ಹೊಸಮಠ ಪ್ರಾ.ಕೃ.ಪ.ಸಹಕಾರ ಸಂಘದ ಚುನಾವಣೆ : ಸಹಕಾರ ಭಾರತಿ ಅಭ್ಯರ್ಥಿಗಳ ಜಯಭೇರಿ

0

ಕಡಬ:ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ ೫ ವರ್ಷಗಳ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳಲ್ಲೂ ಸಹಕಾರ ಭಾರತಿ ಅಭ್ಯರ್ಥಿಗಳು ಜಯಭೇರಿ ಗಳಿಸಿದ್ದಾರೆ.೧೨ ಸ್ಥಾನಗಳ ಪೈಕಿ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದ್ದರಿಂದ ೧೧ ಸ್ಥಾನಗಳಿಗೆ ಫೆ.೯ರಂದು ಚುನಾವಣೆ ನಡೆದಿತ್ತು.ಸಹಕಾರ ಭಾರತಿ ಮತ್ತು ಕಾಂಗ್ರೆಸ್ ಬೆಂಬಲಿತ ತಲಾ ೧೧ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದರು.


ಸಾಮಾನ್ಯ ಮೀಸಲು ೬ ಸ್ಥಾನಗಳಿಗೆ ಸಹಕಾರ ಭಾರತಿಯ ಅಚ್ಚುತ ದೇರಾಜೆ(೭೧೭),ಚಿದಾನಂದ ಕೊಡಂಕೀರಿ(೬೫೭),ಜಯಚಂದ್ರ ರೈ ಕುಂಟೋಡಿ(೭೦೮),ಶಶಾಂಕ ಗೋಖಲೆ ಮಾರ್ಗದಮನೆ(೭೧೪),ಶಿವಪ್ರಸಾದ್ ಪುತ್ತಿಲ(೭೨೯) ಮತ್ತು ಶ್ರೀಧರ ಎನ್.ಎಸ್ ಉಳಿಪ್ಪು(೫೯೫)ಗೆಲುವು ಸಾಽಸಿದ್ದಾರೆ.ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಕರುಣಾಕರ ಸಾಲಿಯಾನ್(೨೫೯),ಕೇಶವ ಎಸ್.(೨೨೫),ಕೊರಗಪ್ಪ ಗೌಡ ಪಿ(೧೮೯),ಮ್ಯಾಥ್ಯೂ ಟಿ.ಎಂ.(೩೪೦),ಮೊಹಮ್ಮದ್ ಆಲಿ(೩೪೭),ಸತೀಶ್ ಎಂ.(೨೧೬)ಪರಾಜಿತರಾಗಿದ್ದಾರೆ.


ಹಿಂದುಳಿದ ವರ್ಗ ಎ ಮೀಸಲು ಸ್ಥಾನದಿಂದ ಸಹಕಾರ ಭಾರತಿಯ ಕೃಷ್ಣಪ್ಪ ದೇವಾಡಿಗ ಸನಿಲ(೭೮೧)ಗೆಲುವು ಸಾಧಿಸಿದ್ದಾರೆ.ಕಾಂಗ್ರೆಸ್ ಬೆಂಬಲಿತ ಮೇದಪ್ಪ (೨೩೬)ಪರಾಭವಗೊಂಡಿದ್ದಾರೆ.ಹಿಂದುಳಿದ ವರ್ಗ ಬಿ ಮೀಸಲು ಸ್ಥಾನದಿಂದ ಸಹಕಾರ ಭಾರತಿಯ ಶಿವಪ್ರಸಾದ್ ಮೈಲೇರಿ(೭೬೨)ಗೆಲುವು ಸಾಧಿಸಿದ್ದಾರೆ.ಕಾಂಗ್ರೆಸ್ ಬೆಂಬಲಿತ ಸತೀಶ್ಚಂದ್ರ ಶೆಟ್ಟಿ ಬೀರುಕ್ಕು(೨೫೫)ಪರಾಜಿತರಾಗಿದ್ದಾರೆ.ಮಹಿಳಾ ಮೀಸಲು ಸ್ಥಾನದಿಂದ ಸಹಕಾರ ಭಾರತಿಯ ಲೀಲಾವತಿ ದೇವಯ್ಯ ಪನ್ಯಾಡಿ(೭೫೮),ಶಕಿಲ(೬೩೪)ಗೆಲುವು ಸಾಧಿಸಿದ್ದಾರೆ.ಕಾಂಗ್ರೆಸ್ ಬೆಂಬಲಿತ ಉಜ್ವಲ ಹೆಬ್ಬಾರ್(೪೨೧),ಸುಮನ(೨೪೧)ಪರಾಜಿತರಾಗಿದ್ದಾರೆ.ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಸಹಕಾರ ಭಾರತಿಯ ಪಕೀರ(೬೬೬)ಗೆಲುವು ಸಾಧಿಸಿದ್ದಾರೆ.ಕಾಂಗ್ರೆಸ್ ಬೆಂಬಲಿತ ದೇವಯ್ಯ(೩೭೮)ಪರಾಜಿತರಾಗಿದ್ದಾರೆ.ಪರಿಶಿಷ್ಟ ಪಂಗಡ ಮೀಸಲು ೧ ಸ್ಥಾನಕ್ಕೆ ಸಹಕಾರ ಭಾರತಿಯ ಯೋಗೇಂದ್ರ ಕುಮಾರ್ ಬಿ.ಎಸ್.ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಪುತ್ತೂರು ಉಪವಿಭಾಗದ ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ಕಛೇರಿಯ ಮಾರಾಟಾಧಿಕಾರಿ ಶೋಭಾ ಎನ್.ಎಸ್.ರಿಟರ್ನಿಂಗ್ ಅಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆ ನಿರ್ವಹಿಸಿದರು.


ಸಂಭ್ರಮಾಚರಣೆ:
ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳ ಅಭೂತಪೂರ್ವ ಗೆಲುವಿನ ಹಿನ್ನೆಲೆಯಲ್ಲಿ ಹೊಸಮಠ ಪೇಟೆಯಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಬಿಜೆಪಿ ಕಾರ್ಯಕರ್ತರು ಹರ್ಷಾಚರಣೆ ನಡೆಸಿದರು.ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷ ವೆಂಕಟ್ ವಳಲಂಬೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ,ಸಹಕಾರ ಭಾರತಿ ಅಭ್ಯರ್ಥಿಗಳ ಗೆಲುವಿನ ಹಿಂದೆ ಶ್ರಮಿಸಿದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿ, ವಿಜೇತ ಅಭ್ಯರ್ಥಿಗಳನ್ನು ಅಭಿನಂದಿಸಿದರು.ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ ಕಡಬ, ಬಿಜೆಪಿ ಸುಳ್ಯ ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಕಾರ್ಯದರ್ಶಿ ಶಿವಪ್ರಸಾದ್ ನಡ್ತೋಟ, ಕುಟ್ರುಪ್ಪಾಡಿ ಶಕ್ತಿಕೇಂದ್ರದ ಅಧ್ಯಕ್ಷ ಸುರೇಶ್ ದೇಂತಾರು, ಪ್ರಮುಖರಾದ ಶ್ರೀಕೃಷ್ಣ ಎಂ.ಆರ್.,ಯೋಗಾನಂದ ಎಣ್ಮೂರು, ಮೋಹನ್ ಕೆರೆಕ್ಕೋಡಿ, ಕಿರಣ್ ಗೋಗಟೆ, ಬಾಲಚಂದ್ರ ಬಜೆತ್ತಡ್ಕ, ಕಾಶೀನಾಥ್ ಗೋಗಟೆ, ನವೀನ್ ಗೋಖಲೆ, ಗಿರೀಶ್‌ಎ.ಪಿ., ಅಶೋಕ್ ಕುಮಾರ್ ಕಡಬ, ಲಕ್ಷ್ಮೀಶ ಬಂಗೇರ, ಚಿದಾನಂದ ಕೊಯಕ್ಕುರಿ, ಧನಂಜಯ ಕೊಡಂಗೆ, ಪದ್ಮಯ್ಯ ಪೂಜಾರಿ, ರಮೇಶ ಪೆಡ್ಯಣೆ, ದಯಾನಂದ ಪುರಿಯ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here