ಪುತ್ತೂರು: ಫಾರ್ಚೂನ್-4 ಉಳಿತಾಯ ಯೋಜನೆಯ ಕೇರಳ ರಾಜ್ಯದ ಪ್ರಥಮ ಶಾಖೆಯು ಕಾಸರಗೋಡಿನ ಮಂಗಲ್ಪಾಡಿಯ ಕುಂಟೆನ್ಗರ್ಡಕಾದ ಬಿಎ ಟವರ್ ನಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡಿತು.
ಶಾಖೆಯನ್ನು ರಿಫಾಯೀ ಜುಮಾ ಮಸೀದಿ ಸುಬ್ಬಯ್ಯಕಟ್ಟೆಯ ಖತೀಬರಾದ ಉಸ್ತಾದ್ ಹಾಜಿ ಅಬ್ದುಲ್ ಹಮೀದ್ ಮದನಿ ಉದ್ಘಾಟಿಸಿದರು.
ಅತಿಥಿಗಳಾಗಿ ಇರ್ಷಾದ್ ಯು ಟಿ, ಮ್ಯಾನೇಜಿಂಗ್ ಡೈರೆಕ್ಟರ್ ಫಾರ್ಚೂನ್ 4 ಸಮೂಹ ಸಂಸ್ಥೆಗಳು, ಬೆಂಗಳೂರು, ಹಾಜಿ ಬಿ ಕೆ ಖಾದರ್ ಅಧ್ಯಕ್ಷರು, ರಿಫಾಯೀ ಜುಮಾ ಮಸೀದಿ, ಸುಬ್ಬಯ್ಯಕಟ್ಟೆ, ಹಾಜಿ ಬಿ ಎ ಖಾದರ್ ಮುಖ್ಯಸ್ಥರು, ಎ ಎಲ್ ಪಿ ಸ್ಕೂಲ್, ಕುಡಾಲ್ ಮೇರ್ಕಲಾ, ಬಶೀರ್ ಬಿ ಎ, ಕಾರ್ಯದರ್ಶಿಗಳು, ಸಿಪಿಎಂ ಕುಡಾಲ್ ಮೇರ್ಕಲಾ, ಅಶೋಕ್ ಭಂಡಾರಿ ಮತ್ತು ರಾಜೀವಿ, ಗ್ರಾಮ ಪಂಚಾಯತಿಯ ಸದಸ್ಯರುಗಳು, ಅಬ್ದುಲ್ ಲತೀಫ್, ಕಾರ್ಯದರ್ಶಿಗಳು, ರಿಫಾಯೀ ಜುಮಾ ಮಸೀದಿ, ಸುಬ್ಬಯ್ಯಕಟ್ಟೆ, ಸಲಾಂ ಸಿ ಎಚ್ ಉದ್ಯಮಿಗಳು, ದುಬೈ, ಶಾಖೆಯ ಕಾರ್ಯನಿರ್ವಾಹಕರಾದ ಮಹಮ್ಮದ್ ಅಲಿ ಹಾಗೂ ಫಾರ್ಚೂನ್ 4 ಸಮೂಹ ಸಂಸ್ಥೆಯ ಉಬೈಝ್, ನಝೀರ್ ಹಾಗೂ ಫಝ್ರೀದ್ ಮತ್ತು ಸ್ಥಳೀಯರು ಭಾಗವಹಿಸಿದ್ದರು.
ಫಾರ್ಚೂನ್ 4 ಉಳಿತಾಯ ಯೋಜನೆಯು ದೇಶದಾದ್ಯಂತ ಕಾರ್ಯಾಚರಿಸುತ್ತಿದ್ದು, ಬೆಂಗಳೂರಿನಲ್ಲಿ ಪ್ರಧಾನ ಶಾಖೆಯನ್ನು ಹೊಂದಿದೆ.
ಸಂಸ್ಥೆಯು ಗ್ರಾಹಕರಿಗೆ ಪ್ರತಿ ತಿಂಗಳು ರೂ. 1000/- (ರೂಪಾಯಿ ಒಂದು ಸಾವಿರ) ದಂತೆ ಇಪ್ಪತ್ತ ನಾಲ್ಕು ತಿಂಗಳು ಉಳಿತಾಯ ಯೋಜನೆಯನ್ನು ಘೋಷಿಸಿದ್ದು, ಗ್ರಾಹಕರಿಗೆ ಕೆಲ ವಸ್ತುಗಳ ಆಯ್ಕೆಯನ್ನು ಮಾಡಲು ಅವಕಾಶವಿದೆ. ಆಯ್ಕೆಯ ವಸ್ತುಗಳನ್ನು ಉಳಿತಾಯ ಯೋಜನೆಯ ಕೊನೆಗೆ ತಮ್ಮದಾಗಿಸಿಕೊಳ್ಳುವ ಸುವರ್ಣಾವಕಾಶ ಸಂಸ್ಥೆಯಲ್ಲಿ ಲಭ್ಯವಿದೆ. ಯೋಜನೆಗೆ ಸೇರಲು ಆಸಕ್ತಿಯಿರುವ ಗ್ರಾಹಕರು 9108137519, 9895585519 ಸಂಪರ್ಕಿಸಬಹುದಾಗಿದೆ.