ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಗಮಕ ವಾಚನ – ವ್ಯಾಖ್ಯಾನ ಕಾರ್ಯಕ್ರಮ

0

ಪುತ್ತೂರು: ಕರ್ನಾಟಕ ಗಮಕ ಕಲಾ ಪರಿಷತ್ತು, ಬೆಂಗಳೂರು, ದ.ಕ ಜಿಲ್ಲಾ ಘಟಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಇದರ ಸಹಯೋಗದೊಂದಿಗೆ; ಕುಮಾರವ್ಯಾಸ ಜಯಂತಿ ಪ್ರಯುಕ್ತ ‘ಗಮಕ ವಾಚನ – ವ್ಯಾಖ್ಯಾನ’ ಕಾರ್ಯಕ್ರಮವನ್ನು ನೆಹರುನಗರದಲ್ಲಿರುವ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಇದೇ ಫೆಬ್ರವರಿ 4ರಂದು ಹಮ್ಮಿಕೊಳ್ಳಲಾಯಿತು.

ಕುಮಾರವ್ಯಾಸ ವಿರಚಿತ ‘ಕರ್ನಾಟ ಭಾರತ ಕಥಾಮಂಜರಿ’ ಕೃತಿಯ ಹತ್ತು ಪರ್ವಗಳಲ್ಲಿ ಒಂದಾದ ಅರಣ್ಯ ಪರ್ವದಲ್ಲಿರುವ ‘ದೂರ್ವಾಸ ಆತಿಥ್ಯ ‘ ಎಂಬ ಕಾವ್ಯಭಾಗದ ಗಮಕ ವಾಚನವನ್ನು ಗಮಕಿ ಜಯಂತಿ ಹೆಬ್ಬಾರ್ ಮತ್ತು ಕ.ಗ.ಕ.ಪ. ದ.ಕ ಜಿಲ್ಲಾಧ್ಯಕ್ಷರಾದ ಪ್ರೊ. ಮಧೂರು ಮೋಹನ ಕಲ್ಲೂರಾಯ ಇವರು ಪ್ರಾಸ್ತವಿಕ ನುಡಿಗಳನ್ನಾಡಿ ವಾಖ್ಯಾನವನ್ನು ನಡೆಸಿಕೊಟ್ಟರು.

ತಾಲೂಕು ಘಟಕದ ಕಾರ್ಯದರ್ಶಿ ಶಂಕರಿ ಶರ್ಮ ಕಲಾವಿದರನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು.
ತಾಲೂಕು ಘಟಕದ ಅಧ್ಯಕ್ಷರಾದ ಪ್ರೊ. ವೇದವ್ಯಾಸ ರಾಮಕುಂಜ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಲಾವಿದರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಪ್ರಾಂಶುಪಾಲರಾದ ಸಿಂಧು ವಿ.ಜಿ. ಸ್ಮರಣಿಯನ್ನಿತ್ತು ಗೌರವಿಸಿ ವಂದಿಸಿದರು.

ಶಿಕ್ಷಕಿಯರಾದ ಜಯಶ್ರೀ ಭಟ್ ಸಹಕರಿಸಿ ಪ್ರಾರ್ಥಿಸಿದರು ಮತ್ತು ಗೀತಾ ಸ್ವಾಗತಿಸಿ, ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗೂ ಶಿಕ್ಷಕೇತರ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here