ಪುತ್ತೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಕಡಬ ಇದರ ಸಮುದಾಯ ಅಭಿವೃದ್ಧಿ ವಿಭಾಗದಿಂದ ಸರಕಾರಿ ಉನ್ನತ್ತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಇದರ ಮೇಲ್ಚಾವಣಿ ದುರಸ್ತಿಗಾಗಿ ಶ್ರೀ ಕ್ಷೇತ್ರ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ರೂ 75000 ಸಹಾಯ ಧನ ಬಿಡುಗಡೆಯಾಗಿದೆ.
ಬಿಡುಗಡೆಯಾದ ಮಂಜೂರಾತಿ ಪತ್ರವನ್ನು ಕಡಬ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಅಧ್ಯಕ್ಷ, ನ್ಯಾಯವಾದಿ ಮಹೇಶ್ ಕೆ ಸವಣೂರು ರವರು ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರು ಕೆ.ಪಿ, ನಿಂಗರಾಜು ರವರಿಗೆ ಹಸ್ತಾಂತರ ಮಾಡಿದರು. ಸವಣೂರು ವಲಯ ಮೇಲ್ವಿಚಾರಕ ರಾದ ವೀಣಾ ಕೆ,ಸೇವಾ ಪ್ರತಿನಿಧಿ ಮೀನಾಕ್ಷಿ ಡಿ,ಒಕ್ಕೂಟದ ಪದಾಧಿಕಾರಿ ಮೀನಾಕ್ಷಿ ಬಾರಿಕೆ, ಶಿಕ್ಷಕರಾದ ಶಶಿಕಲಾ ಟಿ,ಓಬಲೇಶ್,ಗಣೇಶ್ ಮೊದಲಾದ ವರು ಉಪಸ್ಥಿತರಿದ್ದರು.