ಕುಂಜೂರುಪಂಜ ಇರುವೆರ್ ಉಳ್ಳಾಕುಲು ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಶ್ರೀದುರ್ಗಾ ಭಜನಾ ಮಂದಿರದ ವಾರ್ಷಿಕೋತ್ಸವದ ಧಾರ್ಮಿಕ ಸಭೆ

0

ಪುತ್ತೂರು:ಡಾ.ಬಿ.ಆರ್ ಅಂಬೇಡ್ಕರ್‌ರವರು ದೇಶಕ್ಕೆ ರೂಪಿಸಿಕೊಟ್ಟ ಸಂವಿಧಾನದಡಿಯಲ್ಲಿ ಭಾರತೀಯರಾದ ನಾವೆಲ್ಲರೂ ಸಮಾನತೆಯಿಂದ ಬಾಳಲು ಅವಕಾಶ ನೀಡಿದಂತೆ ಎಲ್ಲಾ ಸಮುದಾಯದ, ವರ್ಗದ ಜನರನ್ನು ಒಟ್ಟು ಸೇರಿಸುವ ಶಕ್ತಿಯಿರುವ ದೈವದ ಕೊಡಿಯಡಿಯೂ ತುಳುನಾಡಿ ಸಂವಿಧಾನವಾಗಿದೆ ಎಂದು ದೈವನರ್ತಕರು, ಸಿವಿಲ್ ಇಂಜಿನಿಯರ್ ಆಗಿರುವ ಡಾ ರವೀಶ್ ಪಡುಮಲೆ ಹೇಳಿದರು.

ಆರ್ಯಾಪು ಗ್ರಾಮದ ಕುಂಜೂರುಪಂಜ ಶ್ರೀದುರ್ಗಾ ಭಜನಾ ಮಂದಿರದ 22ನೇ ವಾರ್ಷಿಕೋತ್ಸವ ಮತ್ತು ಇರುವೆರ್ ಉಳ್ಳಾಕುಲು ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಫೆ.10ರಂದು ನಡೆದ ಧಾರ್ಮಿಕ ಸಭೆಯಲ್ಲಿ ಅವರು ಉಪನ್ಯಾಸ ನೀಡಿದರು. ದೈವ, ದೇವರ ಆರಾಧನೆಯಲ್ಲಿ ಆಡಂಬರ ಬೇಕಾಗಿಲ್ಲ. ದೈವ ದೇವರು ಆಡಂಬರ, ಬಂಗಾರ ಬಯಸುವುದಿಲ್ಲ. ಭಕ್ತ, ಶ್ರದ್ಧೆಯಿಂದ ಎಲ್ಲರೂ ಏಕಮನಸ್ಸಿನಿಂದ ತುಳುನಾಡಿದ ಪುರತಾನ ಸಂಪ್ರದಾಯ ಉಳಿಸುವ ಕಾರ್ಯವಾಗಬೇಕು. ಕುಂಜೂರುಪಂಜದಲ್ಲಿ ಉಳ್ಳಾಕುಲು ಮಾಡ ನಿರ್ಮಾಣವಾಗುವ ಮೂಲಕ ಭಕ್ತರ ಹಲವು ವರ್ಷಗಳ ಕನಸು ನನಸಾಗಿದೆ. ಇಲ್ಲಿನ ಜನತೆ ಕರಸೇವೆಯ ಮೂಲಕ ಧರ್ಮವನ್ನು ತೋರಿಸಿಕೊಟ್ಟಿದ್ದಾರೆ. ಶ್ರದ್ಧೆ, ಭಕ್ತಿಯ ಸಂಕೇತವಾಗಿ ಭವ್ಯ ಮಾಡ ನಿರ್ಮಾಣಗೊಂಡಿದೆ. ದೈವಸ್ಥಾನ ನಿರ್ಮಾಣದ ಜೊತೆಗೆ ಧರ್ಮದ ಸಂಸ್ಥಾಪನೆಯಾಗಬೇಕು. ತುಳುನಾಡಿನ ಸಂಸ್ಕಾರ ಉಳಿಸುವಲ್ಲಿ ಇಂತಹ ಸಾಧನೆ ಪೂರಕವಾಗಿದೆ. ದೈವಸ್ಥಾನದ ನಿರ್ಮಾಣದಲ್ಲಿ ಊರಿನ ಎಲ್ಲಾ ಭಕ್ತರ ಕಾಣಿಕೆಯಿದೆ. ಬ್ರಹ್ಮಕಲಶದ ಮೂಲಕ ದೈವಸ್ಥಾನ ಶುದ್ಧವಾಗುವ ಜೊತೆಗೆ ಹಿಂದುಗಳ ಮನೆ, ಮನ ಶುದ್ಧವಾಗಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಶಶಿಧರ ಎಂ ಮಾತನಾಡಿ, ಭಜನಾ ಮಂದಿರ, ಶ್ರದ್ಧಾಕೇಂದ್ರಗಳ ಜೀರ್ಣೋದ್ಧಾರದಲ್ಲಿ ನಮ್ಮ ನಾವು ತೊಡಗಿಸಿಕೊಳ್ಳುವ ಮುಖಾಂತರ ಪ್ರತಿಯೊಬ್ಬರಿಗೂ ದೇವಸ್ಥಾನದ ನಿರ್ಮಿಸಿದ ಫಲವಿದೆ. ಈ ದೈವಸ್ಥಾನದ ನಿರ್ಮಾಣದಲ್ಲಿ ಅದ್ಬುತ ರೀತಿಯಲ್ಲಿ ನಡೆದಿದ್ದು ಊತಿನ ಜನರ ಒಗ್ಗಟ್ಟು, ಪರಿಶ್ರಮಕ್ಕೆ ಸಾಕ್ಷಿಯಾಗಿದೆ. ದೇವರ ಕಾರ್ಯಕ್ರಮದಲ್ಲಿ ಎಲ್ಲ ವಿಚಾರಗಳು ಕೇಂದ್ರಿಕೃತವಾಗುತ್ತಿದ್ದು ಕುಂಜೂರುಪಂಜದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಮೂಲಕ ಸಮಾಜದ ಪರಿವರ್ತನೆಗೆ ಸಹಕಾರಿಯಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕಿಟ್ಟಣ್ಣ ರೈ ಕಲ್ಕೋಟೆ ಮಾತನಾಡಿ, ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಲ್ಲಿ ಭಕ್ತಾದಿಗಳು ಹಲವು ವಿಧದಲ್ಲಿ ಸಹಕಾರ ನೀಡಿದ್ದಾರೆ. ಎಲ್ಲರ ಸಹಕಾರದಿಂದ ಭವ್ಯ ದೈವಸ್ಥಾನ ನಿರ್ಮಾಣಗೊಂಡು ಬ್ರಹ್ಮಕಲಶ ನೆರವೇರುತ್ತಿದ್ದು ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.

ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ತಿಮ್ಮಪ್ಪ ನಾಯ್ಕ ಜಂಗಮುಗೇರು ಪ್ರಾಸ್ತಾವಿಕವಾಗಿ ಮಾತನಾಡಿ, 1985ರಲ್ಲಿ ಸ್ಥಾಪನೆಗೊಂಡ ಭಜನಾ ಸಂಘವು ನಂತರದ ದಿನಗಳಲ್ಲಿ ಉತ್ಸಾಹಿ ತರುಣರ ಇಚ್ಚೆಯಂತೆ ದುರ್ಗಾ ಸೇವಾ ಸಮಿತಿ ನೋಂದಾಯಿಸಿಕೊಂಡು ಭಜನಾ ಮಂದಿರ ನಿರ್ಮಾಣಗೊಂಡಿತು. ಇಲ್ಲಿ ಪ್ರತಿ ಶುಕ್ರವಾರ ಹಾಗೂ ನವರಾತ್ರಿಯಲ್ಲಿ ಭಜನೆ ನಡೆಯುತ್ತಿದೆ. ಕಳೆದ 22 ವರ್ಷಗಳಿಂದ ಗಣೇಶೋತ್ಸವ ನಡೆಸಿಕೊಂಡು ಬರಲಾಗುತ್ತಿದೆ. ಭಜನಾ ಮಂದಿರದ ಬಳಿಯಲ್ಲಿದ್ದ ದೈವ ಸಾನಿಧ್ಯದಲ್ಲಿ ದೀಪ ಇಡಲಾಗುತ್ತಿತ್ತು. ನಂತರದ ದಿನಗಳಲ್ಲಿ ದೋಷಗಳು ಕಂಡು ಬಂದಾಗ ಅಷ್ಠಮಂಗಳ ಪ್ರಶ್ನಾ ಚಿಂತನೆ ನಡೆಸಿದಾಗ ಇರುವೆರ್ ಉಳ್ಳಾಕುಲು ದೈವ ಸಾನಿಧ್ಯವಿರುವುದಾಗಿ ಕಂಡು ಬಂದಿದ್ದು ದೈವಜ್ಞರು ಹಾಗೂ ತಂತ್ರಿಗಳ ಮಾರ್ಗದರ್ಶನದಲ್ಲಿ 2018ರಲ್ಲಿ ಜೀರ್ಣೋದ್ಧಾರ ಕಾಮಗಾರಿ ಪ್ರಾರಂಭಿಸಲಾಗಿತ್ತು. ಎರಡು ವರ್ಷಗಳ ಕೊರೋನಾದಿಂದಾಗಿ ಸ್ವಲ್ಪ ಹಿನ್ನಡೆಯುಂಟಾಗಿತ್ತು. ಇದೀಗ ಎಲ್ಲರ ಸಹಕಾರದಿಂದ ಭವ್ಯ ದೈವಸ್ಥಾನ ನಿರ್ಮಾಣಗೊಂಡಿದೆ ಎಂದರು.

ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಗೀತಾ, ಸದಸ್ಯ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕ, ಇರುವೆರ್ ಉಳ್ಳಾಕುಲು ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರವೀಂದ್ರನಾಥ್ ಕಲ್ಲೂರಾಯ, ಕೋಶಾಧಿಕಾರಿ ನಾರಾಯಣ ಶೆಟ್ಟಿ ಜಿ.ಟಿ., ಶ್ರೀದುರ್ಗಾ ಸೇವಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಗೌಡ ಗೆಣಸಿನಕುಮೇರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ದೈವಸ್ಥಾನ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಾಷ್ಟಶಿಲ್ಪಿ ಲಕ್ಷ್ಮಣ ಆಚಾರ್ಯ ಗುಮ್ಮಟೆಗದ್ದೆ, ಮೇಸ್ತ್ರಿ ಮಹಾಲಿಂಗ ನಾಯ್ಕ ಮಚ್ಚಿಮಲೆಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ಸಾನ್ವಿತಾ, ಸಾರ್ವರಿ ಪ್ರಭು, ಲಿತಾ ಪ್ರಾರ್ಥಿಸಿದರು. ರಂಜಿತ್ ದೇವಸ್ಯ ಸ್ವಾಗತಿಸಿದರು. ಭಜನಾ ಮಂದಿರ ಕೋಶಾಧಿಕಾರಿ ನವೀನ್ ಕುಮಾರ್ ಜಿ.ಟಿ ವರದಿ,ಲೆಕ್ಕಪತ್ರ ಮಂಡಿಸಿದರು. ಪುರಂದರ ರೈ ನಾಲ, ಈಶ್ವರ ಎಂ.ಎಸ್. ಕಾರ್ಯಕ್ರಮ ನಿರೂಪಿಸಿ, ಮಹೇಶ್ ಕೆರೆಮನೆ ವಂದಿಸಿದರು. ಶ್ರೀದುರ್ಗಾ ಸೇವಾ ಸಮಿತಿ ಕಾರ್ಯದರ್ಶಿ ಜಗದೀಶ್ ಪೂಜಾರಿ ವಳತ್ತಡ್ಕ, ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿ ಗಂಗಾಧರ ರೈ ಕಲ್ಕೋಟೆ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿಗಳಾದ ಸುರೇಶ್ ನಾಯ್ಕ ದೇವಸ್ಯ, ಜಯಂತ್ ಕುಂಜೂರುಪಂಜ, ಕೋಶಾಧಿಕಾರಿ ರಮಾನಾಥ ಶೆಟ್ಟಿ ಮೇಗಿನಪಂಜ, ಉಪಾಧ್ಯಕ್ಷರಾದ ಬಾಲಕೃಷ್ಣ ಪೂಜಾರಿ ಮೇಗಿನಪಂಜ, ಉಮಾವತಿ ರೈ ಗೆಣಸಿನಕುಮೇರು ಅತಿಥಿಗಳನ್ನು ಶಾಲು ಹಾಕಿ ಹೂಗುಚ್ಚ ನೀಡಿ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ಬಳಿಕ ದುರ್ಗಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ನಂತರ ಟೀಮ್ ಮಂಜುಶ್ರೀ ತಂಡದವರಿಂದ ಕುಸಲ್ಡೊಂತೆ ಅಸಲ್’ ಹಾಸ್ಯ ಕಾರ್ಯಕ್ರಮ, ರಾತ್ರಿ ಅಭಿನಯ ಆರ್ಟ್ ಇವರಿಂದ ’ಯಾನ್ ಪನೋಡಾ ಏರ್ಂದ್’ ಎಂಬ ತುಳು ನಾಟಕ ನಡೆಯಿತು.

ಕುಂಜೂರುಪಂಜ ಇರುವೆರ್ ಉಳ್ಳಾಕುಲು ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಶ್ರೀದುರ್ಗಾ ಭಜನಾ ಮಂದಿರದ ವಾರ್ಷಿಕೋತ್ಸವದ ಧಾರ್ಮಿಕ ಸಭೆ

ಪುತ್ತೂರು:ಡಾ.ಬಿ.ಆರ್ ಅಂಬೇಡ್ಕರ್‌ರವರು ದೇಶಕ್ಕೆ ರೂಪಿಸಿಕೊಟ್ಟ ಸಂವಿಧಾನದಡಿಯಲ್ಲಿ ಭಾರತೀಯರಾದ ನಾವೆಲ್ಲರೂ ಸಮಾನತೆಯಿಂದ ಬಾಳಲು ಅವಕಾಶ ನೀಡಿದಂತೆ ಎಲ್ಲಾ ಸಮುದಾಯದ, ವರ್ಗದ ಜನರನ್ನು ಒಟ್ಟು ಸೇರಿಸುವ ಶಕ್ತಿಯಿರುವ ದೈವದ ಕೊಡಿಯಡಿಯೂ ತುಳುನಾಡಿ ಸಂವಿಧಾನವಾಗಿದೆ ಎಂದು ದೈವನರ್ತಕರು, ಸಿವಿಲ್ ಇಂಜಿನಿಯರ್ ಆಗಿರುವ ಡಾ ರವೀಶ್ ಪಡುಮಲೆ ಹೇಳಿದರು.
ಆರ್ಯಾಪು ಗ್ರಾಮದ ಕುಂಜೂರುಪಂಜ ಶ್ರೀದುರ್ಗಾ ಭಜನಾ ಮಂದಿರದ ೨೨ನೇ ವಾರ್ಷಿಕೋತ್ಸವ ಮತ್ತು ಇರುವೆರ್ ಉಳ್ಳಾಕುಲು ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಫೆ.೧೦ರಂದು ನಡೆದ ಧಾರ್ಮಿಕ ಸಭೆಯಲ್ಲಿ ಅವರು ಉಪನ್ಯಾಸ ನೀಡಿದರು. ದೈವ, ದೇವರ ಆರಾಧನೆಯಲ್ಲಿ ಆಡಂಬರ ಬೇಕಾಗಿಲ್ಲ. ದೈವ ದೇವರು ಆಡಂಬರ, ಬಂಗಾರ ಬಯಸುವುದಿಲ್ಲ. ಭಕ್ತ, ಶ್ರದ್ಧೆಯಿಂದ ಎಲ್ಲರೂ ಏಕಮನಸ್ಸಿನಿಂದ ತುಳುನಾಡಿದ ಪುರತಾನ ಸಂಪ್ರದಾಯ ಉಳಿಸುವ ಕಾರ್ಯವಾಗಬೇಕು. ಕುಂಜೂರುಪಂಜದಲ್ಲಿ ಉಳ್ಳಾಕುಲು ಮಾಡ ನಿರ್ಮಾಣವಾಗುವ ಮೂಲಕ ಭಕ್ತರ ಹಲವು ವರ್ಷಗಳ ಕನಸು ನನಸಾಗಿದೆ. ಇಲ್ಲಿನ ಜನತೆ ಕರಸೇವೆಯ ಮೂಲಕ ಧರ್ಮವನ್ನು ತೋರಿಸಿಕೊಟ್ಟಿದ್ದಾರೆ. ಶ್ರದ್ಧೆ, ಭಕ್ತಿಯ ಸಂಕೇತವಾಗಿ ಭವ್ಯ ಮಾಡ ನಿರ್ಮಾಣಗೊಂಡಿದೆ. ದೈವಸ್ಥಾನ ನಿರ್ಮಾಣದ ಜೊತೆಗೆ ಧರ್ಮದ ಸಂಸ್ಥಾಪನೆಯಾಗಬೇಕು. ತುಳುನಾಡಿನ ಸಂಸ್ಕಾರ ಉಳಿಸುವಲ್ಲಿ ಇಂತಹ ಸಾಧನೆ ಪೂರಕವಾಗಿದೆ. ದೈವಸ್ಥಾನದ ನಿರ್ಮಾಣದಲ್ಲಿ ಊರಿನ ಎಲ್ಲಾ ಭಕ್ತರ ಕಾಣಿಕೆಯಿದೆ. ಬ್ರಹ್ಮಕಲಶದ ಮೂಲಕ ದೈವಸ್ಥಾನ ಶುದ್ಧವಾಗುವ ಜೊತೆಗೆ ಹಿಂದುಗಳ ಮನೆ, ಮನ ಶುದ್ಧವಾಗಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಶಶಿಧರ ಎಂ ಮಾತನಾಡಿ, ಭಜನಾ ಮಂದಿರ, ಶ್ರದ್ಧಾಕೇಂದ್ರಗಳ ಜೀರ್ಣೋದ್ಧಾರದಲ್ಲಿ ನಮ್ಮ ನಾವು ತೊಡಗಿಸಿಕೊಳ್ಳುವ ಮುಖಾಂತರ ಪ್ರತಿಯೊಬ್ಬರಿಗೂ ದೇವಸ್ಥಾನದ ನಿರ್ಮಿಸಿದ ಫಲವಿದೆ. ಈ ದೈವಸ್ಥಾನದ ನಿರ್ಮಾಣದಲ್ಲಿ ಅದ್ಬುತ ರೀತಿಯಲ್ಲಿ ನಡೆದಿದ್ದು ಊತಿನ ಜನರ ಒಗ್ಗಟ್ಟು, ಪರಿಶ್ರಮಕ್ಕೆ ಸಾಕ್ಷಿಯಾಗಿದೆ. ದೇವರ ಕಾರ್ಯಕ್ರಮದಲ್ಲಿ ಎಲ್ಲ ವಿಚಾರಗಳು ಕೇಂದ್ರಿಕೃತವಾಗುತ್ತಿದ್ದು ಕುಂಜೂರುಪಂಜದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಮೂಲಕ ಸಮಾಜದ ಪರಿವರ್ತನೆಗೆ ಸಹಕಾರಿಯಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕಿಟ್ಟಣ್ಣ ರೈ ಕಲ್ಕೋಟೆ ಮಾತನಾಡಿ, ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಲ್ಲಿ ಭಕ್ತಾದಿಗಳು ಹಲವು ವಿಧದಲ್ಲಿ ಸಹಕಾರ ನೀಡಿದ್ದಾರೆ. ಎಲ್ಲರ ಸಹಕಾರದಿಂದ ಭವ್ಯ ದೈವಸ್ಥಾನ ನಿರ್ಮಾಣಗೊಂಡು ಬ್ರಹ್ಮಕಲಶ ನೆರವೇರುತ್ತಿದ್ದು ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ತಿಮ್ಮಪ್ಪ ನಾಯ್ಕ ಜಂಗಮುಗೇರು ಪ್ರಾಸ್ತಾವಿಕವಾಗಿ ಮಾತನಾಡಿ, ೧೯೮೫ರಲ್ಲಿ ಸ್ಥಾಪನೆಗೊಂಡ ಭಜನಾ ಸಂಘವು ನಂತರದ ದಿನಗಳಲ್ಲಿ ಉತ್ಸಾಹಿ ತರುಣರ ಇಚ್ಚೆಯಂತೆ ದುರ್ಗಾ ಸೇವಾ ಸಮಿತಿ ನೋಂದಾಯಿಸಿಕೊಂಡು ಭಜನಾ ಮಂದಿರ ನಿರ್ಮಾಣಗೊಂಡಿತು. ಇಲ್ಲಿ ಪ್ರತಿ ಶುಕ್ರವಾರ ಹಾಗೂ ನವರಾತ್ರಿಯಲ್ಲಿ ಭಜನೆ ನಡೆಯುತ್ತಿದೆ. ಕಳೆದ ೨೨ ವರ್ಷಗಳಿಂದ ಗಣೇಶೋತ್ಸವ ನಡೆಸಿಕೊಂಡು ಬರಲಾಗುತ್ತಿದೆ. ಭಜನಾ ಮಂದಿರದ ಬಳಿಯಲ್ಲಿದ್ದ ದೈವ ಸಾನಿಧ್ಯದಲ್ಲಿ ದೀಪ ಇಡಲಾಗುತ್ತಿತ್ತು. ನಂತರದ ದಿನಗಳಲ್ಲಿ ದೋಷಗಳು ಕಂಡು ಬಂದಾಗ ಅಷ್ಠಮಂಗಳ ಪ್ರಶ್ನಾ ಚಿಂತನೆ ನಡೆಸಿದಾಗ ಇರುವೆರ್ ಉಳ್ಳಾಕುಲು ದೈವ ಸಾನಿಧ್ಯವಿರುವುದಾಗಿ ಕಂಡು ಬಂದಿದ್ದು ದೈವಜ್ಞರು ಹಾಗೂ ತಂತ್ರಿಗಳ ಮಾರ್ಗದರ್ಶನದಲ್ಲಿ ೨೦೧೮ರಲ್ಲಿ ಜೀರ್ಣೋದ್ಧಾರ ಕಾಮಗಾರಿ ಪ್ರಾರಂಭಿಸಲಾಗಿತ್ತು. ಎರಡು ವರ್ಷಗಳ ಕೊರೋನಾದಿಂದಾಗಿ ಸ್ವಲ್ಪ ಹಿನ್ನಡೆಯುಂಟಾಗಿತ್ತು. ಇದೀಗ ಎಲ್ಲರ ಸಹಕಾರದಿಂದ ಭವ್ಯ ದೈವಸ್ಥಾನ ನಿರ್ಮಾಣಗೊಂಡಿದೆ ಎಂದರು.

ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಗೀತಾ, ಸದಸ್ಯ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕ, ಇರುವೆರ್ ಉಳ್ಳಾಕುಲು ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರವೀಂದ್ರನಾಥ್ ಕಲ್ಲೂರಾಯ, ಕೋಶಾಧಿಕಾರಿ ನಾರಾಯಣ ಶೆಟ್ಟಿ ಜಿ.ಟಿ., ಶ್ರೀದುರ್ಗಾ ಸೇವಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಗೌಡ ಗೆಣಸಿನಕುಮೇರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:
ದೈವಸ್ಥಾನ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಾಷ್ಟಶಿಲ್ಪಿ ಲಕ್ಷ್ಮಣ ಆಚಾರ್ಯ ಗುಮ್ಮಟೆಗದ್ದೆ, ಮೇಸ್ತ್ರಿ ಮಹಾಲಿಂಗ ನಾಯ್ಕ ಮಚ್ಚಿಮಲೆಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ಸಾನ್ವಿತಾ, ಸಾರ್ವರಿ ಪ್ರಭು, ಲಿತಾ ಪ್ರಾರ್ಥಿಸಿದರು. ರಂಜಿತ್ ದೇವಸ್ಯ ಸ್ವಾಗತಿಸಿದರು. ಭಜನಾ ಮಂದಿರ ಕೋಶಾಧಿಕಾರಿ ನವೀನ್ ಕುಮಾರ್ ಜಿ.ಟಿ ವರದಿ,ಲೆಕ್ಕಪತ್ರ ಮಂಡಿಸಿದರು. ಪುರಂದರ ರೈ ನಾಲ, ಈಶ್ವರ ಎಂ.ಎಸ್. ಕಾರ್ಯಕ್ರಮ ನಿರೂಪಿಸಿ, ಮಹೇಶ್ ಕೆರೆಮನೆ ವಂದಿಸಿದರು. ಶ್ರೀದುರ್ಗಾ ಸೇವಾ ಸಮಿತಿ ಕಾರ್ಯದರ್ಶಿ ಜಗದೀಶ್ ಪೂಜಾರಿ ವಳತ್ತಡ್ಕ, ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿ ಗಂಗಾಧರ ರೈ ಕಲ್ಕೋಟೆ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿಗಳಾದ ಸುರೇಶ್ ನಾಯ್ಕ ದೇವಸ್ಯ, ಜಯಂತ್ ಕುಂಜೂರುಪಂಜ, ಕೋಶಾಧಿಕಾರಿ ರಮಾನಾಥ ಶೆಟ್ಟಿ ಮೇಗಿನಪಂಜ, ಉಪಾಧ್ಯಕ್ಷರಾದ ಬಾಲಕೃಷ್ಣ ಪೂಜಾರಿ ಮೇಗಿನಪಂಜ, ಉಮಾವತಿ ರೈ ಗೆಣಸಿನಕುಮೇರು ಅತಿಥಿಗಳನ್ನು ಶಾಲು ಹಾಕಿ ಹೂಗುಚ್ಚ ನೀಡಿ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ಬಳಿಕ ದುರ್ಗಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ನಂತರ ಟೀಮ್ ಮಂಜುಶ್ರೀ ತಂಡದವರಿಂದ ಕುಸಲ್ಡೊಂತೆ ಅಸಲ್’ ಹಾಸ್ಯ ಕಾರ್ಯಕ್ರಮ, ರಾತ್ರಿ ಅಭಿನಯ ಆರ್ಟ್ ಇವರಿಂದ ’ಯಾನ್ ಪನೋಡಾ ಏರ್ಂದ್’ ಎಂಬ ತುಳು ನಾಟಕ ನಡೆಯಿತು.

LEAVE A REPLY

Please enter your comment!
Please enter your name here