ಆತೂರು: 11ನೇ ವರ್ಷದ ಹಫ್ವಾ ಕುಟುಂಬ ಸಮ್ಮಿಲನ

0

ಮೊಬೈಲ್ ಬಳಕೆ ಸಾಧನೆಗೆ ಅಡ್ಡಿಯಾಗದಿರಲಿ-ರಫೀಕ್ ಮಾಸ್ಟರ್

ರಾಮಕುಂಜ: ಅತಿಯಾದ ಮೊಬೈಲ್ ಬಳಕೆಯು ಇಂದು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಅಡ್ಡಿಪಡಿಸುತ್ತಿದೆ ಎಂದು ಚಿಂತಕ ರಫೀಕ್ ಮಾಸ್ಟರ್ ಆತೂರು ಹೇಳಿದರು.


ಅವರು ಮರ್ಹೂಂ ಹಾಜಿ ಅಬೂಬಕ್ಕರ್ ಫ್ಯಾಮಿಲಿ ವೆಲ್ಫೇರ್ ಅಸೋಸಿಯೇಷನ್ ಆತೂರು ಇದರ ಹನ್ನೊಂದನೇ ವರ್ಷದ ಹಫ್ವಾ ಕುಟುಂಬ ಸಮ್ಮಿಲನದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳ ಬೆಳವಣಿಗೆಯಲ್ಲಿ ಸದಾ ಕ್ರಿಯಾಶೀಲರಾಗಿ ಅವರನ್ನು ಹೆಜ್ಜೆ ಹೆಜ್ಜೆಗೂ ಗಮನಿಸುತ್ತಾ ಒಳಿತಿನ ಹಾದಿಯಲ್ಲಿ ಸಾಗುವಂತೆ ಪ್ರೇರಣೆ ನೀಡಿ ಸಮಾಜದ ಶ್ರೇಷ್ಠ ಸಾಧಕರಾಗಿ ಪರಿವರ್ತನೆ ಮಾಡುವ ಜವಾಬ್ದಾರಿ ಪೋಷಕರ ಮೇಲಿದೆ ಎಂದರು.


ಜಿ.ಎಂ.ಮುಹಮ್ಮದ್ ಕುಞಿ ಅಧ್ಯಕ್ಷತೆ ವಹಿಸಿದ್ದರು. ಉಬೈದುಲ್ಲಾ ಆಶ್ರಫಿ ಬಂದ್ಯೋಡು ಉದ್ಘಾಟಿಸಿದರು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಡ್ವೋಕೇಟ್ ಖಲಂದರ್ ಪೆರ್ಜಿ ಸೇರಿದಂತೆ ನಾಲ್ವರು ಸಾಧಕರನ್ನು ಸನ್ಮಾನಿಸಲಾಯಿತು. ಅಗಲಿದ ಗೌರವಾಧ್ಯಕ್ಷರಾದ ಅಬ್ದುಲ್ ರಹಿಮಾನ್ ಹಾಜಿ ಬಡ್ಡಮೆ ಹಾಗೂ ಸಲಹೆಗಾರ ಇಬ್ರಾಹಿಂ ಜೋಗಿಬೆಟ್ಟುರವರ ಅನುಸ್ಮರಣೆ ನಡೆಯಿತು.


ಕಾರ್ಯಕ್ರಮದಲ್ಲಿ ಎ.ಎಂ.ಅಬೂಬಕ್ಕರ್ ಹಾಜಿ, ಎನ್. ಇಬ್ರಾಹಿಂ ಹಾಜಿ ಜೇಡರಪೇಟೆ, ಇಕ್ಬಾಲ್ ಪಿ.ಬಿ., ಇಬ್ರಾಹಿಂ ಹಾಜಿ, ಪುತ್ತುಮೋನು ಬಾವ, ಯೂಸುಫ್ ಮದನಿ, ರಶೀದ್ ಹಾಜಿ, ಸಿರಾಜ್ ಬಡ್ಡಮೆ, ಎ.ಎಂ.ಮೋನುಞಿ, ಮುಸ್ತಾಫಾ ಮಠ, ಹಾಜಿ ಹುಸೈನ್ ಸಿರಾಜ್, ಸುಲೈಮಾನ್ ಹಾಜಿ ಬೀಜತ್ತಲಿ, ಬಶೀರ್ ಪೆರ್ಜಿ, ಚೆರಿಮೋನು ಅಜಿಲಮೊಗರು, ಅಬ್ದುಲ್ ಖಾದರ್ ಆರ್., ಕೆ.ಅಬ್ದುಲ್ ರಜಾಕ್, ಅಶ್ರಫ್ ಕರಾಯ, ಎ.ಎಸ್ ಹಮೀದ್ ಮಿತ್ತೂರು, ಯಾಕೂಬ್ ಮದನಿ, ಜಲೀಲ್ ದಾರಿಮಿ, ಹೈದರ್ ಕಲಾಯಿ, ಹಂಝ ಸಾಖಾಫಿ, ಹಮೀದ್ ಮುಸ್ಲಿಯಾರ್, ಶಾಕಿರ್ ನಿಝಮಿ, ಬದ್ರುದ್ಧಿನ್ ಸಅದಿ, ಅಬ್ದುಲ್ ಖಾದರ್ ಎ.ಎಸ್, ಹಾಜಿ ರಫೀಕ್ ಮಕ್ಕ, ಮುಸ್ತಾಫಾ ಜೋಗಿಬೆಟ್ಟು, ಝಕರಿಯ ಮುಸ್ಲಿಯಾರ್, ಹಂಝ ಕೋಡಿಂಬಾಡಿ, ಅಬೂಬಕ್ಕರ್ ಎನ್, ಉಸ್ಮಾನ್ ಕಲ್ಲೆರಿ, ಹಸೈನಾರ್ ಹಾಜಿ ಕೊಡಿಪ್ಪಾಡಿ, ನವಾಝ್ ಪೇರಮೊಗರು, ವೈ. ಇಬ್ರಾಹಿಂ, ಬಶೀರ್ ಶಾಹ್, ಹಂಝ ಬಡ್ಡಮೆ, ಎ.ಎಸ್.ಅಬ್ದುಲ್ ಖಾದರ್, ರಹಮಾನ್ ಬಡ್ಡಮೆ, ಶೌಕತ್ ಜೇಡರಪೇಟೆ, ಖಾದರ್ ಡಿಲೈಟ್, ಉಮರ್ ಪಿಲಿಕುಡೆಲ್, ಸಫ್ವಾನ್ ಜೋಗಿಬೆಟ್ಟು, ಅಬ್ದುಲ್ ರಹಿಮಾನ್, ನಾಸಿರ್ ಕೆಮ್ಮಾರ ಸೇರಿದಂತೆ ಕುಟುಂಬದ ಹಲವರು ಉಪ್ಥಿತರಿದ್ದರು. ಬೆಳಗ್ಗೆ ನಡೆದ ಅಧ್ಯಯನ ಶಿಬಿರ ಕಾರ್ಯಕ್ರಮದಲ್ಲಿ ಜುನೈದ್ ಜೆಫ್ರಿ ತಂಙಲ್ ದುಆ ಆಶೀರ್ವಚನ ಮಾಡಿದರು. ಸ್ಥಳೀಯ ಖತೀಬ್ ಆಸೀಫ್ ಅಜ್ಹರಿ ಉದ್ಘಾಟಿಸಿ ಸ್ವಲಾಹುದ್ದೀನ್ ಸಖಾಫಿ ದಿಕ್ಸೂಚಿ ಭಾಷಣ ಮಾಡಿದರು.


ಪ್ರಧಾನ ಕಾರ್ಯದರ್ಶಿ ಹಕೀಮ್ ಕೆಮ್ಮಾರ ಸ್ವಾಗತಿಸಿ, ಝುಬೈರ್ ಕುಂತೂರು ಕಾರ್ಯಕ್ರಮ ನಿರ್ವಹಣೆ ಮಾಡಿದರು.

LEAVE A REPLY

Please enter your comment!
Please enter your name here