ಷಣ್ಮುಖದೇವ ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

0

ಪುತ್ತೂರು: ಷಣ್ಮುಖದೇವ ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲಾ ಸಂಚಾಲಕ ಶಿವರಾಮ ಭಟ್ ಬೀರ್ಣಕಜೆ ಇವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡುಗೈ ದಾನಿ, ಶಾಲೆಯ ಹಿತೈಷಿ ಎಸ್ ವಿ ರಮಣ್ ಸಿದ್ಧಮೂಲೆ ಇವರು ಧ್ವಜಾರೋಹಣ ನೆರವೇರಿಸಿ ದೇಶ ಭಾಷೆ ನೀತಿ ನಿಯಮ ಇವೆಲ್ಲವೂ ನಮ್ಮ ಜೀವನದ ಅವಿಭಾಜ್ಯ ಅಂಗ, ಮಕ್ಕಳೇ, ನೀವು ಇವುಗಳನ್ನೆಲ್ಲ ರೂಢಿಸಿಕೊಂಡು ಮುಂದೆ ಸಮಾಜದ ಸತ್ಪ್ರಜೆಗಳಾಗಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಸಂಚಾಲಕರು ಅತಿಥಿಗಳನ್ನು ಶಾಲು ಹೊದಿಸಿ ಗೌರವಿಸಿ ದಿನದ ಮಹತ್ವವನ್ನು ಮನ ಮುಟ್ಟುವಂತೆ ವಿವರಿಸಿದರು. ಮುಖ್ಯಗುರು ಕೃಷ್ಣವೇಣಿ ಸ್ವಾಗತಿಸಿದರು. ಸಂಚಾಲಕರು ಧನ್ಯವಾದ ಅರ್ಪಿಸಿದರು.

LEAVE A REPLY

Please enter your comment!
Please enter your name here