ಉಪ್ಪಿನಂಗಡಿ: ಇಲ್ಲಿನ ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರಿಗೆ ಕ್ಷೇತ್ರದ ತಂತ್ರಿಗಳಾದ ಶ್ರೀ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಫೆ.8ರಂದು ದೃಢಕಲಶ ನಡೆಯಿತು.
![](https://puttur.suddinews.com/wp-content/uploads/2025/02/padala-2.jpg)
ಬೆಳಗ್ಗೆ ದ್ವಾದಶ ನಾರಿಕೇಳ ಗಣಪತಿ ಹೋಮ ನಡೆದು, ಶ್ರೀ ಗಣಪತಿ ದೇವರಿಗೆ ಬೆಳ್ಳಿ ಕವಚ ಸಮರ್ಪಣೆ, ಶ್ರೀ ಸುಬ್ರಹ್ಮಣ್ಯ ದೇವರಿಗೆ ದೃಢಕಲಶ, ಮಹಾಪೂಜೆ ನಡೆದು ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ವಿತರಿಸಲಾಯಿತು.
![](https://puttur.suddinews.com/wp-content/uploads/2025/02/padala-3.jpg)
ಈ ಸಂದರ್ಭ ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷರಾದ ನಡುಸಾರು ಉದಯಶಂಕರ ಭಟ್ಟ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಜಗದೀಶರಾವ್ ಮಣಿಕ್ಕಳ, ಆಡಳಿತ ಸಮಿತಿಯ ಉಪಾಧ್ಯಕ್ಷರಾದ ಸುರೇಶ ಅತ್ರೆಮಜಲು, ಕಾರ್ಯದರ್ಶಿ ಕೇಶವ ರಂಗಾಜೆ, ಜೊತೆ ಕಾರ್ಯದರ್ಶಿ ರಾಮಣ್ಣ ಶೆಟ್ಟಿ ಬೊಳ್ಳಾವು, ಕೋಶಾಧಿಕಾರಿ ರಾಮಚಂದ್ರ ಮಣಿಯಾಣಿ, ಸದಸ್ಯರಾದ ಶಾಂಭವಿ ರೈ ಪುಳಿತ್ತಡಿ, ಹರೀಶ್ವರ ಮೊಗ್ರಾಲ್ ಕುವೆಚ್ಚಾರು, ಬಿ. ಶಂಕರನಾರಾಯಣ ಭಟ್ ಬೊಳ್ಳಾವು, ಸದಾನಂದ ಶೆಟ್ಟಿ ಕಿಂಡೋವು, ಲೊಕೇಶ ಪೂಜಾರಿ ಬೆತ್ತೋಡಿ, ವಿಜಯಶಿಲ್ಪಿ ಕುಕ್ಕುಜೆ, ಜತ್ತಪ್ಪ ನಾಯ್ಕ ಬೊಳ್ಳಾವು, ಲಕ್ಷ್ಮಣ ಗೌಡ ನೆಡ್ಚಿಲು, ನವೀನ್ ಕುಮಾರ್ ಕಲ್ಯಾಟೆ, ಅವನೀಶ್ ಪೆರಿಯಡ್ಕ, ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷರಾದ ಡಾ. ರಾಜಾರಾಮ್ ಕೆ.ಬಿ., ಪ್ರತಾಪ್ ಯು. ಪೆರಿಯಡ್ಕ, ಉಷಾ ಮುಳಿಯ, ಪ್ರಧಾನ ಕಾರ್ಯದರ್ಶಿ ಜಯಗೋವಿಂದ ಶರ್ಮಾ ಪದಾಳ, ಜೊತೆ ಕಾರ್ಯದರ್ಶಿ ಸುರೇಶ್ ಗೌಂಡತ್ತಿಗೆ, ದೇವಾಲಯದ ಪ್ರಧಾನ ಅರ್ಚಕ ಕೇಶವರಾಜ, ಪ್ರಮುಖರಾದ ಸುನೀಲ್ ಕುಮಾರ್ ದಡ್ಡು, ಗಿರೀಶ್ ಆರ್ತಿಲ, ರಾಜೇಶ್ ಕೊಡಂಗೆ, ಚಿದಾನಂದ ಪಂಚೇರು, ಸುಜೀತ್ ಬೊಳ್ಳಾವು, ಹರಿಪ್ರಸಾದ್ ಬೊಳ್ಳಾವು, ಚಿನ್ಮಯ ಭಟ್ ಪದಾಳ, ಪ್ರಶಾಂತ್ ಪೆರಿಯಡ್ಕ, ಉದಯ ಅತ್ರೆಮಜಲು ಮತ್ತಿತರರು ಉಪಸ್ಥಿತರಿದ್ದರು.