ಫೆ.15 (ನಾಳೆ); ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದ ವಠಾರದಲ್ಲಿ ಮ್ಯಾಟ್ ಕಬಡ್ಡಿ ಪಂದ್ಯಾಟ

0

ನಿಡ್ಪಳ್ಳಿ; ಮುರಳಿ ಅಣ್ಣ ಅಭಿಮಾನಿ ಬಳಗ- ನಿಡ್ಪಳ್ಳಿ ಇದರ ಆಶ್ರಯದಲ್ಲಿ ತಾಲೂಕು ಅಮೆಚೂರು ಅಸೋಸಿಯೇಷನ್ ಇದರ ಸಹಭಾಗಿತ್ವದಲ್ಲಿ ದಿ.ಮುರಳೀಕೃಷ್ಣ ಭಟ್ ಮುಂಡೂರು ನಿಡ್ಪಳ್ಳಿ ಇವರ ಸ್ಮರಣಾರ್ಥ ಮ್ಯಾಟ್ ಅಂಕಣದ ಹೊನಲು ಬೆಳಕಿನ 60 ಕೆ.ಜಿ ವಿಭಾಗ ಮತ್ತು ಮುಕ್ತ ಕಬಡ್ಡಿ ಪಂದ್ಯಾಟ ಫೆ 15 ರಂದು ಶ್ರೀ ಶಾಂತದುರ್ಗಾ ದೇವಸ್ಥಾನದ ವಠಾರದಲ್ಲಿ‌ ನಡೆಯಲಿದೆ.

ರಾತ್ರಿ ಗಂಟೆ 8.30 ಕ್ಕೆ ಕೀರ್ತಿಶೇಷ ಜೀವಂಧರ ಆರಿಗ ವೇದಿಕೆಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಪಂದ್ಯಾಟ ಉದ್ಘಾಟಿಸಲಿರುವರು.ಶ್ರೀ ಶಾಂತದುರ್ಗಾ ದೇವಸ್ಥಾನದ ಆಡಳಿತ ಮಂಡಳಿ ಗೌರವಾಧ್ಯಕ್ಷ ಪ್ರಮೋದ್ ಆರಿಗ ಅಧ್ಯಕ್ಷತೆ ವಹಿಸಲಿದ್ದು ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು.ಫೆ.16 ರಂದು ಬೆಳಿಗ್ಗೆ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here