ಪುತ್ತೂರು: ಶಾಂತಿಗೋಡು ಗ್ರಾಮದ ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಹಾಗೂ ದೈವಗಳ ನೇಮೋತ್ಸವವು ಫೆ.14ರಿಂದ ಪ್ರಾರಂಭಗೊಂಡು ಫೆ.16ರ ತನಕ ವಿವಿಧ ವೈದಿಕ, ತಾಂತ್ರಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆದ ಜಾತ್ರೋತ್ಸವದಲ್ಲಿ ಫೆ.14ರಂದು ಬೆಳಿಗ್ಗೆ ಕುಮಾರದಾರ ನದಿಯಲ್ಲಿ ಗಂಗಾ ಪೂಜೆ, ಕಲಶ ಜಲ ಮೆರವಣಿಗೆ, ರಾತ್ರಿ ದೇವರಿಗೆ ರಂಗಪೂಜೆ ನಡೆಯಿತು. ಫೆ.15ರಂದು ಪೂರ್ವಾಹ್ನ ಗಣಹೋಮ, ಸೀಯಾಳಾಭಿಷೇಕ, ಪವಮಾನಾಭಿಷೇಕ, ನವಕ ಕಲಶಾಭಿಷೇಕ, ಶ್ರೀ ಲಕ್ಷ್ಮೀಪ್ರೀಯ ಭಜನಾ ಮಂಡಳಿ ಬೆಳಂದೂರು ಇವರಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ದೈವಗಳ ಭಂಡಾರ ತೆಗೆದ ಬಳಿಕ ಶ್ರೀ ಮಹಾವಿಷ್ಣುಮೂರ್ತಿ ಭಜನಾ ಮಂಡಳಿ ವೀರಮಂಗಲ ಇವರಿಂದ ದಾಸ ಸಂಕೀರ್ತನೆ, ಕಾಳಿಕಾ ನಾಟ್ಯಾಲಯ ವೀರಮಂಗಲ ಮತ್ತು ಸವಣೂರು ಇವರಿಂದ ಭರತನಾಟ್ಯ, ರಾತ್ರಿ ದೇವರ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಅನ್ನಸಂತರ್ಪಣೆ, ಉಳ್ಳಾಕುಲು, ಹುಲಿಭೂತ, ಕೊಡಮಣಿತ್ತಾಯ, ಅಂಙಣ ಪಂಜುರ್ಲಿ ದೈವಗಳ ನೇಮ, ಫೆ.16ರಂದು ಬೆಳಿಗ್ಗೆ ಶ್ರೀರಕ್ತೇಶ್ವರಿ, ಶಿರಾಡಿ ರಾಜನ್ ದೈವ, ಗುಳಿಗ ದೈವಗಳ ನೇಮೋತ್ಸವ ನಡೆಯಿತು.
ಫೆ.23 ದೊಂಪದ ಬಲಿ:
ಕ್ಷೇತ್ರದ ಶಿರಾಡಿ ದೈವದ ದೊಂಪದ ಬಲಿ ನೇಮೋತ್ಸವವು ಫೆ.23ರಂದು ನಡೆಯಲಿದ್ದು ಫೆ.23ರಂದು ರಾತ್ರಿ ಭಂಡಾರ ತೆಗೆದು ಫೆ.23ರಂದು ಬೆಳಿಗ್ಗೆ ವೀರಮಂಗಲ ಶ್ರೀ ಶಿರಾಡಿ ರಾಜನ್ ದೈವದ ದೊಂಪದ ಬಲಿ ನೇಮೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.