಿದರು. ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಪ್ರತಿಭಾ ಭಟ್ ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಜೀವಿತ ಮತ್ತು ಬಳಗ ದವರು ದ್ವಜ ಗೀತೆ ಮತ್ತು ರಾಷ್ಟ್ರಗೀತೆಗಳನ್ನು ಹಾಡಿದರು.

LEAVE A REPLY

Please enter your comment!
Please enter your name here