ಪುತ್ತೂರು: ಪರ್ಲಡ್ಕ ಕೋಡಿಜಾಲ್ ನಿವಾಸಿ, ಕಾರ್ಪೆಂಟರ್ ವೃತ್ತಿ ನಿರ್ವಹಿಸುತ್ತಿದ್ದ ಲೂಯಿಸ್ ಮಸ್ಕರೇನ್ಹಸ್ (83ವ.) ರವರು ಅನಾರೋಗ್ಯದಿಂದ ಫೆ.10 ರಂದು ಮಂಗಳೂರಿನ ತನ್ನ ಪುತ್ರನ ಮನೆಯಲ್ಲಿ ನಿಧನ ಹೊಂದಿದ್ದಾರೆ.
ಮೃತರು ಪತ್ನಿ ಎವ್ಲಿನ್ ಮಿನೇಜಸ್, ಪುತ್ರ ಸಂತೋಷ್ ಮಸ್ಕರೇನ್ಹಸ್, ಪುತ್ರಿಯರಾದ ಫಿಲೋಮಿನಾ, ಜೆಸ್ಸಿ, ಸೊಸೆ, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.