ಉಪ್ಪಿನಂಗಡಿ: ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಬಿಜೆಪಿಯ ಸಾಧನೆಗೆ ಉಪ್ಪಿನಂಗಡಿಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವವನ್ನು ಆಚರಿಸಿದರು. ವಿಜಯೋತ್ಸವದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡ ಸುರೇಶ್ ಅತ್ರೆಮಜಲು, ದೇಶದ ಹೃದಯಭಾಗದಲ್ಲಿ ಭ್ರಷ್ಟ ಕೇಜ್ರಿವಾಲ್ ಸರಕಾರವನ್ನು ಕಿತ್ತೊಗೆದು ಬಿಜೆಪಿಗೆ ಬಹುಮತವನ್ನು ನೀಡುವ ಮೂಲಕ ದೆಹಲಿಯ ಜನತೆ ಮೋದಿ ನೇತೃತ್ವದ ಬಿಜೆಪಿಯ ತತ್ವ ಸಿದ್ದಾಂತಕ್ಕೆ ಮನ್ನಣೆ ನೀಡಿದ್ದಾರೆ ಎಂದರು.
ವಿಜಯೋತ್ಸವದಲ್ಲಿ ಬಿಜೆಪಿ ಮುಖಂಡರಾದ ಎನ್. ಉಮೇಶ್ ಶೆಣೈ, ಜಯಂತ ಪೊರೋಳಿ, ಕಂಗ್ವೆ ವಿಶ್ವನಾಥ ಶೆಟ್ಟಿ, ಸುನಿಲ್‌ಕುಮಾರ್ ದಡ್ಡು, ಪ್ರಸಾದ್ ಬಂಡಾರಿ, ಧನಂಜಯ್ ಕುಮಾರ್, ಎನ್ ರಾಘವೇಂದ್ರ ನಾಯಕ್, ಉಷಾಚಂದ್ರ ಮುಳಿಯ, ಶೋಭಾ ದಯಾನಂದ್, ಸದಾನಂದ ಪೂಜಾರಿ, ಹರೀಶ್ ನೆಕ್ಕಿಲಾಡಿ, ವಸಂತ ಪಿಜಕ್ಕಳ, ಗಂಗಾಧರ ಪಿ. ಎನ್., ನಿತಿನ್ ತಾರಿತ್ತಡಿ, ವಿಶ್ವನಾಥ್ ಕೆಮ್ಮಟೆ, ಶ್ರೀರಾಮ ಪಾತಾಳ, ರಾಮಚಂದ್ರ ಮಣಿಯಾಣಿ, ಚಂದ್ರಶೇಖರ್ ಮಡಿವಾಳ, ಜಯರಾಜ್ ಅಮೀನ್ , ಜಗದೀಶ್ ಪುರ್ಕಾಜೆ, ರಾಜಗೋಪಾಲ ಹೆಗ್ಡೆ, ಹೇಮಂತ್ , ಅದೇಶ್ ಶೆಟ್ಟಿ, ಯತೀಶ್ ಶೆಟ್ಟಿ , ಜಗದೀಶ್ ಶೆಟ್ಟಿ, ನವೀನ್ ಹಿರೆಬಂಡಾಡಿ, ಸುದರ್ಶನ್ , ಶರತ್ ಕೋಟೆ ಮೊದಲಾದವರು ಭಾಗವಹಿಸಿದ್ದರು.