ನಿಡ್ಪಳ್ಳಿ: ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ನಿಡ್ಪಳ್ಳಿ ಇಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು.
ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ ಶಾಲಿನಿ ಧ್ವಜಾರೋಹಣ ಮಾಡಿದರು. ಸಭಾ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಎಸ್.ಡಿ.ಎಂ.ಸಿ ಸದಸ್ಯ ಪದ್ಮನಾಭ.ಕೆ ಮಕ್ಕಳಿಗೆ ಉಚಿತವಾಗಿ ನೀಡಿದ ಶಾಲಾ ಗುರುತು ಕಾರ್ಡನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಮುಖ್ಯ ಗುರು ಹೇಮಾ. ಎನ್, ಗ್ರಾಮಸ್ಥರಾದ ಚಂಚಲ.ಎ ಭಟ್ ಮುಂಡೂರು, ಅಕ್ಷರ ದಾಸೋಹ ಸಿಬ್ಬಂದಿಗಳು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಗೌರವ ಶಿಕ್ಷಕಿ ಸುಮಾ.ಡಿ ಸ್ವಾಗತಿಸಿ ವಂದಿಸಿದರು.