ಉಪ್ಪಿನಂಗಡಿ: ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಶ್ರೀ ಬ್ರಹ್ಮರಥೋತ್ಸವ ಫೆ.6ರಂದು ವಿಜೃಂಭಣೆಯಿಂದ ನೆರವೇರಿತು.
ಗುರುವಾರ ಬೆಳಗ್ಗೆ ಹತ್ತು ಸಮಸ್ತರಿಂದ ಪ್ರಾರ್ಥನೆ, ಮಹಾಪಂಚಾಮೃತಾಭಿಷೇಕ, ಮಧ್ಯಾಹ್ನ ಮಹಾಪೂಜೆ ಯಜ್ಞಾರಂಭ ಬಳಿಕ ರಥಶುದ್ಧಿ, ಯಜ್ಞಾರತಿ ಪೂರ್ಣಾಹುತಿ, ಮಹಾಬಲಿ, ಸಂಜೆ ಶ್ರೀ ದೇವರ ರಥಾರೋಹಣ ನಡೆದು ಬ್ರಹ್ಮರಥೋತ್ಸವ ನಡೆಯಿತು. ರಾತ್ರಿ ಪೂಜೆ, ಉತ್ಸವ, ಏಕಾಂತ ಸೇವೆ ಜರಗಿತು.
ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮೊಕ್ತೇಸರರಾದ ಬಿ.ಗಣೇಶ್ ಶೆಣೈ, ಮೊಕ್ತೇಸರರಾದ ಯು.ನಾಗರಾಜ ಭಟ್, ಕೆ.ಆನಂತರಾಯ ಕಿಣಿ, ಡಾ. ಎಂ. ರತ್ನಾಕರ ಶೆಣೈ, ಪಿ.ದೇವಿದಾಸ್ ಭಟ್ ಪ್ರಮುಖರಾದ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಕರಾಯ ರಾಮಚಂದ್ರ ನಾಯಕ್, ಎಚ್. ವಾಸುದೇವ ಪ್ರಭು, ಕೆ. ಶ್ರೀಕಾಂತ್ ಭಟ್, ಕರಾಯ ಗಣೇಶ್ ನಾಯಕ್, ಎಂ. ಪ್ರಭಾತ್ ಭಟ್ ಬಂಟ್ವಾಳ, ಸುಜೀರ್ ಗಣಪತಿ ನಾಯಕ್, ನ್ಯಾಯವಾದಿ ರಮೇಶ್ ನಾಯಕ್, ಜಿಎಸ್‌ಬಿ ಸಮಾಜ ಬಾಂಧವರಾದ ಉಜಿರೆ ಪ್ರಭಾತ್ ಭಟ್, ಚೇತನ್ ಶೆಣೈ, ಚಂದ್ರಕಾಂತ್ ಶೆಣೈ, ಕೆ. ರಾಘವೇಂದ್ರ ನಾಯಕ್, ಎನ್. ಪ್ರಭಾತ್ ಪೈ, ಪಿ.ವಿನಾಯಕ ಪೈ, ಎಂ. ಪ್ರಕಾಶ್ ಭಟ್, ಕೆ.ರವೀಂದ್ರ ಪ್ರಭು, ಕೆ. ಸತೀಶ ನಾಯಕ್, ಕೆ. ಶ್ರೀನಿವಾಸ್ ಪಡಿಯಾರ್, ಕೆ.ಸುರೇಶ್ ಕಿಣಿ, ಕೆ. ನರಸಿಂಹ ನಾಯಕ್, ಎಂ. ಶ್ರೀನಿವಾಸ ಭಟ್, ನೀನಿ ಸಂದೀಪ್ ಕಾಮತ್ ಮತ್ತಿತರರು ಉಪಸ್ಥಿರಿದ್ದರು.