ಬಡಗನ್ನೂರು: ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇನಾಲ ಮತ್ತು ಈಶ್ವರಮಂಗಲ ಒಕ್ಕೂಟದ ಸದಸ್ಯರಿಂದ ದೇವಸ್ಥಾನದ ಪರಿಸರದಲ್ಲಿ ಸ್ವಚ್ಚತೆಯನ್ನು ಶ್ರಮದಾನ ಫೆ.16 ರಂದು ನಡೆಸಿದರು.

ಈ ಸಂದರ್ಭದಲ್ಲಿ ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ನಾಗಪ್ಪ ಗೌಡ ಬೊಮ್ಮಟ್ಟಿ ಮಾತನಾಡಿ ,ಫೆ. 11 ಗೊನೆ ಮುಹೂರ್ತ ನಡೆದಿದ್ದು, ಫೆ.23 ರಂದು ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಮತ್ತು ಫೆ.23 ರಿಂದ ಮಾ.4 ರ ತನಕ ನಡೆಯಲಿರುವ ಎಲ್ಲಾ ಜಾತ್ರೋತ್ಸವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿವರ್ಗ , ಹಾಗೂ ಸರ್ವಸದಸ್ಯರ ಸಂಪೂರ್ಣ ಸಹಕಾರ ನೀಡುವಂತೆ ವಿನಂತಿಸಿದ ಅವರು ಇಂದು ನಡೆಸಲಾದ ಶ್ರಮದಾನದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕರು ಹರೀಶ್ ಕುಲಾಲ್, ಜಾತ್ರೋತ್ಸವ ಸಮಿತಿಯ ಕಾರ್ಯದರ್ಶಿ ಪೂರ್ಣಚಂದ್ರ ರೈ ನೆಲ್ಲಿತಡ್ಕ, ಜೀರ್ಣೋಧರ ಸಮಿತಿಯ ಜತೆ ಕಾರ್ಯದರ್ಶಿ ವಿಕ್ರಂ ರೈ ಸಾಂತ್ಯ, ಈಶ್ವರಮಂಗಳ ಒಕ್ಕೂಟದ ಪದಾಧಿಕಾರಿ ಯಶೋದ, ರೋಹಿಣಿ, ಮಮತಾ, ಮೇನಾಲ ಒಕ್ಕೂಟದ ಪದಾಧಿಕಾರಿಗಳಾದ ಶೀನ ಎಸ್, ಬಾಲಕೃಷ್ಣ ರೈ ಮೇನಾಲ ಹಾಗೂ, ಅಕ್ಷತಾ, ಉಪಸ್ಥಿತರಿದ್ದರು. 2 ಒಕ್ಕೂಟದಿಂದ ಸುಮಾರು 125 ಮಂದಿ ಸದಸ್ಯರು ಶ್ರಮದಾನದಲ್ಲಿ ಭಾಗವಹಿಸಿದರು. ಸೇವಾಪ್ರತಿನಿಧಿಗಳಾದ ಸುಂದರ್ ಜಿ ಹಾಗೂ ಗಾಯತ್ರಿಯವರು ಸಹಕರಿಸಿದರು.